ಶೀಘ್ರದಲ್ಲೇ ಚಂದ್ರನಿಂದ ಭೂಮಿಗೆ ಕಾದಿದೆ ಕಂಟಕ: ವಿಜ್ಞಾನಿಗಳಿಂದ ಎಚ್ಚರಿಕೆ
ಭೂಮಿಯ ಉಪಗ್ರಹವಾಗಿರುವ ಚಂದ್ರನಿಂದಲೇ ನಮಗೆ ಕಂಟಕ ಉಂಟಾಗಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಚಂದ್ರನಿಂದ ಭೂಮಿಗೆ ಪ್ರಳಯಾತಂಕ ಎದುರುಗೊಳ್ಳಲಿದ್ದು, ಚಂದ್ರ ತನ್ನ ಸ್ಥಳ ಬದಲಾವಣೆ ಮಾಡಲಿದ್ದಾನೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಬಾಹ್ಯಾಕಾಶದಲ್ಲಿ ನಡೆಯುವ ಬೆಳವಣಿಗೆಗಳು ಮನುಷ್ಯನಲ್ಲಿ ಸಾಕಷ್ಟು ಕುತೂಹಲಗಳ ಜತೆಗೆ ಕೆಲವೊಮ್ಮೆ ಆತಂಕವನ್ನೂ ಹುಟ್ಟುಹಾಕುತ್ತವೆ. ಪ್ರಕೃತಿಯಲ್ಲಿ ಆಗುವ ಬದಲಾವಣೆಗಳನ್ನು ತಡೆಯುವುದು ಅಸಾಧ್ಯವಾಗಿರುವುದರಿಂದ ಅದರಿಂದ ಎದುರಾಗುವ ಅಪಾಯಗಳನ್ನು ಊಹಿಸಿ ದಿಗಿಲುಗೊಳ್ಳದೇ ಬೇರೆ ದಾರಿ ಇರುವುದಿಲ್ಲ. ಇದೀಗ ಭೂಮಿಯ ಉಪಗ್ರಹವಾಗಿರುವ ಚಂದ್ರನಿಂದಲೇ ನಮಗೆ ಕಂಟಕ ಉಂಟಾಗಲಿದೆ ಎಂಬ ಕಟು ಎಚ್ಚರಿಕೆಯನ್ನು ನಾಸಾದ ಬಾಹ್ಯಾಕಾಶ ವಿಜ್ಞಾನಿಗಳು ನೀಡಿದ್ದಾರೆ.
ಚಂದ್ರನ ಬಗ್ಗೆ ಮೇಲಿಂದ ಮೇಲೆ ಎಚ್ಚರಿಕೆ ನೀಡುತ್ತಿರುವ ನಾಸಾ ಬಾಹ್ಯಾಕಾಶ ವಿಜ್ಞಾನಿಗಳು, ಬದಲಾಗ್ತಿರುವ ಭೂಮಿಯ ವಾತಾವರಣದಿಂದ ಈಗಾಗಲೇ ಸಾಕಷ್ಟು ಗಂಡಾಂತರಗಳು ಎದುರಾಗಿವೆ. ಇನ್ನು ಕೆಲವೇ ವರ್ಷಗಳಲ್ಲಿ ಚಂದ್ರನಿಂದ ಭೂಮಿಗೆ ಪ್ರಳಯಾತಂಕ ಎದುರುಗೊಳ್ಳಲಿದ್ದು, ಚಂದ್ರ ತನ್ನ ಸ್ಥಳ ಬದಲಾವಣೆ ಮಾಡಲಿದ್ದಾನೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಸೌರ ಚಂಡಮಾರುತ ಭೂಮಿಗೆ ಅಪ್ಪಳಿಸಲಿದೆ ಎನ್ನುವುದನ್ನೂ ವಿಜ್ಞಾನಿಗಳು ಹೇಳಿದ್ದು, ಭೂಮಂಡಲಕ್ಕೆ ಬಂದೆರಗಲಿರುವ ಸೌರ ಚಂಡಮಾರುದಿಂದ ಮೊಬೈಲ್, ಸ್ಯಾಟಲೈಟ್ ನೆಟ್ವರ್ಕ್, ವಿದ್ಯುತ್, ಸಂಪಕ್ ಕ್ಷೇತ್ರ ಎಲ್ಲದರಲ್ಲೂ ವ್ಯತ್ಯಯ ಉಂಟಾಗಲಿದೆ ಎಂಬ ಎಚ್ಚರಿಕೆ ಕೊಟ್ಟಿದ್ದಾರೆ.