AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ದೇವರ ವಿಗ್ರಹವನ್ನು ಮುರಿದ ಆರೋಪ; ನಡುರಸ್ತೆಯಲ್ಲಿ ವೃದ್ಧನಿಗೆ ಥಳಿಸಿದ ಯುವಕರ ವಿಡಿಯೋ ವೈರಲ್

Shocking Video: ನೀಮುಚ್​ನ ದೇವಸ್ಥಾನವೊಂದರ ದೇವರ ವಿಗ್ರಹ ತುಂಡಾಗಿದ್ದು, ಅದನ್ನು ಕಮಲ್ ದಾಸ್ ಎಂಬ ಮಾನಸಿಕ ಅಸ್ವಸ್ಥನೇ ಮಾಡಿದ್ದಾರೆ ಎಂಬುದು ಯುವಕರ ಆರೋಪ.

Viral Video: ದೇವರ ವಿಗ್ರಹವನ್ನು ಮುರಿದ ಆರೋಪ; ನಡುರಸ್ತೆಯಲ್ಲಿ ವೃದ್ಧನಿಗೆ ಥಳಿಸಿದ ಯುವಕರ ವಿಡಿಯೋ ವೈರಲ್
ವೃದ್ಧನನ್ನು ಥಳಿಸುತ್ತಿರುವ ಜನರು
TV9 Web
| Edited By: |

Updated on: Jul 17, 2021 | 5:02 PM

Share

ಭೂಪಾಲ್: ಮಧ್ಯಪ್ರದೇಶದಲ್ಲಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ವೃದ್ಧರೊಬ್ಬರು ದೇವರ ವಿಗ್ರಹವನ್ನು ಮುರಿದು ಹಾಕಿದ್ದಾರೆ ಎಂದು ಆರೋಪಿಸಿ ಜನರ ಗುಂಪೊಂದು ಅವರನ್ನು ನಡುರಸ್ತೆಯಲ್ಲೇ ಕೆಡವಿ, ಹಿಗ್ಗಾಮುಗ್ಗ ಹೊಡೆದಿದ್ದಾರೆ. ಆ ವೃದ್ಧ ಕೈ ಮುಗಿದು ಬೇಡಿಕೊಂಡರೂ ಬಿಡದ ಯುವಕರು ಕೋಲಿನಿಂದ ಹೊಡೆದು, ಕಾಲಿನಿಂದ ಒದ್ದು ಹಿಂಸೆ ನೀಡಿದ್ದಾರೆ. ಈ ವಿಡಿಯೋವನ್ನು ಅಲ್ಲಿ ನೆರೆದಿದ್ದವರು ಶೂಟ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ನೋಡಿದ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಕಮಲ್ ದಾಸ್ ಎಂಬ ವೃದ್ಧ ಮಾನಸಿಕ ಅಸ್ವಸ್ಥರಾಗಿದ್ದು, ಹಲವು ವರ್ಷಗಳಿಂದ ಸ್ಮಶಾನದಲ್ಲೇ ಮಲಗುತ್ತಿದ್ದಾರೆ. ಅವರು ದೇವರ ಮೂರ್ತಿಯನ್ನು ಮುರಿದು ಹಾಕಿದ್ದಾರೆ ಎಂದು ಆರೋಪಿಸಿದ ಯುವಕನೊಬ್ಬ ಮೊದಲು ಕೋಲಿನಿಂದ ಹೊಡೆಯಲಾರಂಭಿಸಿದ್ದಾನೆ. ನಂತರ ಆತನ ಜೊತೆ ಸೇರಿದ ಇತರೆ ಯುವಕರು ಕೂಡ ಕಾಲಿನಿಂದ ಅವರನ್ನು ಒದ್ದು, ಮನಬಂದಂತೆ ಥಳಿಸಿದ್ದಾರೆ. ಅವರ ಕೂದಲನ್ನು ಹಿಡಿದುಕೊಂಡು ಫುಟ್​ಪಾತ್​ನಲ್ಲಿ ಎಳೆದುಕೊಂಡು ಹೋಗಿ ವಿಕೃತಿ ಮರೆದಿದ್ದಾರೆ.

ನೀಮುಚ್​ನ ದೇವಸ್ಥಾನವೊಂದರ ದೇವರ ವಿಗ್ರಹ ತುಂಡಾಗಿದ್ದು, ಅದನ್ನು ಕಮಲ್ ದಾಸ್ ಎಂಬ ಮಾನಸಿಕ ಅಸ್ವಸ್ಥನೇ ಮಾಡಿದ್ದಾರೆ ಎಂಬುದು ಯುವಕರ ಆರೋಪ. ಆದರೆ, ಈ ಆರೋಪಕ್ಕೆ ಯಾವುದೇ ಸಾಕ್ಷಿಗಳೂ ದೊರೆತಿಲ್ಲ. ಇದೇ ಆರೋಪದಲ್ಲಿ ಆತನನ್ನು ಸಾರ್ವಜನಿಕವಾಗಿ ಥಳಿಸಲಾಗಿದೆ.

ಈ ಘಟನೆ ನಡೆಯುತ್ತಿದ್ದಾಗ ಸುತ್ತಲೂ ನೂರಾರು ಜನರು ನಿಂತು ನೋಡುತ್ತಿದ್ದರು. ಆದರೆ, ಯಾರೂ ಆ ಯುವಕನ್ನು ತಡೆಯಲು ಹೋಗಿಲ್ಲ. ಈ ಹಲ್ಲೆ ವೇಳೆ ವೃದ್ಧಿನ ಒಂದು ಕೈ ಮುರಿದು ಹೋಗಿದೆ. ಈ ವಿಡಿಯೋ ನೋಡಿದ ಪೊಲೀಸರು ಕೇಸ್ ದಾಖಲಿಸಿಕೊಂಡು, ವಿಡಿಯೋದಲ್ಲಿರುವ ಯುವಕರನ್ನು ವಿಚಾರಣೆ ನಡೆಸುತ್ತಿದ್ದಾರೆ. ಕಾನೂನನ್ನು ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶವಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Viral Video: ಈ ಮಕ್ಕಳ ಫೈಟಿಂಗ್ ಮುಂದೆ WWE ಶೋ ಕೂಡ ವೇಸ್ಟ್; ಸುಳ್ಳೆನಿಸಿದರೆ ಈ ವಿಡಿಯೋ ನೋಡಿ…

ಇದನ್ನೂ ಓದಿ: Viral Video: ಕಂಠಪೂರ್ತಿ ಕುಡಿದು ಬೈಕ್ ಓಡಿಸಿದ ಪುಣ್ಯಾತ್ಮ ಏನೆಲ್ಲ ಮಾಡಿದ ಗೊತ್ತಾ?; ವೈರಲ್ ವಿಡಿಯೋ ಇಲ್ಲಿದೆ

(Shocking video shows youths thrashing elderly man in Madhya Pradesh Neemuch for breaking Idol at a Temple)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ