ಕೊವಿಶೀಲ್ಡ್ ಲಸಿಕೆ ಪಡೆದವರು ಯುರೋಪ್‌ಗೆ ಪ್ರಯಾಣಿಸಲಿರುವ ಅಡ್ಡಿ ಶೀಘ್ರ ಪರಿಹಾರ: ಅದಾರ್ ಪೂನಾವಾಲಾ ಭರವಸೆ
Adar Poonawalla: ಕೊವಿಶೀಲ್ಡ್ ಅನ್ನು ತೆಗೆದುಕೊಂಡ ಬಹಳಷ್ಟು ಭಾರತೀಯರು ಯುರೋಪ್ ರಾಷ್ಟ್ರಗಳಿಗೆ ಪ್ರಯಾಣಿಸುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನನ್ನ ಗಮನಕ್ಕೆ ಬಂದಿದೆ, ಎಲ್ಲರಿಗೂ ನಾನು ಭರವಸೆ ನೀಡುತ್ತೇನೆ, ನಾನು ಇದನ್ನು ಉನ್ನತ ಮಟ್ಟದಲ್ಲಿ ತೆಗೆದುಕೊಂಡಿದ್ದೇನೆ.
ದೆಹಲಿ: ಕೊವಿಶೀಲ್ಡ್ ಲಸಿಕೆ ಪಡೆದವರು ಯುರೋಪ್‌ಗೆ ಪ್ರಯಾಣಿಸಲು ಇರುವ ಅಡ್ಡಿಯನ್ನು ಶೀಘ್ರ ದಲ್ಲೇ ಬಗೆಹರಿಸಿಕೊಡುವುದಾಗಿ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅದಾರ್ ಪೂನಾವಾಲಾ ಭರವಸೆ ನೀಡಿದ್ದಾರೆ. ಕೊವಿಶೀಲ್ಡ್ ಎಂಬುದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾ ಲಸಿಕೆ, ಇದನ್ನು ಪುಣೆ ಮೂಲದ ಸೆರಮ್ ಲಸಿಕೆ ತಯಾರಕರು ಭಾರತದಲ್ಲಿ ತಯಾರಿಸುತ್ತಾರೆ.
ಕೊವಿಶೀಲ್ಡ್ ಅನ್ನು ತೆಗೆದುಕೊಂಡ ಬಹಳಷ್ಟು ಭಾರತೀಯರು ಯುರೋಪ್ ರಾಷ್ಟ್ರಗಳಿಗೆ ಪ್ರಯಾಣಿಸುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನನ್ನ ಗಮನಕ್ಕೆ ಬಂದಿದೆ, ಎಲ್ಲರಿಗೂ ನಾನು ಭರವಸೆ ನೀಡುತ್ತೇನೆ, ನಾನು ಇದನ್ನು ಉನ್ನತ ಮಟ್ಟದಲ್ಲಿ ತೆಗೆದುಕೊಂಡಿದ್ದೇನೆ. ಆಯಾ ದೇಶಗಳ ನಿಯಂತ್ರಣ ಪ್ರಾಧಿಕಾರಗಳು ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಈ ವಿಷಯವನ್ನು ಶೀಘ್ರದಲ್ಲೇ ಪರಿಹರಿಸಲು ಆಶಿಸುತ್ತೇನೆ. ”ಎಂದು ಪೂನಾವಾಲಾ ಟ್ವೀಟ್ ನಲ್ಲಿ ಹೇಳಿದ್ದಾರೆ.
I realise that a lot of Indians who have taken COVISHIELD are facing issues with travel to the E.U., I assure everyone, I have taken this up at the highest levels and hope to resolve this matter soon, both with regulators and at a diplomatic level with countries.
— Adar Poonawalla (@adarpoonawalla) June 28, 2021
Covishield ಮಾಧ್ಯಮ ವರದಿಗಳ ಪ್ರಕಾರ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೊವಿಶೀಲ್ಡ್ ಲಸಿಕೆ ಪಡೆದವರು ಯುರೋಪ್ ಒಕ್ಕೂಟದ ‘ಗ್ರೀನ್ ಪಾಸ್’ ಪಡೆಯಲು ಅರ್ಹರಲ್ಲ ಎನ್ನಲಾಗಿದೆ.
ಈಗಿನಂತೆ ಯುರೋಪ್ ಒಕ್ಕೂಟದ (EU) ವ್ಯಾಕ್ಸ್‌ಜೆವ್ರಿಯಾವನ್ನು (ಈ ಹಿಂದೆ ಕೊವಿಡ್-19 ಲಸಿಕೆ ಅಸ್ಟ್ರಾಜೆನೆಕಾ, ಆಕ್ಸ್‌ಫರ್ಡ್) ಅಂಗೀಕರಿಸುತ್ತದೆ. ಯುರೋಪಿಯನ್ ಮೆಡಿಸಿನ್ ಏಜೆನ್ಸಿ ಅನುಮೋದಿಸಿದ ಇತರ ಲಸಿಕೆಗಳು ಬಯೋಟೆಕ್-ಫೈಜರ್, ಮಾಡರ್ನಾ ಮತ್ತು ಜಾನ್ಸೆನ್ (ಜಾನ್ಸನ್ ಮತ್ತು ಜಾನ್ಸನ್) ಆಗಿದೆ.
ಇದನ್ನೂ ಓದಿ: Covishield SIIನ ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಯುರೋಪಿಯನ್ ಯೂನಿಯನ್‌ಗೆ ನೋ ಎಂಟ್ರಿ..