AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಈ ಮಕ್ಕಳ ಫೈಟಿಂಗ್ ಮುಂದೆ WWE ಶೋ ಕೂಡ ವೇಸ್ಟ್; ಸುಳ್ಳೆನಿಸಿದರೆ ಈ ವಿಡಿಯೋ ನೋಡಿ…

Funny Video: ಈ ವಿಡಿಯೋ ನೋಡಿದರೆ 'ಇವರೇನು ಮಕ್ಕಳಾ ಅಥವಾ WWE ಸ್ಪರ್ಧಿಗಳಾ!' ಎಂದು ನೀವು ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ.

Viral Video: ಈ ಮಕ್ಕಳ ಫೈಟಿಂಗ್ ಮುಂದೆ WWE ಶೋ ಕೂಡ ವೇಸ್ಟ್; ಸುಳ್ಳೆನಿಸಿದರೆ ಈ ವಿಡಿಯೋ ನೋಡಿ...
ಮಕ್ಕಳ ಫೈಟಿಂಗ್ ವಿಡಿಯೋ
TV9 Web
| Edited By: |

Updated on: Jul 17, 2021 | 4:27 PM

Share

ಮಕ್ಕಳು ಏನೇ ಮಾಡಿದರೂ ಚೆಂದ. ಕೆಲವೊಮ್ಮೆ ಅವರ ತುಂಟಾಟ, ತಲೆಹರಟೆ, ಹಠ ಅತಿರೇಕಕ್ಕೆ ಹೋಗಿಬಿಡುತ್ತದೆ. ಈಗಂತೂ ಮಕ್ಕಳ ತುಂಟಾಟದ ಲಕ್ಷಾಂತರ ವಿಡಿಯೋಗಳು ಯೂಟ್ಯೂಬ್, ಫೇಸ್​ಬುಕ್​​ನಲ್ಲಿ ಸಿಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದು. ಈ ವಿಡಿಯೋ ನೋಡಿದರೆ ‘ಇವರೇನು ಮಕ್ಕಳಾ ಅಥವಾ WWE ಸ್ಪರ್ಧಿಗಳಾ!’ ಎಂದು ನೀವು ಮೂಗಿನ ಮೇಲೆ ಬೆರಳಿಡೋದು ಗ್ಯಾರಂಟಿ. ನಾವೇನಾದರೂ ಸುಳ್ಳು ಹೇಳುತ್ತಿದ್ದೇವೆ ಎನಿಸಿದರೆ ನೀವೇ ಈ ವಿಡಿಯೋವನ್ನೊಮ್ಮೆ ನೋಡಿಬಿಡಿ.

ಮೂರ್ನಾಲ್ಕು ಮಕ್ಕಳು ಒಟ್ಟಾಗಿ ಸೇರಿದರೆ ಅಲ್ಲಿ ಜಗಳವೆದ್ದೇ ಏಳುತ್ತದೆ. ನನ್ನ ಆಟದ ಸಾಮಾನನ್ನು ಆತ ಕಿತ್ತುಕೊಂಡ ಎಂದೋ, ನನ್ನ ಕಾಲೆಳೆದ ಎಂದೋ, ಹೊಡೆದ ಎಂದೋ ಹೀಗೆ ಪ್ರತಿಯೊಂದು ಗಲಾಟೆಗೂ ಒಂದೊಂದು ಕಾರಣವಿರುತ್ತದೆ. ಆದರೆ, ಈ ಹುಡುಗರಿಬ್ಬರು ಕಿತ್ತಾಡಿಕೊಳ್ಳುವ ಪರಿ ನೋಡಿದರೆ ಗಾಬರಿಯಾಗದಿರದು. ಸಿಕ್ಕಾಪಟ್ಟೆ ಕೋಪಗೊಂಡ ಹುಡುಗರಿಬ್ಬರು ಒಬ್ಬರ ತಲೆಯನ್ನು ಮತ್ತೊಬ್ಬರು ಹಿಡಿದು ಕಿತ್ತಾಡುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಈ ವಿಡಿಯೋ ನೋಡಿದ ನೆಟ್ಟಿಗರು ಅವರಿಬ್ಬರನ್ನೂ ಡಬ್ಲುಡಬ್ಲುಇ ಶೋಗೆ ಕಳುಹಿಸಿಬಿಡಿ ಎಂದು ಸಲಹೆ ಕೊಟ್ಟಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಜನರು ಶೇರ್ ಮಾಡಿಕೊಂಡಿದ್ದಾರೆ. ಹುಲ್ಲಿನ ಅಂಗಳದಲ್ಲಿ ಕಲ್ಲು, ಕೋಲು ಹಿಡಿದುಕೊಂಡು ಫೈಟಿಂಗ್ ಮಾಡುತ್ತಿರುವ ಇವರ ಜಗಳವನ್ನು ಅಲ್ಲಿ ಸುತ್ತಲೂ ಕುಳಿತವರು ನೋಡಿ ನಗುತ್ತಿದ್ದಾರೆ. ನೀವಿನ್ನೂ ಈ ವಿಡಿಯೋ ನೋಡದಿದ್ದರೆ ಮಿಸ್ ಮಾಡಿಕೊಳ್ಳಬೇಡಿ.

ಇದನ್ನೂ ಓದಿ: Viral Video: ಕುಡುಕರಿಗೇ ಪೈಪೋಟಿ!; ವಿಸ್ಕಿ ಬಾಟಲ್ ಓಪನ್ ಮಾಡಿ ಗಟಗಟನೆ ಕುಡಿದ ಕೋತಿಯ ವಿಡಿಯೋ ವೈರಲ್

ಇದನ್ನೂ ಓದಿ: Coffee Benefits: ದಿನಕ್ಕೊಂದು ಕಪ್ ಕಾಫಿ ಕುಡಿದರೆ ಏನಾಗುತ್ತೆ?; ಸಂಶೋಧನೆಯಲ್ಲಿ ಬಯಲಾಯ್ತು ಅಚ್ಚರಿಯ ಸಂಗತಿ

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ