AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎವರೆಸ್ಟ್​ ತಲುಪಿದ ಕೊರೊನಾ ವೈರಾಣು; ಪರ್ವತಾರೋಹಿಯಲ್ಲಿ ಪಾಸಿಟಿವ್​

Covid Cases in Mount Everest: ನೆಸ್​ ಎಂಬ ಪರ್ವತಾರೋಹಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಆತನನ್ನು ಹೆಲಿಕಾಪ್ಟರ್ ಮೂಲಕ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ.

ಎವರೆಸ್ಟ್​ ತಲುಪಿದ ಕೊರೊನಾ ವೈರಾಣು; ಪರ್ವತಾರೋಹಿಯಲ್ಲಿ ಪಾಸಿಟಿವ್​
ಮೌಂಟ್ ಎವೆರೆಸ್ಟ್
Skanda
| Edited By: |

Updated on:Apr 23, 2021 | 11:28 AM

Share

ಕಠ್ಮಂಡು: ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪವನ್ನು ಪಡೆಯುತ್ತಿದ್ದು, ಕೆಲ ರಾಜ್ಯಗಳ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯ ತನಕ ಕಣ್ಣು ಹಾಯಿಸಿದಲ್ಲೆಲ್ಲಾ ಕೊರೊನಾ ಇದೆ ಎಂದು ಜನರು ಮಾತನಾಡಿಕೊಳ್ಳುತ್ತಿರುವಾಗಲೇ ಭಾರತ ಮತ್ತು ನೇಪಾಳ ಗಡಿ ಭಾಗದಲ್ಲಿರುವ ಎವರೆಸ್ಟ್ ಪರ್ವತಕ್ಕೂ ಕೊರೊನಾ ಸೋಂಕು ಕಾಲಿಟ್ಟಿರುವ ಸುದ್ದಿ ಹೊರಬಿದ್ದಿದೆ. ನೇಪಾಳ ಸರ್ಕಾರ ಮೌಂಟ್ ಎವರೆಸ್ಟ್ ಪರ್ವತಾರೋಹಣಕ್ಕೆ ಪ್ರವಾಸಿಗರಿಗೆ ಅವಕಾಶ ನೀಡಿದ ಬೆನ್ನಲ್ಲೇ ನಾರ್ವೇ ಮೂಲದ ಪರ್ವತಾರೋಹಿ ಒಬ್ಬರಲ್ಲಿ ನಿನ್ನೆ (ಏಪ್ರಿಲ್ 23) ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು ಮೌಂಟ್​ ಎವರೆಸ್ಟ್​ಗೂ ಕೊರೊನಾ ಲಗ್ಗೆ ಇಟ್ಟಂತಾಗಿದೆ.

ನೆಸ್​ ಎಂಬ ಪರ್ವತಾರೋಹಿ ಕೊರೊನಾ ಸೋಂಕಿಗೆ ತುತ್ತಾಗಿದ್ದು, ಆತನನ್ನು ಹೆಲಿಕಾಪ್ಟರ್ ಮೂಲಕ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿರುವ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೆಸ್​, ನನ್ನಿಂದಾಗಿ ಪರ್ವತದ ತುದಿಯಲ್ಲಿದ್ದ ಬೇರೆಯವರಿಗೆ ಸೋಂಕು ಹಬ್ಬದಿರಲಿ ಎಂದೇ ಬಯಸುತ್ತೇನೆ. 8,000 ಮೀಟರ್​ಗಿಂತಲೂ ಎತ್ತರದಲ್ಲಿರುವ ಎಲ್ಲರನ್ನೂ ಹೆಲಿಕಾಪ್ಟರ್ ಮೂಲಕ ಸಾಗಿಸುವುದು ಅಸಾಧ್ಯದ ಮಾತು. ಮೊದಲೇ ಆ ಪ್ರದೇಶದಲ್ಲಿ ಉಸಿರಾಟದ ಸಮಸ್ಯೆ ಇರುತ್ತದೆ. ಅಂಥದ್ದರಲ್ಲಿ ಕೊರೊನಾ ಕಾಣಿಸಿಕೊಂಡರೆ ಭಾರೀ ಕಷ್ಟ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಇನ್ನೂ ಹಲವರಿಗೆ ಕೊರೊನಾ ಸೋಂಕು ತಗುಲಿರುವ ಶಂಕೆಯಿದ್ದು, ಸೋಂಕು ಹಬ್ಬುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಪರ್ವತಾರೋಹಣವನ್ನು ಈ ಬಾರಿ ಸ್ಥಗಿತಗೊಳಿಸುತ್ತಿರುವುದಾಗಿ ಅಯೋಜಕರು ತಿಳಿಸಿದ್ದಾರೆ. ಇನ್ನೊಂದು ಬಹುಮುಖ್ಯ ಸಂಗತಿ ಎಂದರೆ ಕೊರೊನಾ ಗುಣಲಕ್ಷಣಗಳಿಗೂ, ಪರ್ವತಾರೋಹಿಗಳಿಗೆ ಎತ್ತರದ ಪ್ರದೇಶವನ್ನೇರುವಾಗ ಕಾಡುವ ಕೆಲ ಸಾಮಾನ್ಯ ಸಮಸ್ಯೆಗಳಿಗೂ ಸಾಮ್ಯತೆ ಇರುವುದರಿಂದ ಈ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟವಾಗಿದೆ.

ಆದರೆ, ಏಷ್ಯಾದ ಬಡರಾಷ್ಟ್ರಗಳ ಪಟ್ಟಿಯಲ್ಲಿರುವ ನೇಪಾಳ ತನ್ನ ಆದಾಯದ ಬಹುಪಾಲು ಮೊತ್ತವನ್ನು ವಿದೇಶಿ ಪ್ರವಾಸಿಗರಿಮದ ನಿರೀಕ್ಷಿಸುತ್ತಿರುವ ಕಾರಣ ಸದ್ಯದ ಪರಿಸ್ಥಿತಿ ಸರ್ಕಾರಕ್ಕೆ ಕಷ್ಟಕರವಾಗಲಿದೆ. ಜೀವಮಾನದಲ್ಲೊಮ್ಮೆಯಾದರೂ ಎವರೆಸ್ಟ್ ಏರಬೇಕೆಂಬ ಕನಸು ಹೊತ್ತು ಆಗಮಿಸುವ ಸಾವಿರಾರು ಪ್ರವಾಸಿಗರಿಂದ ನೇಪಾಳ ಸರ್ಕಾರ ಈ ಬಾರಿ 3.8 ಮಿಲಿಯನ್ ಡಾಲರ್​ಗೂ ಹೆಚ್ಚು ಮೊತ್ತ ಸಂಗ್ರಹಿಸಿದೆ. ಕಳೆದ ಬಾರಿ ಪ್ರವಾಸಿಗರಿಲ್ಲದೇ ಎವರೆಸ್ಟ್ ಭಣಗುಡುತ್ತಿದ್ದ ಕಾರಣ ಈ ಬಾರಿ ಕೊರೊನಾ ಸೋಂಕು ಕೊಂಚ ಇಳಿಮುಖವಾಗುತ್ತಿದ್ದಂತೆಯೇ ಪ್ರವಾಸಿಗರನ್ನು ಆಹ್ವಾನಿಸಿದ್ದ ನೇಪಾಳಕ್ಕೆ ಇದು ಭಾರೀ ಹೊಡೆತ ನೀಡಲಿದೆ.

ಇದನ್ನೂ ಓದಿ: ಮೌಂಟ್ ಅನ್ನಪೂರ್ಣ ಏರಿದ ದೇಶದ ಮೊದಲ ಮಹಿಳೆ; ಪರ್ವತಾರೋಹಿ ಪ್ರಿಯಾಂಕ ಮೊಹಿತೆ ಹೊಸ ದಾಖಲೆ 

ಕೊರೊನಾ ಲಕ್ಷಣ ಕಾಣಿಸಿಕೊಂಡ ಕೂಡ್ಲೇ ವೈದ್ಯರನ್ನ ಸಂಪರ್ಕ ಮಾಡಿ ಟ್ರೀಟ್ಮೆಂಟ್ ತಗೋಳ್ಳಿ

Published On - 10:29 am, Fri, 23 April 21