ಕೋವಿಡ್​ ಮೂರನೇ ಅಲೆ ಭಾರತವನ್ನು ಅಪ್ಪಳಿಸದಂತೆ ತಡೆಯುವ ಗುರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದಾರೆ: ಆರೋಗ್ಯ ಇಲಾಖೆ

ಮುಂದಿನ ತಿಂಗಳ ಅರಂಭದಲ್ಲೇ ಮೂರನೆ ಭಾರತವನ್ನು ಅಪ್ಪಳಿಸುವ ಎಚ್ಚರಿಕೆಯನ್ನು ಐಸಿಎಮ್​ಆರ್​ನ ಒಬ್ಬ ಸೀನಿಯರ್ ಡಾಕ್ಟರ್ ಸೇರಿದಂತೆ ಹಲವು ತಜ್ಞರು ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಪ್ರಧಾನಿಗಳು ಅದನ್ನು ತಡೆಯಲೇಬೇಕು ಎಂದು ಹೇಳುತ್ತಿದ್ದಾರೆ.

ಕೋವಿಡ್​ ಮೂರನೇ ಅಲೆ ಭಾರತವನ್ನು ಅಪ್ಪಳಿಸದಂತೆ ತಡೆಯುವ ಗುರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದಾರೆ: ಆರೋಗ್ಯ ಇಲಾಖೆ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕೋವಿಡ್-19 ಸೋಂಕಿನ ಮೂರನೇ ಅಲೆ ಭಾರತವನ್ನು ಅಪ್ಪಳಿಸುವ ಮೊದಲೇ ಆದನ್ನು ತಡೆಯುವ ಗುರಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನಮಗೆ ನೀಡಿದ್ದಾರೆ ಎಂದು ಭಾರತ ಕೋವಿಡ್ ಟಾಸ್ಕ್​ ಫೋರ್ಸ್​ನ ಮುಖ್ಯಸ್ಥ ಡಾ ವಿಕೆ ಪಾಲ್ ಶುಕ್ರವಾರ ನವದೆಹಲಿಯಲ್ಲಿ ನಡೆದ ಒಂದು ಸುದ್ದಿಗೋಷ್ಟಿಯಲ್ಲಿ ಹೇಳಿದರು.

‘ನಮ್ಮ ದೇಶದ ಜನ ಇನ್ನೂ ಅಪಾಯದಿಂದ ಪಾರಾಗಿಲ್ಲ. ಕೊರೋನಾವೈರಸ್ ಈಗಲೂ ನಮ್ಮ ನಡುವೆಯೇ ಇದೆ ಮತ್ತು ಮೂರನೇ ಅಪ್ಪಳಿಸುವ ಭೀತಿ ನಮ್ಮೆಲ್ಲರನ್ನು ಕಾಡುತ್ತಿದೆ. ಸೋಂಕಿನ ಇಳಿಕೆ ಪ್ರಮಾಣ ನಿಧಾನ ಗತಿಯಲ್ಲಿ ಸಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಕೆಲ ರಾಜ್ಯಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದೆ. ಪ್ರಧಾನ ಮಂತ್ರಿಗಳು ನಮಗೆ ಒಂದು ಟಾರ್ಗೆಟ್​ ನೀಡಿದ್ದಾರೆ-ಭಾರತದಲ್ಲಿ ಮೂರನೇ ಅಲೆ ತಲೆದೋರಬಾರದು,’ ಎಂದು ಪಾಲ್ ಹೇಳಿದರು.

ಜೂನ್ 21ರಿಂದ ಗಣನೀಯ ಪ್ರಮಾಣಲ್ಲಿ ಕಡಿಮೆಯಾಗಿರುವ ಲಸಿಕಾ ಅಭಿಯಾನದ ವೇಗವನ್ನು ಹೆಚ್ಚಿಸುವ ಬಗ್ಗೆಯೂ ಪಾಲ್ ಮಾತಾಡಿದರು. ಜೂನ್ 21 ರಂದು 86.16 ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದರೆ, ಗುರುವಾರ ಕೇವಲ 38.79 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ.

ಇದಕ್ಕೆ ಮೊದಲು, ಆರು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತಾಡಿದ ಪ್ರಧಾನಿ ಮೋದಿ ಅವರು ಮೂರನೇ ಅಲೆಯನ್ನು ತಡೆಯುವುದು ಮೊದಲ ಆದ್ಯತೆಯಾಗಬೇಕು ಎಂದು ಸೂಚಿಸಿದರು.

ಕಳೆದ ವಾರದಲ್ಲಿ ದೇಶದ ಒಟ್ಟು ಕೋವಿಡ್ ಸೋಂಕಿತರ ಪೈಕಿ ಶೇಕಡಾ 80 ಮತ್ತು ಸಾವುಗಳ ಪೈಕಿ ಶೇಕಡಾ 84 ರಷ್ಟು ಕಾಂಟ್ರಿಬ್ಯೂಟ್ ಮಾಢಿರುವ ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ, ಒಡಿಶಾ, ಕೇರಳ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತಾಡಿದ ಅವರು 4 ‘ಟಿ’ ಗಳಿಗೆ-ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತೂ ಟೀಕಾ (ಲಸಿಕೆ) ಪ್ರಾಮುಖ್ಯತೆ ನೀಡಬೇಕು ಎಂದು ಹೇಳಿದರು.

ಆರ್​ಟಿ-ಪಿಸಿಆರ್ ಟೆಸ್ಟಿಂಗ್ ಹೆಚ್ಚಿಸುವುದು, ಲಸಿಕೆ ಅಭಿಯಾನದ ವೃದ್ಧಿಸುವುದು ಮತ್ತು ಜನ ಕೋವಿಡ್-19 ಸೋಂಕು ತಡೆಗೆ ಪೂರಕ ನಡಾವಳಿ ಅನುಸರಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಪ್ರಧಾನಿಗಳು ಸಭೆಯಲ್ಲಿ ಹೇಳಿದರು.

‘ನಾವೆಲ್ಲ ಅತ್ಯಂತ ಜರೂರಾಗಿ ಮಾಡಬೇಕಿರುವ ಕೆಲಸವೆಂದರೆ, ಮೂರನೇ ಅಲೆ ಅಪ್ಪಳಿಸದಂತೆ ತಡೆಯುವುದು. ನಾಲ್ಕು ‘ಟಿ’ ಗಳನ್ನು ಅನುಸರಿಸುವುದು ನಮ್ಮ ಆದ್ಯತೆಯಾಗಬೇಕು,’ ಎಂದು ಪ್ರಧಾನಿ ಮೋದಿ ಸಭೆಯಲ್ಲಿ ಹೇಳಿದರು.

‘ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದೆ. ಕೇಸುಗಳು ಹೆಚ್ಚುತ್ತಿರುವ ರಾಜ್ಯಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡು ಮೂರನೇ ಆಲೆಯ ಸಾಧ್ಯತೆಯನ್ನು ಇಲ್ಲವಾಗಿಸಬೇಕು,’ ಎಂದು ಪ್ರಧಾನಿ ಮೋದಿ ಹೇಳಿದರು.

ಮುಂದಿನ ತಿಂಗಳ ಅರಂಭದಲ್ಲೇ ಮೂರನೆ ಭಾರತವನ್ನು ಅಪ್ಪಳಿಸುವ ಎಚ್ಚರಿಕೆಯನ್ನು ಐಸಿಎಮ್​ಆರ್​ನ ಒಬ್ಬ ಸೀನಿಯರ್ ಡಾಕ್ಟರ್ ಸೇರಿದಂತೆ ಹಲವು ತಜ್ಞರು ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ಪ್ರಧಾನಿಗಳು ಅದನ್ನು ತಡೆಯಲೇಬೇಕು ಎಂದು ಹೇಳುತ್ತಿದ್ದಾರೆ. ಹಾಗೆಯೇ, ಮಾರ್ಕೆಟ್ ಪ್ರದೇಶಗಳು ಹಾಗೂ ಪ್ರವಾಸಿ ಸ್ಥಳಗಳಲ್ಲಿ ಜನ ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಓಡಾಡುತ್ತಿರುವುದನ್ನು ಸಹ ಪ್ರಧಾನಿಗಳು ಗಮನಿಸಿದ್ದಾರೆ.

‘ವೈರಸ್ ತಾನಾಗೇ ಬರುವುದಿಲ್ಲ. ನಿಯಮಗಳನ್ನು ಉಲ್ಲಂಘಿಸುವ ಮೂಲಕ ನಾವು ಅದನ್ನು ತರುತ್ತೇವೆ. ನಮ್ಮ ನಿರ್ಲಕ್ಷ್ಯ ಧೋರಣೆ ಬಗ್ಗೆ ತಜ್ಞರು ಎಚ್ಚರಿಸುತ್ತಲೇ ಇದ್ದಾರೆ- ಜನ ಗುಂಪು ಸೇರುವುದು ವೈರಸ್​ಗೆ ಆಹ್ವಾನವಿತ್ತಂತೆ,’ ಎಂದು ಪ್ರಧಾನಿಗಳು ಕಳೆದ ವಾರ ಹೇಳಿದ್ದರು.

ಲಸಿಕೆಗಳ ಅಭಾವದ ಬಗ್ಗೆ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಗಳ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ ಶುಕ್ರವಾರದ ಸುದ್ದಿಗೋಷ್ಟಿಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಡಾ ಪಾಲ್ ಅವರು, ಮುಂದಿನ ದಿನಗಳಲ್ಲಿ ಲಸಿಕೆ ಪೂರೈಕೆ ಪ್ರಮಾಣವನ್ನು ಹೆಚ್ಚಿಸಲಾಗುವುದೆಂದು ಹೇಳಿ ಆಗಸ್ಟ್-ಡಿಸೆಂಬರ್ ನಡುವಿನ ಅವಧಿಗೆ 70 ಕೋಟಿ ಡೋಸ್​ಗಳನ್ನು ಆರ್ಡರ್ ಮಾಡಲಾಗಿದೆ ಎಂದರು.

ಇದನ್ನೂ ಓದಿ: Corona third Wave: ಆಗಸ್ಟ್​ ಅಂತ್ಯಕ್ಕೆ ಕೊರೊನಾ ಮೂರನೇ ಅಲೆ ನಿಶ್ಚಿತ: ಐಸಿಎಂಆರ್​ ಹಿರಿಯ ವೈದ್ಯ