ಕೊರೊನಾ ಕಡಿಮೆಯಾದ್ರೆ ಬೇಗ ಡಿಸ್ಚಾರ್ಜ್! ಹೊಸ ಮಾರ್ಗಸೂಚಿ ಏನು? ಯಾಕೆ?

ಕೇಂದ್ರ ಆರೋಗ್ಯ ಇಲಾಖೆಯು ಕೊರೊನಾ ಸೋಂಕಿತ ರೋಗಿಗಳ ಡಿಸ್ಚಾರ್ಜ್ ಕುರಿತಾದ ಮಾರ್ಗಸೂಚಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಹೊಸ ಮಾರ್ಗಸೂಚಿ ಪ್ರಕಾರ ಅಲ್ಪ ಪ್ರಮಾಣದ ಲಕ್ಷಣವಿದ್ರೆ 10 ದಿನ ಮಾತ್ರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು. ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸಬೇಕು. 3 ದಿನಗಳ ಕಾಲ ಜ್ವರ ಇಲ್ಲದಿದ್ರೆ ಡಿಸ್ಚಾರ್ಜ್ ಮಾಡಬೇಕು. ಡಿಸ್ಚಾರ್ಜ್ ವೇಳೆ ಕೊರೊನಾ ಸ್ಯಾಂಪಲ್ ಪರೀಕ್ಷೆ ಅಗತ್ಯವಿಲ್ಲ ಎಂದು ಹೊಸ ಕ್ರಮಗಳನ್ನು ಅನ್ವಯಗೊಳಿಸಿದೆ. ದೇಶದಲ್ಲಿ ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿರುವವರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದಿರುವುದನ್ನು ತಪ್ಪಿಸಲು […]

ಕೊರೊನಾ ಕಡಿಮೆಯಾದ್ರೆ ಬೇಗ ಡಿಸ್ಚಾರ್ಜ್! ಹೊಸ ಮಾರ್ಗಸೂಚಿ ಏನು? ಯಾಕೆ?
Follow us
ಸಾಧು ಶ್ರೀನಾಥ್​
|

Updated on:May 09, 2020 | 4:46 PM

ಕೇಂದ್ರ ಆರೋಗ್ಯ ಇಲಾಖೆಯು ಕೊರೊನಾ ಸೋಂಕಿತ ರೋಗಿಗಳ ಡಿಸ್ಚಾರ್ಜ್ ಕುರಿತಾದ ಮಾರ್ಗಸೂಚಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಹೊಸ ಮಾರ್ಗಸೂಚಿ ಪ್ರಕಾರ ಅಲ್ಪ ಪ್ರಮಾಣದ ಲಕ್ಷಣವಿದ್ರೆ 10 ದಿನ ಮಾತ್ರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕು. ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳಿಸಬೇಕು. 3 ದಿನಗಳ ಕಾಲ ಜ್ವರ ಇಲ್ಲದಿದ್ರೆ ಡಿಸ್ಚಾರ್ಜ್ ಮಾಡಬೇಕು. ಡಿಸ್ಚಾರ್ಜ್ ವೇಳೆ ಕೊರೊನಾ ಸ್ಯಾಂಪಲ್ ಪರೀಕ್ಷೆ ಅಗತ್ಯವಿಲ್ಲ ಎಂದು ಹೊಸ ಕ್ರಮಗಳನ್ನು ಅನ್ವಯಗೊಳಿಸಿದೆ.

ದೇಶದಲ್ಲಿ ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿರುವವರಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದಿರುವುದನ್ನು ತಪ್ಪಿಸಲು ಈ ಪ್ಲ್ಯಾನ್ ಮಾಡಲಾಗಿದೆ. ದೇಶದಲ್ಲಿ ಶೇ.80ರಷ್ಟು ರೋಗಿಗಳಿಗೆ ಅಲ್ಪಪ್ರಮಾಣದ ಕೊರೊನಾ ಲಕ್ಷಣಗಳು ಮಾತ್ರ ಇವೆ. ಈ ಲಕ್ಷಣ ಇರುವವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿಲ್ಲ. ತಾವಾಗಿಯೇ ಕೊರೊನಾ ಸೋಂಕಿನಿಂದ ಗುಣಮುಖರಾಗ್ತಾರೆ. ಹೀಗಾಗಿ ಈ ರೀತಿ ಇರುವವರನ್ನು ಆಸ್ಪತ್ರೆಗೆ ದಾಖಲಿಸಿದರೆ ಗಂಭೀರ ಸ್ಥಿತಿಯಲ್ಲಿ ಇರುವವರಿಗೆ ಆಸ್ಪತ್ರೆಯ ಬೆಡ್ ಸಿಗಲ್ಲ. ಈ ಸಮಸ್ಯೆ ಪರಿಹರಿಸಲು ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಡಿಸ್ಚಾರ್ಜ್ ಬಳಿಕ ರೋಗಿಗಳು ಮನೆಯಲ್ಲೇ 7 ದಿನ ಐಸೋಲೇಷನ್​ನಲ್ಲಿ ಇರಬೇಕು. ರೋಗಿಗಳಿಗೆ ಏನಾದರೂ ಉಸಿರಾಟದ ಸಮಸ್ಯೆಯಾದರೆ ಡೇಡಿಕೇಟೆಡ್ ಕೊವಿಡ್ ಹೆಲ್ತ್ ಸೆಂಟರ್ ಗೆ ದಾಖಲಿಸಬೇಕು. ಆಸ್ಪತ್ರೆಯಿಂದ ರೋಗಿಗಳು ಡಿಸ್ಚಾರ್ಜ್ ಆದ ಬಳಿಕ ಜ್ವರ, ಕಫ, ಉಸಿರಾಟದ ಸಮಸ್ಯೆ ಎದುರಾದ್ರೆ ಕೊವಿಡ್ ಕೇರ್ ಸೆಂಟರ್ ಅಥವಾ ರಾಜ್ಯದ ಹೆಲ್ಪ್ ಲೈನ್ ಸಂಪರ್ಕ ಮಾಡಬೇಕು.

14ನೇ ದಿನಕ್ಕೆ ಟೆಲಿ ಕಾನ್ಫರೆನ್ಸ್ ಮೂಲಕ ವೈದ್ಯರು ರೋಗಿಯನ್ನ ಸಂಪರ್ಕ ಮಾಡುತ್ತಾರೆ. ಇನ್ನು ಸಾಮಾನ್ಯ ರೋಗಿಗಳನ್ನು ಕೊವಿಡ್ ಹೆಲ್ತ್ ಕೇರ್ ಸೆಂಟರ್ ಗೆ ದಾಖಲು ಮಾಡಬೇಕು. 3 ದಿನ ಶೇ.95ರಷ್ಟು ಸ್ವಂತ ಶಕ್ತಿ ಮೇಲೆ ಉಸಿರಾಡುವಂತಿದ್ರೆ ಈ ರೀತಿಯ ರೋಗಿಗಳನ್ನು ಡಿಸ್ಚಾರ್ಜ್ ಮಾಡಬೇಕು. ಇನ್ನು ಗಂಭೀರ ಸ್ಥಿತಿಯಲ್ಲಿರುವವರಿಗೆ RT-PCR ಪರೀಕ್ಷೆ ಕಡ್ಡಾಯ. RT-PCR ಪರೀಕ್ಷೆಯಲ್ಲಿ ನೆಗೆಟಿವ್ ಬಂದ್ರೆ ಡಿಸ್ಚಾರ್ಜ್ ಮಾಡಬಹುದು.

Published On - 4:43 pm, Sat, 9 May 20

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ