ಕೊವೀಶೀಲ್ಡ್​ ತಯಾರಕರಿಗೆ ಯೂರೋಪಿಯನ್​ ಯೂನಿಯನ್​ನಿಂದ ಸಂಕಷ್ಟ: ಲಸಿಕೆ ನೀಡಿಕೆ ವಿಳಂಬ, ಕೋರ್ಟ್​ ಕೇಸ್ ಸಾಧ್ಯತೆ

ವಿದೇಶಕ್ಕೆ ಲಸಿಕೆ ರಫ್ತು ಮಾಡುತ್ತಿರುವುದನ್ನು ವಿರೋಧ ಮಾಡುತ್ತಿರುವ ಭಾರತೀಯ ರಾಜಕೀಯ ಪಕ್ಷಗಳ ನಿಲುವಿನ ನಡುವೆ, ಒಪ್ಪಂದಕ್ಕೆ ವಿರುದ್ಧವಾಗಿ ಕೊವಿಶೀಲ್ಡ್​ ಲಸಿಕೆಯನ್ನು ಕಡಿಮೆ ಕೊಟ್ಟಿದ್ದಕ್ಕಾಗಿ, ಯುರೋಪಿನ್​ ಯೂನಿಯನ್​, ಆಕ್ಸಫರ್ಡ್​ ವಿಶ್ವವಿದ್ಯಾಲಯ-ಆಸ್ಟ್ರಾಜೆನೆಕಾ ವಿರುದ್ಧ ಕೋರ್ಟ್​ಗೆ ಹೋಗಲು ನಿರ್ಧರಿಸಿದೆ.

  • TV9 Web Team
  • Published On - 19:01 PM, 22 Apr 2021
ಕೊವೀಶೀಲ್ಡ್​ ತಯಾರಕರಿಗೆ ಯೂರೋಪಿಯನ್​ ಯೂನಿಯನ್​ನಿಂದ ಸಂಕಷ್ಟ: ಲಸಿಕೆ ನೀಡಿಕೆ ವಿಳಂಬ, ಕೋರ್ಟ್​ ಕೇಸ್ ಸಾಧ್ಯತೆ
ಕೋವಿಶೀಲ್ಡ್ ಲಸಿಕೆ

ತಾನು ಒಪ್ಪಿಕೊಂಡಂತೆ ಕೋವಿಡ್ -19 ಲಸಿಕೆ ಪ್ರಮಾಣವನ್ನು ಯೂರೋಪಿಯನ್​ ಯೂನಿಯನ್​ಗೆ ಹಂಚಿಲ್ಲ ಎಂಬ ಕಾರಣಕ್ಕಾಗಿ, ಯುರೋಪಿಯನ್ ಕಮಿಷನ್ ಅಸ್ಟ್ರಾಜೆನೆಕಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ. ಸೆರಮ್​ ಇನ್ಸಟಿಟ್ಯೂಟ್​ ಲಸಿಕೆ ಕೊಡಲು ತಡ ಆಗುತ್ತಿರುವ ಹಿನ್ನೆಲೆಯಲ್ಲಿ ಯೂರೋಪಿಯನ್​ ಯೂನಿಯನ್​ ಸದಸ್ಯ ರಾಷ್ಟ್ರಗಳಲ್ಲಿ ಲಸಿಕೆ ಹಂಚಿಕೆ ತಡವಾಗಬಹುದು ಎಂದು ಅದು ಹೇಳಿದೆ. ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಜೊತೆಗೂಡಿ ಅಸ್ಟ್ರಾಜೆನೆಕಾ ಕಂಪೆನಿ ಅಭಿವೃದ್ಧಿ ಪಡಿಸಿದ ಕೊವೀಶೀಲ್ಡ್​ ಲಸಿಕೆ ಈಗ ಭಾರತದಲ್ಲಿ ನೀಡಲಾಗುತ್ತಿದೆ. ಕೊವಿಡ್​ ಎರಡನೇ ಅಲೆಯ ಹೊಡತಕ್ಕೆ ಸಿಲುಕಿರುವ ಭಾರತ, ಇದರಿಂದ ಪಾರಾಗಲು ಕೋವೀಶೀಲ್ಡ್​ ಮತ್ತು ಕೋವ್ಯಾಕ್ಸಿನ್​ನ್ನು ಅವಲಂಬಿಸಿದೆ. ಯೂರೋಪಿಯನ್​ ಯೂನಿಯನ್​ನ ಹೊಸ ವರಸೆಯಿಂದಾಗಿ ಈಗ ಭಾರತಕ್ಕೆ ತೊಂದರೆ ಆದಂತಾಗಿದೆ.

ಭಾರತದಲ್ಲಿನ ವಿರೋಧ ಪಕ್ಷಗಳು ಲಸಿಕೆ ರಫ್ತಿನ ವಿರುದ್ಧ ಸಮರ ಸಾರಿದ್ದು, ಲಸಿಕೆಯನ್ನು ರಫ್ತು ಮಾಡುತ್ತಿರುವುದು ಬಿಜೆಪಿ ಸರಕಾರ. ನಮ್ಮ ದೇಶಕ್ಕೆ ಬೇಕಾದ ಲಸಿಕೆ ಇಟ್ಟುಕೊಳ್ಳದೇ ವಿದೇಶಕ್ಕೆ ನೀಡುವುದು ಮಹಾಪರಾಧ ಎಂದು ಬಿಂಬಿಸಿ ವಿರೋಧ ಪಕ್ಷಗಳು ಆನ್ಲೈನ್​ ಚಳುವಳಿ ಪ್ರಾರಂಭಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.​

ಯೂರೋಪಿಯನ್​ ಯೂನಿಯನ್​ (ಈಯೂ) ಕಾರ್ಯನಿರ್ವಾಹಕರು ಸೆರಮ್​ ಇನ್ಸಟಿಟ್ಯೂಟ್​ ವಿರುದ್ಧ ಕಾನೂನು ಸಮರ ಕೈಗೊಳ್ಳುವ ಕುರಿತು ಸದಸ್ಯ ರಾಷ್ಟ್ರಗಳ ರಾಜತಾಂತ್ರಿಕ ಅಧಿಕಾರಿಗಳಿಗೆ ಬುಧವಾರ ಮಾಹಿತಿ ನೀಡಿದರು ಎಂದು ಕೆಲವು ರಾಜತಾಂತ್ರಿಕರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು ಮತ್ತು ಈಗಾಗಲೇ ಈ ಸುದ್ದಿ ಪ್ರಕಟಿಸಿರುವ ಪಾಲಿಟಿಕೊ ವೆಬ್‌ಸೈಟ್ ಮಾಹಿತಿಯನ್ನು ದೃಢಪಡಿಸಿದ್ದಾರೆ.

ಒಪ್ಪಂದದ ಪ್ರಕಾರ, ಅಸ್ಟ್ರಾಜೆನೆಕಾ ವಿರುದ್ಧದ ಯಾವುದೇ ಮೊಕದ್ದಮೆ ಬೆಲ್ಜಿಯಂ ನ್ಯಾಯಾಲಯದಲ್ಲಿ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು.  ಬ್ರಿಟಿಷ್-ಸ್ವೀಡಿಷ್ ಔಷಧೀಯ ಕಂಪನಿಯೊಂದಿಗೆ ಆಯೋಗದ ಒಪ್ಪಂದದ ಪ್ರಕಾರ ನ್ಯಾಯಾಧಿಕರಣ ವ್ಯಾಪ್ತಿ ಬೆಲ್ಜಿಯಂನ್ನಲಿ ಇದೆ. ಆದರೆ, ಆಯೋಗದ ವಕ್ತಾರ ಎರಿಕ್ ಮಾಮರ್ ಪತ್ರಕರ್ತರಿಗೆ “ಇನ್ನೂ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ” ಎಂದು ಹೇಳಿದರು.

ಇನ್ನೊಬ್ಬ ವಕ್ತಾರ, ಸ್ಟೀಫನ್ ಡಿ ಕೀರ್ಸ್‌ಮೇಕರ್ ಅವರು ಹೇಳಿದ್ದಿಷ್ಟು: “ನಿಮಗೆ ತಿಳಿದಿರುವಂತೆ, ಒಪ್ಪಂದದಲ್ಲಿ ಒಪ್ಪಿಗೆ ಸೂಚಿಸಲಾದ ಡೋಸ್‌ಗಳ ಸಂಖ್ಯೆಯನ್ನು ಅಸ್ಟ್ರಾಜೆನೆಕಾ ತಲುಪಿಸುತ್ತಿಲ್ಲ. ನಮ್ಮ ಮುಂದಿರುವ ಆಯ್ಕೆಗಳನ್ನು ನಾವು ಸದಸ್ಯ ರಾಷ್ಟ್ರಗಳೊಂದಿಗೆ ಚರ್ಚಿಸಲು ಇದು ಒಂದು ಕಾರಣವಾಗಿದೆ.”

ಹೆಸರು ಹೇಳಿಲಿಚ್ಚಿಸದ ಈಯು ರಾಜತಾಂತ್ರಿಕರು ಹೇಳಿದ್ದೇನೆಂದರೆ ಸದಸ್ಯ ರಾಷ್ಟ್ರಗಳನ್ನು ಬಯಸಿದೆ, ಈ ವಿಚಾರದಲ್ಲಿ ಮೊಕದ್ದಮೆಯನ್ನು ಬೆಂಬಲಿಸಲು ಮುಂದಾಗಿವೆ ಮತ್ತು ಈ ವಾರದ ಅಂತ್ಯದ ವೇಳೆಗೆ ಒಂದು ನಿರ್ಧಾರ ತೆಗೆದುಕೊಳ್ಳಲು ತಿಳಿಸಲಾಗಿದೆ ಎಂದು ಹೇಳಿದ್ದಾರೆ.

 

(European Union to consider filing a suit against Oxford University AstraZeneca for underdelivering Covishield covid vaccine)