AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coffee Benefits: ದಿನಕ್ಕೊಂದು ಕಪ್ ಕಾಫಿ ಕುಡಿದರೆ ಏನಾಗುತ್ತೆ?; ಸಂಶೋಧನೆಯಲ್ಲಿ ಬಯಲಾಯ್ತು ಅಚ್ಚರಿಯ ಸಂಗತಿ

Health Tips: ಒಂದು ಕಪ್ ಕಾಫಿಯಿಂದ ಏನು ಬೇಕಾದರೂ ನಡೆಯಬಹುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನೀವೇನಾದರೂ ಕಾಫಿ ಪ್ರಿಯರಾಗಿದ್ದರೆ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ.

Coffee Benefits: ದಿನಕ್ಕೊಂದು ಕಪ್ ಕಾಫಿ ಕುಡಿದರೆ ಏನಾಗುತ್ತೆ?; ಸಂಶೋಧನೆಯಲ್ಲಿ ಬಯಲಾಯ್ತು ಅಚ್ಚರಿಯ ಸಂಗತಿ
ಕಾಫಿ
TV9 Web
| Updated By: Digi Tech Desk|

Updated on:Jul 14, 2021 | 4:34 PM

Share

ಬೆಳಗ್ಗೆ ಎದ್ದು ಒಂದು ಲೋಟ ಬಿಸಿ ಬಿಸಿ ಕಾಫಿ ಕುಡಿದರೆ ಅದರ ಖುಷಿಯೇ ಬೇರೆ. ಮನಸಿಗೆ ಕಿರಿಕಿರಿಯಾದಾಗ, ತಲೆ ಸಿಡಿದು ಚೂರಾಗಿಯೇ ಬಿಡುತ್ತದೆ ಎಂದೆನಿಸಿದಾಗ ಕಾಫಿ (Coffee) ನೀಡುವ ಉಲ್ಲಾಸ ಬೇರಾವ ಮಾತ್ರೆಯೂ ನೀಡಲಾರದು. ಈ ಕಾಫಿಯನ್ನು ಇಷ್ಟಪಡದೇ ಇರುವವರಾದರೂ ಯಾರಿದ್ದಾರೆ? ಕಾಫಿ ಎಂಬ ಮಾಂತ್ರಿಕ ಶಕ್ತಿ ಇರುವ ಪಾನೀಯವನ್ನು ಕಂಡುಹಿಡಿದವರಿಗೆ ಅದೆಷ್ಟು ಜನರು ದಿನಕ್ಕೆ ಅದೆಷ್ಟು ಬಾರಿ ಧನ್ಯವಾದಗಳನ್ನು ಹೇಳುತ್ತಿರುತ್ತಾರೋ ಗೊತ್ತಿಲ್ಲ. ಅದಕ್ಕೇ ಹೇಳೋದು ‘A lot can happen over Coffee’ ಅಂತ. ಹೌದು, ಒಂದು ಕಪ್ ಕಾಫಿಯಿಂದ ಏನು ಬೇಕಾದರೂ ನಡೆಯಬಹುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನೀವೇನಾದರೂ ಕಾಫಿ ಪ್ರಿಯರಾಗಿದ್ದರೆ ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ.

ಬೆಳಗ್ಗೆಯ ಬೆಡ್​ ಕಾಫಿಯಿಂದ ರಾತ್ರಿ ಮಲಗುವಾಗ ಒಂದು ಕಾಫಿ ಕುಡಿದು ಮಲಗುವಷ್ಟು ಕಾಫಿಯ ಜೊತೆ ಅಡಿಕ್ಟ್​ ಆದವರು ಸಾಕಷ್ಟು ಜನರಿದ್ದಾರೆ. ಕಾಫಿಯಲ್ಲಿ ಕೆಫೇನ್ ಅಂಶ ಇರುವುದರಿಂದ ಅತಿಯಾದ ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹಲವು ಸಂಶೋಧನೆಗಳು ಹೇಳಿವೆ. ಆದರೆ, ಹೊಸದೊಂದು ಸಂಶೋಧನೆ ದಿನಕ್ಕೊಂದು ಅಥವಾ ಎರಡು ಕಪ್ ಕಾಫಿಯನ್ನು ಕುಡಿಯುವುದರಿಂದ ಕೊರೋನಾ ಬಾರದಂತೆ ತಡೆಗಟ್ಟಲು ಸಾಧ್ಯವಿದೆ ಎಂಬ ವಿಷಯವನ್ನು ಬಹಿರಂಗಪಡಿಸಿದೆ.

ನಾರ್ತ್​ವೆಸ್ಟರ್ನ್ ಯೂನಿವರ್ಸಿಟಿ ನಡೆಸಿದ ಸಂಶೋಧನೆಯಲ್ಲಿ ಈ ವಿಚಾರ ಬಯಲಾಗಿದೆ. ನಿಯಮಿತವಾಗಿ ದಿನಕ್ಕೊಂದು ಕಪ್ ಕಾಫಿ ಕುಡಿಯುವುದರಿಂದ ಕೋವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆಗಳನ್ನು ತಗ್ಗಿಸಲು ಸಾಧ್ಯವಿದೆ. ನಮ್ಮ ದೇಹದಲ್ಲಿರುವ ಸಿಆರ್​ಪಿ (CRP), ಇಂಟರ್ಲ್ಯೂಕಿನ್-6 (Interleukin-6) , ಟ್ಯೂಮರ್ ನೆಕ್ರೋಸಿಸ್ (Tumour Necrosis Factor 1) ಇವುಗಳು ಕೊರೋನಾ ತೀವ್ರತೆ ಮತ್ತು ಸಾವಿನ ಪ್ರಮಾಣವನ್ನು ಕಾಫಿ ಸೇವನೆಯಿಂದ ಕಡಿಮೆಗೊಳಿಸಲು ಸಾಧ್ಯವಿದೆ ಎಂಬುದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ಕಾಫಿ ಸೇವನೆ ಕೇವಲ ಕೊರೋನಾ ಮಾತ್ರವಲ್ಲದೆ ವೃದ್ಧರಲ್ಲಿ ಕಂಡುಬರುವ ನ್ಯುಮೋನಿಯಾ ರೋಗದ ಪರಿಣಾಮವನ್ನು ಕೂಡ ಕಡಿಮೆಗೊಳಿಸುತ್ತದೆ ಎಂದು ಕೂಡ ನಾರ್ತ್​ವೆಸ್ಟರ್ನ್ ಯೂನಿವರ್ಸಿಟಿಯ ಸಂಶೋಧಕರು ತಿಳಿಸಿದ್ದಾರೆ. ಇಂಗ್ಲೆಂಡ್​ನ ಬಯೋಬ್ಯಾಂಕ್​ನಿಂದ 40,000 ವಯಸ್ಕರ ಡೇಟಾವನ್ನು ಈ ಸಂಶೋಧನೆಗೆ ಬಳಸಿಕೊಳ್ಳಲಾಗಿತ್ತು. ಕೊರೋನಾ ಸೋಂಕಿಗೆ ತುತ್ತಾದವರ ಡಯೆಟ್ ರೊಟೀನ್ ಅಥವಾ ಆಹಾರ ಪದ್ಧತಿಯ ಬಗ್ಗೆ ಅಧ್ಯಯನ ನಡೆಸಲಾಯಿತು. ಈ ವೇಳೆ ಕಾಫಿಯ ಮಹಿಮೆಯ ಬಗ್ಗೆ ಹೊಸ ವಿಷಯ ಬಯಲಾಗಿದೆ.

ಇಷ್ಟೇ ಅಲ್ಲದೆ, ಹೆಚ್ಚೆಚ್ಚು ತರಕಾರಿಗಳನ್ನು ತಿನ್ನುವುದರಿಂದ, ಅತಿಯಾಗಿ ಸಂಸ್ಕರಿಸದ ಮಾಂಸವನ್ನು ಸೇವಿಸುವುದರಿಂದ ಕೂಡ ಕೋವಿಡ್ ಅಪಾಯದಿಂದ ಪಾರಾಗಲು ಸಾಧ್ಯವಿದೆಯಂತೆ. ಹಾಗಿದ್ದರೆ ಇನ್ನೇಕೆ ತಡ? ಹೆಚ್ಚು ತರಕಾರಿಗಳನ್ನು ಸೇವಿಸಿ, ಆಗಾಗ ಕಾಫಿ ಕುಡಿದು ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ. ಅಂದಹಾಗೆ, ಈ ಸಂಶೋಧನೆಯ ಬಗ್ಗೆ ಇನ್ನೂ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.

ಇದನ್ನೂ ಓದಿ: Health Tips: ಟೀ -ಕಾಫಿ ಜತೆಗೆ ಸಕ್ಕರೆ ಬೆರೆಸಿ ಕುಡಿಯುವ ಅಭ್ಯಾಸ ಇದೆಯೇ? ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ

ಇದನ್ನೂ ಓದಿ: Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

(Good News for Coffee Lovers Drinking Cup of coffee may reduce risk of COVID-19 study Reveals)

Published On - 3:21 pm, Wed, 14 July 21