Covishield SIIನ ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಯುರೋಪಿಯನ್ ಯೂನಿಯನ್‌ಗೆ ನೋ ಎಂಟ್ರಿ..

ಇಂಗ್ಲೆಂಡ್‌ನಲ್ಲಿ ಉತ್ಪಾದನೆಯಾಗುವ ಆಕ್ಸ್‌ಫರ್ಡ್ ವಿವಿಯ ಲಸಿಕೆಗೆ ಯೂರೋಪಿಯನ್ ಯೂನಿಯನ್ ಒಪ್ಪಿಗೆ ನೀಡಿದೆ. ಆದರೆ ಭಾರತದಲ್ಲಿ ಉತ್ಪಾದನೆಯಾಗುವ ಕೊವಿಶೀಲ್ಡ್ ಲಸಿಕೆಗೆ ಯುರೋಪ್ ಮೆಡಿಸಿನ್ ಏಜೆನ್ಸಿ ಅನುಮೋದನೆ ನೀಡಿಲ್ಲ.

Covishield SIIನ ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಯುರೋಪಿಯನ್ ಯೂನಿಯನ್‌ಗೆ ನೋ ಎಂಟ್ರಿ..
ಕೊವಿಡ್​ ಲಸಿಕೆ
Follow us
TV9 Web
| Updated By: ಆಯೇಷಾ ಬಾನು

Updated on: Jun 28, 2021 | 3:34 PM

ದೆಹಲಿ: ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸಿದ ಕೊವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರು ಯುರೋಪಿಯನ್ ಯೂನಿಯನ್ ‘ಗ್ರೀನ್ ಪಾಸ್’ ಗೆ ಅರ್ಹರಲ್ಲ. ಜುಲೈ 1 ರಿಂದ SIIನ ಕೊವಿಶೀಲ್ಡ್ ಲಸಿಕೆ ಪಡೆದವರಿಗೆ ಯುರೋಪಿಯನ್ ಯೂನಿಯನ್‌ಗೆ ಎಂಟ್ರಿ ಇರುವುದಿಲ್ಲ.

ಇಂಗ್ಲೆಂಡ್‌ನಲ್ಲಿ ಉತ್ಪಾದನೆಯಾಗುವ ಆಕ್ಸ್‌ಫರ್ಡ್ ವಿವಿಯ ಲಸಿಕೆಗೆ ಯೂರೋಪಿಯನ್ ಯೂನಿಯನ್ ಒಪ್ಪಿಗೆ ನೀಡಿದೆ. ಆದರೆ ಭಾರತದಲ್ಲಿ ಉತ್ಪಾದನೆಯಾಗುವ ಕೊವಿಶೀಲ್ಡ್ ಲಸಿಕೆಗೆ ಯುರೋಪ್ ಮೆಡಿಸಿನ್ ಏಜೆನ್ಸಿ ಅನುಮೋದನೆ ನೀಡಿಲ್ಲ. ಆಮೆರಿಕಾದ ಫೈಜರ್, ಮಾಡೆರ್ನಾ ಲಸಿಕೆಗಳಿಗೆ ಯೂರೋಪ್ ಮೆಡಿಸಿನ್ ಏಜೆನ್ಸಿ ಒಪ್ಪಿಗೆ ನೀಡಿದೆ. ಆದರೆ ಆಕ್ಸ್‌ಫರ್ಡ್ ವಿವಿ ಸಂಶೋಧನೆಯ ಲಸಿಕೆ ಉತ್ಪಾದನೆಯಾಗುವ ಲಸಿಕೆಗೆ ಮನ್ನಣೆ ಇಲ್ಲ. ಹೀಗಾಗಿ ಒಪ್ಪಿಗೆ ಪಡೆಯುವಂತೆ ಯೂರೋಪ್ ಮೆಡಿಸಿನ್ ಏಜೆನ್ಸಿ, ಸೆರಮ್‌ಗೆ ಸೂಚನೆ ನೀಡಿದೆ.

ಕೊವಿಶೀಲ್ಡ್ ಲಸಿಕೆಗೆ ಯೂರೋಪ್ ಮೆಡಿಸಿನ್ ಏಜೆನ್ಸಿಯ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರದಿಂದ ಪುಣೆಯ ಎಸ್‌ಐಐಗೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ರಾಜತಾಂತ್ರಿಕ ಮಟ್ಟದಲ್ಲಿ ಯುರೋಪಿಯನ್ ಯೂನಿಯನ್ ರಾಷ್ಟ್ರಗಳ ಜೊತೆಗೆ ಚರ್ಚೆ ನಡೆಯುತ್ತಿದೆ. WHOನಿಂದ ಅನುಮೋದನೆ ಪಡೆದ ಲಸಿಕೆಗಳಿಗೆ ಗ್ರೀನ್ ಪಾಸ್ ನೀಡುವಂತೆ ಭಾರತ ಒತ್ತಾಯಿಸಿದೆ. ಕೊವಿಶೀಲ್ಡ್ ಲಸಿಕೆಗೆ WHO ತುರ್ತುಬಳಕೆಗೆ ಒಪ್ಪಿಗೆ ನೀಡಿದೆ. ಆದರೆ ಯುರೋಪಿಯನ್ ಯೂನಿಯನ್ ಒಪ್ಪಿಗೆ ನೀಡಿಲ್ಲ ಎಂದು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನಾವಾಲಾ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದಲ್ಲಿ ವಿಷಯ ಪ್ರಸ್ತಾಪಿಸಿದ್ದೇವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದರು.

ಇದನ್ನೂ ಓದಿ: ಕೊವೀಶೀಲ್ಡ್​ ತಯಾರಕರಿಗೆ ಯೂರೋಪಿಯನ್​ ಯೂನಿಯನ್​ನಿಂದ ಸಂಕಷ್ಟ: ಲಸಿಕೆ ನೀಡಿಕೆ ವಿಳಂಬ, ಕೋರ್ಟ್​ ಕೇಸ್ ಸಾಧ್ಯತೆ