ಪೊಲೀಸರು ಅಪರಾಧಿಗಳನ್ನು ಹೀಗೂ ಕರೆದೊಯ್ಯುತ್ತಾರಾ?

Viral Video: ಉತ್ತರ ಪ್ರದೇಶ ಪೊಲೀಸರು ಅಪರಾಧಿಯನ್ನು ಕರೆದೊಯ್ಯುವ ಹೊಸತೊಂದು ವಿಧಾನವನ್ನು ಅನ್ವೇಷಿಸಿದ್ದಾರೆ! ಇದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.


ಪೊಲೀಸರು ಹೀಗೂ ಅಪರಾಧಿಗಳನ್ನು ಕರೆದೊಯ್ಯುತ್ತಾರಾ ಎಂದು ಅನುಮಾನದಿಂದ ನೋಡಬೇಡಿ. ಕಾರಣ, ಉತ್ತರ ಪ್ರದೇಶದಲ್ಲಿ ಪೊಲೀಸರು ಈ ಪ್ರಯೋಗವನ್ನು ಮಾಡಿಯಾಗಿದೆ. ಪೊಲೀಸರ ಒಳ್ಳೇತನಕ್ಕೆ ಆಗಾಗ್ಗೆ ಸಾಕ್ಷಿಗಳು ಸಿಗುತ್ತಲೇ ಇರುತ್ತವೆ. ಆದರೆ ಯುಪಿ ಪೊಲೀಸರ ಉದಾರ ಮನಸ್ಸು ಎಲ್ಲದಕ್ಕಿಂತ ದೊಡ್ಡದು ಅನ್ನೋದನ್ನ ಈ ವಿಡಿಯೋ ರುಜುವಾತು ಮಾಡಿದೆ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರೋ ವಿಡಿಯೋ ನೋಡಿ ನೆಟ್ಟಿಗರು ದಂಗಾಗಿ ಹೋಗಿದ್ದಾರೆ.

ವಿಡಿಯೊದಲ್ಲಿ ಪೊಲೀಸರು ಒಂದು ಬೈಕ್​ನಲ್ಲಿ ಸಂಚರಿಸುತ್ತಿದ್ದಾರೆ. ಹಿಂದೆ ಕುಳಿತ ಪೊಲೀಸ್ ಅಪರಾಧಿಯೊಬ್ಬನ ಬೈಕಿನ ಹ್ಯಾಂಡಲ್​ ಅನ್ನು ಹಿಡಿದು ಆತನನ್ನು ಅವನ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಸಂಚರಿಸುತ್ತಿದ್ದಾರೆ. ವಿಡಿಯೊದಲ್ಲಿ ಪೊಲೀಸರು ಹಾಗೂ ಬೈಕ್ ಸವಾರ ಈರ್ವರೂ ಹೆಲ್ಮೆಟ್ ಧರಿಸಿಲ್ಲ. ಪೊಲೀಸರು ಯಾವ ಕಾರಣಕ್ಕೆ ಸವಾರನನ್ನು ಆ ರೀತಿ ಒಯ್ಯುತ್ತಿದ್ದಾರೆ ಎಂದು ಇನ್ನಷ್ಟೇ ತಿಳಿದುಬರಬೇಕಿದೆ. ಇನ್ಸ್ಟಾಗ್ರಾಮ್​ನ ಪೇಜ್ ಒಂದರಲ್ಲಿ ಯುಪಿ ಪೊಲೀಸರ ಸಹಾಯ ಹಸ್ತ ಎಂಬ ವ್ಯಂಗ್ಯದ ಅಡಿಬರಹದೊಂದಿಗೆ ವಿಡಿಯೊ ಶೇರ್ ಮಾಡಲಾಗಿದ್ದು ವೈರಲ್ ಆಗಿದೆ.

ಇದನ್ನೂ ನೋಡಿ: Viral Video: ಬೈಕ್ ಸ್ಟಂಟ್ ಮಾಡಲು ಹೋಗಿ ನೆರೆಮನೆಯ ಗೋಡೆ ಒಡೆದ ಭೂಪ!

ಇದನ್ನೂ ನೋಡಿ: Viral video: ವಧು ಪಕ್ಕದಲ್ಲಿರುವಾಗಲೇ ವರನಿಗೆ ಗಡದ್ದಾಗಿ ನಿದ್ದೆ! ರಾತ್ರಿ ಕುಡಿದಿದ್ದೇ ಹೆಚ್ಚಾಯ್ತಾ? ಎಂದ ನೆಟ್ಟಿಗರು

(UP Police Carrying a man with his bike in a different way grabs netizens attention)