Egg: ಮೊಟ್ಟೆ ಬೋಂಡಾ; ಸರಳ ವಿಧಾನದಲ್ಲಿ ಸಂಜೆ ಹೊತ್ತಿಗೆ ಮಾಡಿ ಸವಿಯಿರಿ
ಮೊಟ್ಟೆ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಮೊಟ್ಟೆ ಚಿಲ್ಲಿ, ಹಾಫ್ ಫ್ರೈ, ಮೊಟ್ಟೆ ಸಾರು, ಬುರ್ಜಿ ಹೀಗೆ ಹಲವು ಬಗೆ ಇದೆ. ಹೀಗಾಗಿ ಮೊಟ್ಟೆ ಬೋಂಡಾ ಮಾಡುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ
ನಾನ್ ವೆಜ್ ಪ್ರಿಯರಿಗೆ ದಿನಕ್ಕೆ ಒಂದಿಲ್ಲಾ ಒಂದು ಹೊಸ ತರಹದ ಅಡುಗೆಯನ್ನು ಸವಿಯುವ ಬಯಕೆ ಇರುತ್ತದೆ. ಅದರಲ್ಲೂ ಮೊಟ್ಟೆ ಇಷ್ಟಪಡುವವರು ಹೆಚ್ಚು ವೈವಿಧ್ಯತೆಯನ್ನು ಇಷ್ಟಪಡುತ್ತಾರೆ. ಮೊಟ್ಟೆ ಚಿಲ್ಲಿ, ಹಾಫ್ ಫ್ರೈ, ಮೊಟ್ಟೆ ಸಾರು, ಬುರ್ಜಿ ಹೀಗೆ ಹಲವು ಬಗೆ ಇದೆ. ಹೀಗಾಗಿ ಮೊಟ್ಟೆ ಬೋಂಡಾ ಮಾಡುವುದು ಹೇಗೆ ಎಂದು ಇಂದು ತಿಳಿದುಕೊಳ್ಳೋಣ.
ಎಗ್ ಬೋಂಡಾ ಮಾಡಲು ಬೇಕಾಗುವ ಸಾಮಾಗ್ರಿಗಳು ಮೊಟ್ಟೆ, ಕೊತ್ತಂಬರಿಸೊಪ್ಪು, ಕಡಲೆ ಹಿಟ್ಟು, ಖಾರದ ಪುಡಿ, ಉಪ್ಪು, ಅಡುಗೆ ಎಣ್ಣೆ
ಎಗ್ ಬೋಂಡಾ ಮಾಡುವ ವಿಧಾನ
ಮೊದಲು ಮೊಟ್ಟೆಯನ್ನು ಉಪ್ಪು ಮತ್ತು ನೀರು ಹಾಕಿ ಬೇಯಿಸಿಕೊಳ್ಳಿ. ಬಳಿಕ ಒಂದು ಮೊಟ್ಟೆಯನ್ನು ನಾಲ್ಕರಿಂದ ಎಂಟು ಭಾಗ ಮಾಡಿಕೊಳ್ಳಿ. ನಂತರ ಒಂದು ಪಾತ್ರೆಗೆ ಕಡಲೆ ಹಿಟ್ಟು, ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು, ಕಾದ ಅಡುಗೆ ಎಣ್ಣೆ ಹಾಕಿ, ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ. ಬಳಿಕ ಕಲಸಿದ ಮಿಶ್ರಣಕ್ಕೆ ಮೊಟ್ಟೆ ಪೀಸ್ಗಳನ್ನು ಹಾಕಿ, ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಬಿಸಿ ಬಿಸಿಯಾದ ಎಗ್ ಬೋಂಡಾ ಸವಿಯಲು ಸಿದ್ಧ.
ಇದನ್ನೂ ಓದಿ:
ಮಲೆನಾಡಿನ ಸ್ಪೆಷಲ್ ಚಿಕನ್ ಕೀಮಾ ಬಾಲ್ಸ್; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ
ಭಾನುವಾರದ ಸ್ಪೆಷಲ್ ಚಿಕನ್ ಚಿಲ್ಲಿ ಪೆಪ್ಪರ್: ಸರಳ ವಿಧಾನದಲ್ಲಿ ಇಂದೇ ಮಾಡಿ ಸವಿಯಿರಿ