Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

Whisky Bottle: ಈ ವಿಸ್ಕಿಗೆ ಸುಮಾರು 250 ವರ್ಷದ ಇತಿಹಾಸವಿದೆ. ಈ ಬಾಟಲಿಯನ್ನು ಈಗ 1,02,63,019 ರೂ.ಗೆ ಹರಾಜಿನಲ್ಲಿ ಖರೀದಿಸಲಾಗಿದೆ.

Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!
ವಿಶ್ವದ ಹಳೆಯ ವಿಸ್ಕಿ ಬಾಟಲ್
Follow us
| Updated By: ಸುಷ್ಮಾ ಚಕ್ರೆ

Updated on: Jul 17, 2021 | 7:29 PM

ಸಾವಿರಾರು ರೂ. ಹಣ ಕೊಟ್ಟು ಯಾವ್ಯಾವುದೋ ಬ್ರ್ಯಾಂಡ್​ನ ಆಲ್ಕೋಹಾಲ್ ಕುಡಿಯುವವರಿಗೇನೂ ನಮ್ಮಲ್ಲಿ ಕಡಿಮೆಯಿಲ್ಲ. ಕೆಲವೊಮ್ಮೆ ವಿದೇಶಗಳಿಂದ ಲಕ್ಷಾಂತರ ರೂ. ಮೌಲ್ಯದ ವೈನ್, ಬಿಯರ್, ವಿಸ್ಕಿಯನ್ನು ತರಿಸಿ ಕುಡಿಯುವವರೂ ಇದ್ದಾರೆ. ಆದರೆ, ಇಲ್ಲೊಂದು ವಿಸ್ಕಿ ಬಾಟಲಿಗೆ ಬರೋಬ್ಬರಿ 1 ಕೋಟಿ ರೂ. ನೀಡಲಾಗಿದೆಯಂತೆ. 1 ಕೋಟಿ ರೂ.ಗೆ ವಿಸ್ಕಿ ಬಾಟಲಿಯನ್ನು ಹರಾಜಿನಲ್ಲಿ ಪಡೆಯಲಾಗಿದ್ದು, ಈ ಸುದ್ದಿ ಕೇಳಿಯೇ ಮದ್ಯಪ್ರಿಯರಿಗೆ ಅಮಲು ಏರಿದೆಯಂತೆ. ಇನ್ನೇನಾದರೂ ಈ ವಿಶ್ವದ ದುಬಾರಿ ವಿಸ್ಕಿಯನ್ನು ಕುಡಿದರೆ ಅವರ ಗತಿ ಏನಾಗಬಹುದು!

ಅಷ್ಟಕ್ಕೂ 1 ಕೋಟಿ ರೂ. ಕೊಡುವಂಥದ್ದು ಈ ವಿಸ್ಕಿ ಬಾಟಲಿಯಲ್ಲೇನಿದೆ? ಎಂದು ನಿಮಗೆ ಪ್ರಶ್ನೆ ಕಾಡುತ್ತಿರಬಹುದು. ಇದು ಅಂತಿಂಥ ವಿಸ್ಕಿಯಲ್ಲಿ ಸ್ವಾಮಿ! ಈ ವಿಸ್ಕಿ ಬಾಟಲಿ ಇಡೀ ವಿಶ್ವದ ಅತಿ ಪುರಾತನ ವಿಸ್ಕಿಯಾಗಿದೆ. ಹಳೆಯದಾದಷ್ಟೂ ಅದಕ್ಕೆ ಬೆಲೆ ಜಾಸ್ತಿಯಾದ್ದರಿಂದ ಈ ವಿಸ್ಕಿ ಬಾಟಲಿಯನ್ನು 1 ಕೋಟಿ ರೂ. ಹರಾಜು ಹಾಕಲಾಗಿದೆ.

Whisky Bottle

ವಿಶ್ವದ ಹಳೆಯ ವಿಸ್ಕಿ ಬಾಟಲ್

ಈ ವಿಸ್ಕಿಗೆ ಸುಮಾರು 250 ವರ್ಷದ ಇತಿಹಾಸವಿದೆ. ಈ ಬಾಟಲಿಯನ್ನು ಈಗ 1,02,63,019 ರೂ.ಗೆ ಹರಾಜಿನಲ್ಲಿ ಖರೀದಿಸಲಾಗಿದೆ. 1860ರಲ್ಲಿ ಈ ವಿಸ್ಕಿಯನ್ನು ಬಾಟಲಿಗೆ ಹಾಕಲಾಗಿದ್ದು, ಆದರೆ, ಇದರೊಳಗಿನ ವಿಸ್ಕಿಯನ್ನು ಅದಕ್ಕಿಂತಲೂ ಶತಮಾನಗಳಷ್ಟು ಹಳೆಯದು ಎನ್ನಲಾಗಿದೆ. ಈ ವಿಸ್ಕಿ ಒಂದು ಕಾಲದಲ್ಲಿ ಜಾನ್ ಫೀರ್​ಪಾಯಿಂಟ್ ಮೊರ್ಗನ್ ಎಂಬ ಫೈನಾನ್ಷಿಯರ್ ಪಾಲಾಗಿತ್ತು. ಅವರ ಮರಣದ ನಂತರ ಅವರ ಎಸ್ಟೇಟ್​ನಿಂದ ಈ ವಿಸ್ಕಿ ಬಾಟಲಿಯನ್ನು ತೆಗೆದುಕೊಂಡು ಬರಲಾಗಿತ್ತು.

ಒಟ್ಟಾರೆ, ಜಗತ್ತಿನ ಅತಿ ಹಳೆಯ ವಿಸ್ಕಿ ಈಗ ಮತ್ತೆ ಸುದ್ದಿಯಾಗಿದ್ದು, ಈ ಬಾಟಲಿಯನ್ನು ಹರಾಜು ಹಿಡಿದವನ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ:Viral Video: ಈ ಮಕ್ಕಳ ಫೈಟಿಂಗ್ ಮುಂದೆ WWE ಶೋ ಕೂಡ ವೇಸ್ಟ್; ಸುಳ್ಳೆನಿಸಿದರೆ ಈ ವಿಡಿಯೋ ನೋಡಿ…

ಇದನ್ನೂ ಓದಿ: Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

(This Whiskey Bottle Sold at Auction For Over Rs 1 Crore Do You Know the specialty)

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ