AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CoWIN Portal: ವಿದೇಶಗಳ ಗಮನ ಸೆಳೆದ ಕೊವಿನ್​ ಪೋರ್ಟಲ್​; ವ್ಯವಸ್ಥೆ ಅಳವಡಿಸಿಕೊಳ್ಳಲು ಆಸಕ್ತಿ ತೋರುತ್ತಿವೆ ಹಲವು ರಾಷ್ಟ್ರಗಳು

ಭಾರತದಲ್ಲಿ ಕೊವಿನ್​ ಆ್ಯಪ್​​ನಿಂದ ತುಂಬ ಅನುಕೂಲವಾಗುತ್ತಿದೆ. ಈ ಹಿಂದೆ ಆಧಾರ್​, ಯುಪಿಐ ಅಭಿವೃದ್ಧಿ ಪಡಿಸಿದ ಅನುಭವದಲ್ಲೇ ಈ ಪೋರ್ಟಲ್​ ಕೂಡ ಹೊರತರಲಾಗಿತ್ತು ಎಂದು ಡಾ. ಆರ್​.ಎಸ್​.ಶರ್ಮಾ ತಿಳಿಸಿದ್ದಾರೆ.

CoWIN Portal: ವಿದೇಶಗಳ ಗಮನ ಸೆಳೆದ ಕೊವಿನ್​ ಪೋರ್ಟಲ್​; ವ್ಯವಸ್ಥೆ ಅಳವಡಿಸಿಕೊಳ್ಳಲು ಆಸಕ್ತಿ ತೋರುತ್ತಿವೆ ಹಲವು ರಾಷ್ಟ್ರಗಳು
ಕೊವಿನ್ ಪೋರ್ಟಲ್​
TV9 Web
| Updated By: Lakshmi Hegde|

Updated on: Jun 28, 2021 | 4:12 PM

Share

ಭಾರತದಲ್ಲಿ ಕೊವಿಡ್​ 19 ಲಸಿಕೆಯನ್ನು ವ್ಯವಸ್ಥಿತವಾಗಿ ನೀಡಲು, ನೋಂದಣಿಗಾಗಿ ಕೊವಿನ್​ ಪೋರ್ಟಲ್​ (CoWIN Portal) ಆನ್​​ಲೈನ್ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಪಡೆಯುವವರು ಮೊದಲು ಈ ಪೋರ್ಟಲ್​ಗೆ ಹೋಗಿ ನೋಂದಣಿ ಮಾಡಿಕೊಂಡರೆ, ಅವರಿಗೆ ಮೆಸೇಜ್​ ಬರುತ್ತದೆ. ಆ ದಿನ ಹೋಗಿ ಲಸಿಕೆ ಪಡೆದರಾಯಿತು. ಇದರಿಂದ ಲಸಿಕೆ ಪಡೆಯುವ ಪ್ರಕ್ರಿಯೆ ತೀರ ಸರಳವಾಗುತ್ತಿದೆ. ಈಗಂತೂ ಕೊವಿನ್​ ಪೋರ್ಟಲ್​​ನ್ನು ಹಿಂದಿ ಸೇರಿ ಪ್ರಾದೇಶಿಕ ಭಾಷೆಗಳಲ್ಲೂ ಅಭಿವೃದ್ಧಿ ಪಡಿಸಿದ್ದು, ಜನರಿಗೆ ಇನ್ನಷ್ಟು ಅನುಕೂಲವಾಗಿದೆ. ಇಂಥ ಕೊವಿನ್​ ಪೋರ್ಟಲ್​ ಇದೀಗ ವಿದೇಶಿಯರ ಆಕರ್ಷಣೆಯಾಗಿದೆ.

ಭಾರತದಲ್ಲಿ ಕೊವಿನ್​ ಪೋರ್ಟಲ್​ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿರುವ ಬೆನ್ನಲ್ಲೇ ಮಧ್ಯ ಏಷ್ಯಾ, ಲ್ಯಾಟಿನ್ ಆಮೆರಿಕಾ, ಆಫ್ರಿಕಾ ಸೇರಿದಂತೆ 50 ದೇಶಗಳು ಈ ಪೋರ್ಟಲ್​ ವ್ಯವಸ್ಥೆ ಅಳವಡಿಕೆ ಆಸಕ್ತಿ ವಹಿಸಿವೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಸಿಇಒ ಸಿಇಒ, ಡಾ. ಆರ್​.ಎಸ್​.ಶರ್ಮಾ ತಿಳಿಸಿದ್ದಾರೆ. ಇನ್ನು ಆಸಕ್ತಿ ವ್ಯಕ್ತಪಡಿಸಿದ ದೇಶಗಳಿಗೆ ಕೋವಿನ್ ಪೋರ್ಟಲ್ ತಂತ್ರಜ್ಞಾನ ನೀಡಲು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾಗಿಯೂ ಹೇಳಿದ್ದಾರೆ.

ಭಾರತದಲ್ಲಿ ಕೊವಿನ್​ ಆ್ಯಪ್​​ನಿಂದ ತುಂಬ ಅನುಕೂಲವಾಗುತ್ತಿದೆ. ಈ ಹಿಂದೆ ಆಧಾರ್​, ಯುಪಿಐ ಅಭಿವೃದ್ಧಿ ಪಡಿಸಿದ ಅನುಭವದಲ್ಲೇ ಈ ಪೋರ್ಟಲ್​ ಕೂಡ ಹೊರತರಲಾಗಿತ್ತು. ಕೇವಲ 5 ತಿಂಗಳಲ್ಲಿ ಈ ಪೋರ್ಟಲ್​​ನಲ್ಲಿ 30 ಕೋಟಿ ಬಳಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ. ಅವರೆಲ್ಲರ ವಿವರವೂ ಈ ಪೋರ್ಟಲ್​ನಲ್ಲಿ ಲಭ್ಯವಿದೆ ಎಂದು ಆರ್​.ಎಸ್.ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಐಎಎಫ್ ನೆಲೆಯಲ್ಲಿ ಸ್ಫೋಟ ಸಂಭವಿಸಿದ ನಂತರ ಜಮ್ಮುವಿನ ಕಲುಚಕ್ ಸೇನಾ ಶಿಬಿರದ ಮೇಲೆ ಮತ್ತೆರಡು ಡ್ರೋನ್ ಪತ್ತೆ

(CoWIN Portal attract foreign Countries said National Health Authoritys CEO S R Sharma)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು