ಯಾವುದೇ ದೇಶದ ಅತಿಕ್ರಮಣವನ್ನು ಭಾರತ ಸಹಿಸುವುದಿಲ್ಲ, ತಕ್ಕ ಉತ್ತರ ನೀಡಲು ನಮ್ಮ ಸೇನೆ ಸಮರ್ಥವಾಗಿದೆ: ರಾಜನಾಥ ಸಿಂಗ್
ಚೀನಾಗೆ ನೀಡಿರುವ ಒಂದು ಸ್ಪಷ್ಟ ಸಂದೇಶದಲ್ಲಿ ರಕ್ಷಣಾ ಸಚಿವರು, ‘ಗಲ್ವಾನ್ ಪರಾಕ್ರಮಶಾಲಿಗಳು’ ನೀಡಿದ ಬಲಿದಾನವನ್ನು ಬಾರತ ಯಾವತ್ತೂ ಮರೆಯವುದಿಲ್ಲ ಎಂದು ಹೇಳಿ ಪ್ರತಿಯೊಂದು ಸವಾಲಿಗೆ ತಕ್ಕ ಉತ್ತರ ನೀಡಲು ಭಾರತದ ಸೇನೆ ಸಮರ್ಥವಾಗಿದೆ ಎಂದರು.
ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಪೂರ್ವ ಸೆಕ್ಟರ್ನ ಹತ್ತಿರದ ವಿವಾದಿತ ಪ್ರದೇಶಗಳಲ್ಲಿ ಎಲ್ಎಸಿಗೆ ಸಂಬಂಧಿಸಿದಂತೆ ಎರಡು ರಾಷ್ಟ್ರಗಳ ನಡುವೆ ಇರುವ ಆತಂಕದ ಹೊರತಾಗಿಯೂ ಅಲ್ಲಿ ಸಂಪೂರ್ಣ ಶಾಂತಿಯುತ ಪರಿಸ್ಥಿತಿ ನೆಲೆಗೊಳ್ಳುವ ಪ್ರಯತ್ನದ ಮೇರೆಗೆ ಮೂರು ದಿನಗಳ ಲಡಾಖ್ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಹನಾಥ ಸಿಂಗ್ ಅವರು ಸೋಮವಾರದಂದು ಅಲ್ಲಿ ನಿಯುಕ್ತಿಗೊಂಡಿರುವ ಭಾರತೀಯ ಸೈನಿಕರೊಂದಿಗೆ ಬಲವಾದ ಪ್ರಾರ್ಥನೆಯಲ್ಲಿ ತೊಡಗಿ ಅವರ ಸ್ಥೈರ್ಯ ಹೆಚ್ಚಿಸಿದರು. ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ವಿಡಿಯೋ ಒಂದರಲ್ಲಿ ರಕ್ಷಣಾ ಸಚಿವರು, ಸೈನಿಕರೊಂದಿಗೆ ಕೈಯನ್ನು ಗಾಳಿಯಲ್ಲಿ ಗುದ್ದುತ್ತಾ, ಜೋರು ಧ್ವನಿಯಲ್ಲಿ, ‘ವಾಹೆಗುರು ಜೀ ಕಾ ಖಾಲ್ಸಾ, ವಾಹೆಗುರು ಜೀ ಕಿ ಫತೇ (ಸಿಕ್ಖರು ದೇವರಿಗೆ ಸೇರಿದವರು, ದೇವರು ಜಯಶಾಲಿಯಾಗಿದ್ದಾನೆ), ಎಂದು ಪಠಿಸುತ್ತಿರುವುದನ್ನು ನೋಡಬಹುದಾಗಿದೆ.
#WATCH | Defence Minister Rajnath Singh and army personnel chorused 'Waheguru ji ka Khalsa, Waheguru ji ki Fateh' at Leh during his 3-day visit in the UT pic.twitter.com/thadzY5jfg
— ANI (@ANI) June 28, 2021
ಇದೇ ವೇಳೆ, ಚೀನಾಗೆ ನೀಡಿರುವ ಒಂದು ಸ್ಪಷ್ಟ ಸಂದೇಶದಲ್ಲಿ ಸಚಿವರು, ‘ಗಲ್ವಾನ್ ಪರಾಕ್ರಮಶಾಲಿಗಳು’ ನೀಡಿದ ಬಲಿದಾನವನ್ನು ಬಾರತ ಯಾವತ್ತೂ ಮರೆಯವುದಿಲ್ಲ ಎಂದು ಹೇಳಿ ಪ್ರತಿಯೊಂದು ಸವಾಲಿಗೆ ತಕ್ಕ ಉತ್ತರ ನೀಡಲು ಭಾರತದ ಸೇನೆ ಸಮರ್ಥವಾಗಿದೆ ಎಂದರು.
ಕಳೆದ ವರ್ಷ ಜೂನ್ 15ರಂದು ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಾಗ ಭಾರತದ 20 ಸೈನಿಕರು ದೇಶದ ಗಡಿ ರಕ್ಷಿಸುವಾಗ ವೀರಮರಣವನ್ನಿಪ್ಪಿದ್ದರು, ಸದರಿ ಕಾದಾಟವು ಎರಡು ರಾಷ್ಟ್ರಗಳ ಮಿಲಿಟರಿ ಪಡೆಗಳ ಮಧ್ಯೆ ದಶಕಳಲ್ಲೇ ನಡೆದ ಅತ್ಯಂತ ಗಂಭೀರ ಸ್ವರೂಪದ ತಿಕ್ಕಾಟವಾಗಿದೆ.
‘ದೇಶದ ರಕ್ಷಣೆಗಾಗಿ ಭಾರತದ ಸೈನಿಕರು ತಮ್ಮ ಪ್ರಾಣಗಳನ್ನು ಆಹುತಿ ನೀಡಿದ್ದನ್ನು ಭಾರತ ಯಾವತ್ತೂ ಮರೆಯುವುದಿಲ್ಲ,’ ಎಂದು ರಕ್ಷಣಾ ಸಚಿವರು ಹೇಳಿದರು.
ತಮ್ಮ ಪ್ರವಾಸದ ಎರಡನೇ ದಿನ ನಡೆದ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಸಚಿವರು, ಎರಡು ರಾಷ್ಟ್ರಗಳ ನಡುವೆ ಸೌಹಾರ್ದಯುತ ಸಂಬಂಧ ಏರ್ಪಡುವುದನ್ನು ಸಾಧ್ಯವಾಗಿಸಲು, ಸಮಸ್ಯೆಗಳನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಹೇಳಿ, ಹಾಗಂತ ಯಾವುದೇ ದೇಶ ತನ್ನ ಭಾರತದ ತಂಟೆಗೆ ಬಂದು ಬೆದರಿಸುವ ಪ್ರಯತ್ನ ಮಾಡಿದರೆ ಅದನ್ನು ಸಹಿಸಿಕೊಳ್ಳಲಾಗದು ಎಂದರು.
‘ಭಾರತ ಶಾಂತಿಯನ್ನು ಬಯಸುತ್ತದೆ. ಗಡಿ ಪ್ರದೇಶಗಳಲ್ಲಿ ಸದಾ ಶಾಂತಿ ನೆಲೆಗೊಂಡಿದ್ದರೆ, ಗಡಿ ಪ್ರದೇಶದ ಆಚೆ-ಈಚೆ ಇರುವ ದೇಶಗಳ ನಡುವೆ ಸೌಹಾರ್ದಯುತ ಮತ್ತು ಶಾಂತಿಯುತ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ನಾವು ಶಾಂತಿಪ್ರಿಯರು ಅಂದಾಕ್ಷಣ ಬೇರೆ ದೇಶಗಳ ಅತಿಕ್ರಮಣ ಸಹಿಸುತ್ತೇವೆ ಎಂಬ ಅರ್ಥವಲ್ಲ. ಯಾವುದೇ ದೇಶ ನಮ್ಮನ್ನು ಹೆದರಿಸುವ ಇಲ್ಲವೇ ವಿನಾಕಾರಣ ತಂಟೆಗೆ ಬರುವ ಪ್ರಯತ್ನ ಮಾಡಿದರೆ ನಾವು ಸರ್ವಥಾ ಸುಮ್ಮನಿರುವುದಿಲ್ಲ. ತಕ್ಕ ಉತ್ತರ ನೀಡಲು ನಮ್ಮ ಸೇನೆ ಸದಾ ಸನ್ನದ್ಧವಾಗಿರುತ್ತದೆ,’ ಎಂದು ರಕ್ಷಣಾ ಸಚಿವ ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ಸ್ಪಷ್ಟ ಎಚ್ಚರಿಕೆ ರವಾನಿಸಿದರು.
ಲಡಾಖ್ನಲ್ಲಿ ಗಡಿ ರಸ್ತೆಗಳ ಸಂಸ್ಥೆ (ಬಾರ್ಡರ್ ರೋಡ್ಸ್ ಆರ್ಗನೈಸೇಷನ್) ಜಾರಿಗೊಳಿಸಿದ 63 ಇನ್ಫ್ರಾಸ್ಟ್ರಕ್ಚರ್ ಯೋಜನೆಗಳನ್ನು ರಾಜನಾಥ ಸಿಂಗ ಅವರು ಸೋಮವಾರ ಉದ್ಘಾಟಿಸಿದರು.
ಇದನ್ನೂ ಓದಿ: ಅಸ್ಸಾಂನಲ್ಲಿ ಭಯೋತ್ಪಾದನೆ, ಒಳನುಸುಳುವಿಕೆ ಕಡಿಮೆಯಾಗಿದೆ; ರಾಜ್ಯ ಪ್ರಗತಿಯ ಹಾದಿಯಲ್ಲಿದೆ: ರಾಜ್ನಾಥ್ ಸಿಂಗ್