ಮಾನ್ಸೂನ್ ಅಧಿವೇಶನಕ್ಕೆ ಮೊದಲು ಆಂಟನಿ ಮತ್ತು ಶರದ್ ಪವಾರ್​ರನ್ನು ಭೇಟಿಯಾಗಿ ಭಾರತ-ಚೀನಾ ಗಡಿ ಪರಿಸ್ಥಿತಿಯನ್ನು ವಿವರಿಸಿದ ರಾಜನಾಥ ಸಿಂಗ್

ಗಡಿ ವಿವಾದವನ್ನು ಇತ್ಯರ್ಥ ಮಾಡಿಕೊಳ್ಳುವುದನ್ನು ವಿಳಂಬ ಮಾಡಿದರೆ, ಅದು ಎರಡೂ ರಾಷ್ಟ್ರಗಳ ಹಿತಾಸಕ್ತಿಗಳಿಗೆ ಒಳ್ಳೆಯದಲ್ಲ ಎನ್ನುವ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಬಂದ ಒಂದು ದಿನದ ನಂತರ ರಾಜನಾಥ ಸಿಂಗ್ ಅವರು ಇಬ್ಬರು ಮಾಜಿ ರಕ್ಷಣಾ ಸಚಿವರನ್ನು ಭೇಟಿಯಾಗಿದ್ದಾರೆ.

ಮಾನ್ಸೂನ್ ಅಧಿವೇಶನಕ್ಕೆ ಮೊದಲು ಆಂಟನಿ ಮತ್ತು ಶರದ್ ಪವಾರ್​ರನ್ನು ಭೇಟಿಯಾಗಿ ಭಾರತ-ಚೀನಾ ಗಡಿ ಪರಿಸ್ಥಿತಿಯನ್ನು ವಿವರಿಸಿದ ರಾಜನಾಥ ಸಿಂಗ್
ರಕ್ಷಣಾ ಸಚಿವ ರಾಜನಾಥ ಸಿಂಗ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 16, 2021 | 9:49 PM

ನವದೆಹಲಿ: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಶುಕ್ರವಾರ ಕಾಂಗ್ರೆಸ್ ಮುಖಂಡ ಎ ಕೆ ಆಂಟನಿ ಮತ್ತು ಎನ್​ ಸಿ ಪಿ ಧುರೀಣ ಶರದ್ ಪವಾರ್ ಅವರನ್ನು ಭೇಟಿಯಾಗಿ ಚೀನಾದ ಗಡಿಯಲ್ಲಿನ ಪ್ರಸಕ್ತ ವಿದ್ಯಮಾನಗಳ ಬಗ್ಗೆ ವಿವರಿಸಿದರು. ಆಂಟನಿ ಮತ್ತು ಪವಾರ್ ಹಿಂದೆ ರಕ್ಷಣಾ ಖಾತೆಯನ್ನು ನಿಭಾಯಿಸಿದ್ದರು ಎನ್ನುವವುದನ್ನು ಇಲ್ಲಿ ನೆನಪಿಸಿಕೊಳ್ಳಬಹದಾಗಿದೆ. ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಸಹ ಸಿಂಗ್ ಅವರೊಂದಿಗೆ ಸಭೆಯಲ್ಲಿ ಹಾಜರಿದ್ದರು. ಜುಲೈ 19ರಿಂದ ಸಂಸತ್ತಿನ ಮಾನ್ಸೂನ್ ಅಧಿವೇಶನ ಶುರುವಾಗಲಿದ್ದು ಅದಕ್ಕೆ ಮೊದಲು ಈ ಸಭೆ ನಡೆದಿದೆ. ವಿರೋಧ ಪಕ್ಷಗಳ ಹಿರಿಯ ನಾಯಕರ ಜೊತೆ ಸಮಾಲೋಚನೆ ನಡೆಸಿ ಅಧಿವೇಶನಕ್ಕೆ ಮೊದಲು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಸರ್ಕಾರದ ಇರಾದೆಯಾಗಿದೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂದಿ ಅವರು ಬಹಲ ಸಮಯದಿಂದ ಭಾರತ ತನ್ನ ಕೆಲ ಭಾಗಗಳನ್ನು ಚೀನಾಗೆ ಬಿಟ್ಟುಕೊಟ್ಟಿದೆ ಎಂದು ಆರೋಪಿಸುತ್ತ್ತಿದ್ದಾರೆ. ಕಳೆದ ವರ್ಷ ಜೂನ್​ನಲ್ಲಿ ಪೂರ್ವ ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಸಂಘರ್ಷ ನಡೆದಿತ್ತು.

ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಸತ್ತಿನ ಕಾರ್ಯತಂತ್ರ ಸಭೆಯಲ್ಲಿ ಕಾಂಗ್ರೆಸ್ ಈ ಬಾರಿಯ ಅಧಿವೇಶನದಲ್ಲಿ, ಚೀನಾದೊಂದಿಗಿನ ಗಡಿ ವಿವಾದವನ್ನು ಎತ್ತಲು ನಿರ್ಧರಿಸಿದೆ ಎಂದು ಮೂಲಗಳಿಂದ ಗೊತ್ತಾಗಿದೆ.

ಪವಾರ್ ಅವರು ಶುಕ್ರವಾರದಂದು, ನೂತನವಾಗಿ ರಾಜ್ಯ ಸಭೆ ಸದನದ ನಾಯಕರಾಗಿ ನೇಮಕಗೊಂಡಿರುವ ಪಿಯುಶ್ ಗೋಯಲ್ ಭೇಟಿಮಾಡಿ ಅಭಿನಂದಿಸಿದರು ಎಂದು ಮೂಲಗಳು ತಿಳಿಸಿವೆ.

ಮಾನ್ಸೂನ್ ಅಧಿವೇಶನವು ಸೋಮವಾರ ಆರಂಭಗೊಂಡು ಆಗಸ್ಟ 13ರಂದು ಕೊನೆಗೊಳ್ಳಲಿದೆ. ಸರ್ಕಾರವು ಇತ್ತೀಚಿಗೆ ಜಾರಿ ಮಾಡಿದ ಮೂರು ಸುಗ್ರೀವಾಜ್ಞೆಗಳನ್ನು ಬದಲಿಸುವುದು ಸೇರಿದಂತೆ 17 ಹೊಸ ಮಸೂದೆಗಳನ್ನು ಪ್ರಸ್ತಾಪಿಸುವ ನಿರ್ಧಾರ ಮಾಡಿಕೊಂಡಿದೆ.

ಗಡಿ ವಿವಾದವನ್ನು ಇತ್ಯರ್ಥ ಮಾಡಿಕೊಳ್ಳುವುದನ್ನು ವಿಳಂಬ ಮಾಡಿದರೆ, ಅದು ಎರಡೂ ರಾಷ್ಟ್ರಗಳ ಹಿತಾಸಕ್ತಿಗಳಿಗೆ ಒಳ್ಳೆಯದಲ್ಲ ಎನ್ನುವ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಬಂದ ಒಂದು ದಿನದ ನಂತರ ರಾಜನಾಥ ಸಿಂಗ್ ಅವರು ಇಬ್ಬರು ಮಾಜಿ ರಕ್ಷಣಾ ಸಚಿವರನ್ನು ಭೇಟಿಯಾಗಿದ್ದಾರೆ.

ಪ್ರಮುಖವಾಗಿ ಭದ್ರತೆ ಮತ್ತು ರಕ್ಷಣಾ ವಿಷಯಗಳ ಮೇಲೆ ಫೋಕಸ್ ಮಾಡುವ ಎಂಟು-ರಾಷ್ಟ್ರಗಳ ಪ್ರಾದೇಶಿಕ ಗುಂಪಿನ ಶಾಂಘೈ ಸಹಕಾರ ಸಂಸ್ಥೆ ಸಭೆ ಇತ್ತೀಚಿಗೆ ನಡೆದಿದ್ದು ಆ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಚೀನಾದ ವಿದೇಶಾಂಗ ಸಚಿವ ವ್ಯಾಂಗ್ ಯಿ ಅವರನ್ನು ಭೇಟಿಯಾದರು. ಬುಧವಾರದಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಸರ್ಕಾರವು ಬಾರತ-ಚೀನಾ ಗಡಿ ವಿವಾದ ಋಣಾತ್ಮಕ ಪ್ರಭಾವ ಬೀರುತ್ತಿದೆ ಎಂದು ಹೇಳಿದೆ.

ಜೈಶಂಕರ್ ಅವರು, ಈ ವರ್ಷದ ಆರಂಭದಲ್ಲಿ ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಸೇನಾ ಪಡೆಗಳ ಸಂಖ್ಯೆಯನ್ನು ಕಡಿಮೆ ಮಾಡಿದ್ದು ಎರಡು ರಾಷ್ಟ್ರಗಳ ನಡವಿನ ಬೇರೆ ವಿಷಯಗಳನ್ನು ಬಗೆಹರಿಸಿಕೊಳ್ಳುವಂಥ ಸ್ಥಿತಯನ್ನು ಸೃಷ್ಟಿ ಮಾಡಿದೆ ಎಂದು ವ್ಯಾಂಗ್ ಯಿಗೆ ಹೇಳಿದರು. ಸದರಿ ವಿಷಯಕ್ಕೆ

ಸಂಬಂಧಿಸಿದಂತೆ ಚೀನಾ ತನ್ನ ಪ್ರಯತ್ನಗಳನ್ನು ಮಾಡುವ ವಿಶ್ವಾಸವನ್ನು ಜೈಶಂಕರ್ ಅವರು ವ್ಯಕ್ತಪಡಿಸಿದರು. ಆದರೆ ಬೇರೆ ಪ್ರದೇಶಗಳಲ್ಲಿ ಸ್ಥಿತಿ ಸುಧಾರಣೆಯಾಗಬೇಕಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:  ಯಾವುದೇ ದೇಶದ ಅತಿಕ್ರಮಣವನ್ನು ಭಾರತ ಸಹಿಸುವುದಿಲ್ಲ, ತಕ್ಕ ಉತ್ತರ ನೀಡಲು ನಮ್ಮ ಸೇನೆ ಸಮರ್ಥವಾಗಿದೆ: ರಾಜನಾಥ ಸಿಂಗ್