ಮೌಂಟ್ ಅನ್ನಪೂರ್ಣ ಏರಿದ ದೇಶದ ಮೊದಲ ಮಹಿಳೆ; ಪರ್ವತಾರೋಹಿ ಪ್ರಿಯಾಂಕ ಮೊಹಿತೆ ಹೊಸ ದಾಖಲೆ
ಬಯೊಕಾನ್ ಕಾರ್ಯನಿರ್ವಾಹಕ ಅಧಿಕಾರಿ, ಪರ್ವತಾರೋಹಿ ರಾಷ್ಟ್ರಧ್ವಜ ಹಿಡಿದುಕೊಂಡಿರುವ ಫೊಟೊವನ್ನು ಕೂಡ ಹಂಚಿಕೊಂಡಿದ್ದಾರೆ. ಮೌಂಟ್ ಅನ್ನಪೂರ್ಣ ನೇಪಾಳದಲ್ಲಿ ಇರುವ ಹಿಮಾಲಯಾ ಶ್ರೇಣಿಯ ಶಿಖರವಾಗಿದೆ. ಹಾಗೂ ಆರೋಹಕ್ಕೆ ಬಲುಕಠಿಣವಾಗಿರುವ ಶಿಖರ ಇದು ಎಂದು ಗುರುತಿಸಿಕೊಂಡಿದೆ.
ವಿಶ್ವದ ಹತ್ತನೇ ಅತಿ ಎತ್ತರದ ಪರ್ವತ ಶಿಖರ ಮೌಂಟ್ ಅನ್ನಪೂರ್ಣವನ್ನು ಪಶ್ಚಿಮ ಮಹಾರಾಷ್ಟ್ರದ ಪ್ರಿಯಾಂಕ ಮೊಹಿತೆ ಎಂಬಾಕೆ ಆರೋಹಣ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. 28 ವರ್ಷದ ಪ್ರಿಯಾಂಕ ಎಂಬವರು ಮೌಂಟ್ ಅನ್ನಪೂರ್ಣ ಶಿಖರವನ್ನು ಏರಿರುವ ಬಗ್ಗೆ, ಸಹೋದ್ಯೋಗಿ ಮತ್ತು ಬಯೊಕಾನ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಮಾಜುಮ್ದಾರ್ ಶಾ ಎಂಬವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ನಮ್ಮ ಸಹೋದ್ಯೋಗಿ ಪ್ರಿಯಾಂಕ ಮೊಹಿತೆ, 8091 ಮೀಟರ್ ಎತ್ತರದ ಹಾಗೂ ವಿಶ್ವದ ಹತ್ತನೇ ಅತಿ ಎತ್ತರದ ಶಿಖರವಾಗಿರುವ ಮೌಂಟ್ ಅನ್ನಪೂರ್ಣ ಪರ್ವತವನ್ನು ಏರಿದ್ದಾರೆ. 2021 ಏಪ್ರಿಲ್ 16ರಂದು ಮಧ್ಯಾಹ್ನ 1.30ರ ವೇಳೆಗೆ ಶಿಖರದ ತುದಿ ತಲುಪಿದ್ದಾರೆ. ಪ್ರಿಯಾಂಕ, ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆಯಾಗಿದ್ದಾರೆ. ನಾವು ಈ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ಕಿರಣ್ ಮಜುಮ್ದಾರ್ ಶಾ ಟ್ವೀಟ್ ಮಾಡಿದ್ದಾರೆ.
ಬಯೊಕಾನ್ ಕಾರ್ಯನಿರ್ವಾಹಕ ಅಧಿಕಾರಿ, ಪರ್ವತಾರೋಹಿ ರಾಷ್ಟ್ರಧ್ವಜ ಹಿಡಿದುಕೊಂಡಿರುವ ಫೊಟೊವನ್ನು ಕೂಡ ಹಂಚಿಕೊಂಡಿದ್ದಾರೆ. ಮೌಂಟ್ ಅನ್ನಪೂರ್ಣ ನೇಪಾಳದಲ್ಲಿ ಇರುವ ಹಿಮಾಲಯಾ ಶ್ರೇಣಿಯ ಶಿಖರವಾಗಿದೆ. ಹಾಗೂ ಆರೋಹಕ್ಕೆ ಬಲುಕಠಿಣವಾಗಿರುವ ಶಿಖರ ಇದು ಎಂದು ಗುರುತಿಸಿಕೊಂಡಿದೆ.
Our colleague Priyanka Mohite scaled the peak of Mt. Annapurna, (8091 mtrs) 10th highest mountain in the world, on 16th April 2021 at 1.30pm.- first Indian woman to do so! We at @SyngeneIntl are so very proud of her ?゚ムマ pic.twitter.com/Eh85xy46g0
— Kiran Mazumdar-Shaw (@kiranshaw) April 19, 2021
ಪರ್ವತಾರೋಹಿ ಪ್ರಿಯಾಂಕ ಮೊಹಿತೆ 2013ರಲ್ಲಿ 8,849 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದರು. 2018ರಲ್ಲಿ 8,516 ಮೀಟರ್ ಎತ್ತರದ ಮೌಂಟ್ ಲೋಟ್ಸೆ ಶಿಖರವನ್ನು, 8,485 ಮೀಟರ್ ಎತ್ತರದ ಮೌಂಟ್ ಮಕಲು ಶಿಖರವನ್ನು ಹಾಗೂ 2016ರಲ್ಲಿ 5,895 ಮೀಟರ್ ಎತ್ತರದ ಮೌಂಟ್ ಕಿಲಿಮಂಜಾರೋ ಪರ್ವತವನ್ನು ಏರಿದ್ದರು.
ತಮ್ಮ ಬಾಲ್ಯದಿಂದಲೂ ಪರ್ವತಾರೋಹಣದ ಬಗ್ಗೆ ಆಸಕ್ತಿ ಹೊಂದಿರುವ ಪ್ರಿಯಾಂಕ, ಮಹಾರಾಷ್ಟ್ರದ ಸಹ್ಯಾದ್ರಿ ಶ್ರೇಣಿ ಪರ್ವತಗಳನ್ನು ಹತ್ತುತ್ತಾ ಪರ್ವತಾರೋಹಣ ಅಭ್ಯಾಸ ಮಾಡಿಕೊಂಡರು. ಹಿಮಾಲಯದ ಗರ್ವಾಲ್ ವಿಭಾಗದ ಶ್ರೇಣಿಯನ್ನು ಆರೋಹಣ ಮಾಡುವ ಮೂಲಕ 2012ರಲ್ಲಿ ಅಧಿಕೃತವಾಗಿ ಪರ್ವತ ಶ್ರೇಣಿ ಏರಲು ಆರಂಭಿಸಿದ್ದರು ಎಂದು ಪ್ರಿಯಾಂಕ ಸಹೋದರ ಆಕಾಶ್ ಮೊಹಿತೆ ಪಿಟಿಐಗೆ ತಿಳಿಸಿದ್ದಾರೆ. ಬೆಂಗಳೂರು ಮೂಲದ ಪರ್ವತಾರೋಹಿ, ಮಹಾರಾಷ್ಟ್ರ ಸರ್ಕಾರದ 2017-18 ಸಾಲಿನ ಶಿವ ಛತ್ರಪತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಹೊಸ ಎತ್ತರದ ದಾಖಲೆ ಬರೆದ ಮೌಂಟ್ ಎವೆರೆಸ್ಟ್: ಎತ್ತರ ಎಷ್ಟು ಹೆಚ್ಚಾಗಿದೆ?
ಇದನ್ನೂ ಓದಿ: ಅಂಜನಾದ್ರಿ ಪರ್ವತಕ್ಕೆ ರಾಜ್ಯಪಾಲರ ಭೇಟಿ: ಗುಜರಾತ್ನ ಹನುಮ ದೇವಸ್ಥಾನಕ್ಕೆ ಬಳಸುವ ಶಿಲೆಗೆ ಪೂಜೆ
(Priyanka Mohite becomes first Indian Woman to scale worlds 10th highest peak Mt Annapurna)
Published On - 4:43 pm, Tue, 20 April 21