ಮಧ್ಯಪ್ರದೇಶ ಬಾವಿ ದುರಂತ: ಪುಟ್ಟ ಬಾಲಕಿಯ ರಕ್ಷಣಾ ಕಾರ್ಯಾಚರಣೆ ವೇಳೆ ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ.ಘೋಷಿಸಿದ ಪ್ರಧಾನಿ ಮೋದಿ
Madhya Pradesh: 8 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇದುವರೆಗೆ 19 ಮಂದಿಯನ್ನು ರಕ್ಷಿಸಿದ್ದಾರೆ ಮಧ್ಯಪ್ರದೇಶದ ಸಚಿವ ವಿಶ್ವಾಸ್ ಸಾರಂಗ್ ತಿಳಿಸಿದ್ದಾರೆ. ಮೃತರ ಕುಟುಂಗಳಿಗೆ ತಲಾ 5 ಲಕ್ಷ ರೂಪಾಯ ನೀಡುವುದಾಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈಗಾಗಲೇ ಘೋಷಿಸಿದ್ದಾರೆ.
ಮಧ್ಯಪ್ರದೇಶದ ಭೋಪಾಲ್ನ ವಿದಿಶಾ (Madhya Pradesh-Vidisha)ದಲ್ಲಿ ನಡೆದ ಬಾವಿ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Prime Minister Narendra Modi) ಘೋಷಿಸಿದ್ದಾರೆ. ವಿದಿಶಾ ಜಿಲ್ಲೆಯ ಗಂಜ್ ಬಸೌಡ ಪ್ರದೇಶದಲ್ಲಿ 8 ವರ್ಷದ ಬಾಲಕಿ ಜುಲೈ 15ರಂದು ಬಾವಿಗೆ ಬಿದ್ದಿದ್ದಳು. ಅವಳನ್ನು ರಕ್ಷಿಸಲು ಕೆಲವರು ಮುಂದಾದರು. ಈ ವೇಳೆ ಬಾವಿಯ ಸುತ್ತ 40ಕ್ಕೂ ಹೆಚ್ಚು ಜನರು ನೆರೆದಿದ್ದರು. ಆಗ ಬಾವಿ ಕುಸಿದ ಪರಿಣಾಮ 40 ಜನರೂ ಬಾವಿಪಾಲಾಗಿದ್ದಾರೆ. ಅದರಲ್ಲಿ ಈಗ 8 ಮೃತದೇಹಗಳನ್ನು ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ಈ ದುರಂತದ ಬಗ್ಗೆ ನೋವು ವ್ಯಕ್ತಪಡಿಸಿ ಟ್ವೀಟ್ ಮಾಡಿದ ಪ್ರಧಾನಮಂತ್ರಿ ಕಚೇರಿ, ಮೃತರ ಕುಟುಂಬಗಳಿಗೆ ಸಾಂತ್ವನಗಳು. ಪ್ರಧಾನಮಂತ್ರಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ನೀಡಲಾಗುವುದು ಎಂದು ಹೇಳಿದೆ.
Anguished by the tragedy in Vidisha, Madhya Pradesh. My condolences to the bereaved families. An ex-gratia of Rs. 2 lakh each from PMNRF would be given to the next of kin of those who lost their lives: PM @narendramodi
— PMO India (@PMOIndia) July 16, 2021
ಇನ್ನು 8 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇದುವರೆಗೆ 19 ಮಂದಿಯನ್ನು ರಕ್ಷಿಸಿದ್ದಾರೆ ಮಧ್ಯಪ್ರದೇಶದ ಸಚಿವ ವಿಶ್ವಾಸ್ ಸಾರಂಗ್ ತಿಳಿಸಿದ್ದಾರೆ. ಮೃತರ ಕುಟುಂಗಳಿಗೆ ತಲಾ 5 ಲಕ್ಷ ರೂಪಾಯ ನೀಡುವುದಾಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಈಗಾಗಲೇ ಘೋಷಿಸಿದ್ದಾರೆ. ಹಾಗೇ ಗಾಯಗೊಂಡವರಿಗೆ ತಲಾ 50,000 ರೂ.ನೀಡಲಾಗುವುದು ಮತ್ತು ಉಚಿತ ಚಿಕಿತ್ಸೆ ನೀಡುವುದಾಗಿಯೂ ಹೇಳಿದ್ದಾರೆ. ಸ್ಥಳೀಯರು ಹೇಳಿರುವಂತೆ ಗುರುವಾರ ಸಂಜೆ ವೇಳೆಗೆ ಬಾವಿಯ ಸಮೀಪ ಆಟವಾಡುತ್ತಿದ್ದ ಬಾಲಕಿ ಆಯತಪ್ಪಿಗೆ ಬಾವಿಗೆ ಬಿದ್ದಿದ್ದಾಳೆ. ಈ ಸುದ್ದಿ ಒಬ್ಬರ ಬಾಯಿಂದ ಒಬ್ಬರಿಗೆ ಹರಡುತ್ತಿದ್ದಂತೆಯೇ ಇಡೀ ಗ್ರಾಮಕ್ಕೆ ಗ್ರಾಮವೇ ಬಾವಿಯ ಸುತ್ತ ಜಮಾಯಿಸಿದೆ. ಬಾವಿಯ ತಡೆಗೋಡೆ ಸುತ್ತ ಒತ್ತಡ ಹೆಚ್ಚಾದ ಪರಿಣಾಮ ತಡೆಗೋಡೆ ಮುರಿದು, ಮಣ್ಣು ಕುಸಿದು ಅನಾಹುತ ಘಟಿಸಿದೆ. ಈ ಬಗ್ಗೆ ಮಾತನಾಡಿರುವ ಭೋಪಾಲ್ನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಾಯಿ ಮನೋಹರ್ ಕೂಡಾ ಇದೇ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Petrol Price Today: ಮತ್ತೆ ಪೆಟ್ರೋಲ್ ಬೆಲೆಯಲ್ಲಿ ಏರಿಕೆ; ಸ್ಥಿರತೆಯನ್ನು ಕಾಯ್ದುಕೊಂಡ ಡೀಸೆಲ್