AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪಚುನಾವಣೆ ಮರುದಿನ ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಕನ್ನಡಿಗರ ವಿರುದ್ಧ ಸಂಜಯ್​ ರೌತ್​ ಲೇಖನ, ಕರ್ನಾಟಕ ನಾಯಕರ ಮೌನ

ಮಹಾರಾಷ್ಟ್ರ ಪದೇ ಪದೇ ಕನ್ನಡಿಗರ ಸಹನೆಯನ್ನು ಪರೀಕ್ಷಿಸುವುದು ಹೊಸತಲ್ಲ. ಶಿವ ಸೇನಾದ ರಾಜ್ಯ ಸಭಾ ಸದಸ್ಯ ಮತ್ತು ಮುಖ್ಯ ವಕ್ತಾರ ಸಂಜಯ್​ ರೌತ್​ ಶಿವ ಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರೆದ ಲೇಖನ ವಾಸ್ತವದಿಂದ ದೂರವಾಗಿದೆ.

ಉಪಚುನಾವಣೆ ಮರುದಿನ ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಕನ್ನಡಿಗರ ವಿರುದ್ಧ ಸಂಜಯ್​ ರೌತ್​ ಲೇಖನ, ಕರ್ನಾಟಕ ನಾಯಕರ ಮೌನ
ಸಂಜಯ್ ರಾವುತ್
ಡಾ. ಭಾಸ್ಕರ ಹೆಗಡೆ
|

Updated on: Apr 20, 2021 | 7:35 PM

Share

ಕನ್ನಡದಲ್ಲಿ ಒಂದು ಗಾದೆ ಇದೆ-ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಗೆಳೆಯನ ಚಿಂತೆ. ಇಡೀ ದೇಶ ಕೊರೊನಾದ ಸಂಕಷ್ಟದಲ್ಲಿ ಇದ್ದರೆ ಶಿವಸೇನೆಯ ಸಂಜಯ್ ರೌತ್ ಅವರಿಗೆ ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆಯ ಚಿಂತೆ. ಎಲ್ಲೋ ತಪ್ಪಾಗಿ ಓದಿದ್ದೀರಿ ಅಂದುಕೊಂಡಿರಾ? ಖಂಡಿತಾ ಇಲ್ಲ. ಮುಂಬೈನಿಂದ ಪ್ರಕಾಶಿತವಾಗುವ ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಕಳೆದ 18 ರಂದು ಬರೆದ ಅಗ್ರ ಲೇಖನದಲ್ಲಿ ರೌತ್ ಮತ್ತೆ ಗಡಿ ತಂಟೆ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಮಾತನಾಡಿದ್ದರೆ ಅದೇನು ದೊಡ್ಡ ವಿಚಾರ ಅಲ್ಲ ಎಂದು ಅಲ್ಲಗಳೆಯಬಹುದಿತ್ತು. ಬೆಳಗಾವಿಯ ಕುರಿತಾಗಿ ನಡೆಯುತ್ತಿರುವ ತಂಟೆ ಮುಂಬೈ ತನಕ ಬಂದರೆ ಅಲ್ಲಿರುವ ಕನ್ನಡಿಗರ ವ್ಯಾಪಾರ ವ್ಯವಹಾರಕ್ಕೆ ತೊಂದರೆ ಆಗಬಹುದು ಎಂದು ಹೇಳಿದ್ದಾರೆ. ಈ ಕುರಿತಾದ ಸುದೀರ್ಘ ಲೇಖನ ಸ್ವರಾಜ್ಯ ಆನ್ಲೈನ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಮತ್ತೇನು ಹೇಳಿದ್ದಾರೆ ರೌತ್​

ಮಹಾಜನ್ ಆಯೋಗದ ವರದಿಯನ್ನು ಕಡೆಗಣಿಸಿದಂತೆ ಕಾಣುವ ರೌತ್, ಭಾಷೆಯಾಧಾರಿತ ರಾಜ್ಯಗಳನ್ನು ಮಾಡಿದಂದಿನಿಂದ ಮಹಾರಾಷ್ಟ್ರ ಬೆಳಗಾವಿ ಮತ್ತು ಅನೇಕ ಭಾಗಗಳು ತನ್ನವು ಎಂದು ಮಹಾರಾಷ್ಟ್ರ ಹೇಳಿಕೊಂಡಿದೆ. ಮತ್ತು ಇವೆಲ್ಲಾ ನಿಜವಾಗಿಯೂ ಮರಾಠಿ ಭೂಮಿ ಎಂದು ಕರೆಸಿಕೊಂಡಿದೆ ಎಂದು ಬರೆದಿದ್ದಾರೆ. ತಮ್ಮ ಅಗ್ರ ಲೇಖನದಲ್ಲಿ ರೌತ್ ಒಂದು ಹೊಸ ವಾದವನ್ನು ಮಂಡಿಸಿದ್ದಾರೆ. ಆ ಮೂಲಕ ಕನ್ನಡಿಗರ ವಾದಕ್ಕೆ ತಿರುಗೇಟು ಕೊಟ್ಟಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ. ಮರಾಠಿ ತಾಯ್ನುಡಿಯುಳ್ಳ ಯುವ ಪೀಳಿಗೆ ಭಾಷಾಭಿಮಾನದ ಬಗ್ಗೆ ಯಾವ ಭಾವನೆ ಹೊಂದಿಲ್ಲ ಎಂಬ ವಾದವನ್ನು ಒಪ್ಪದ ರೌತ್, ಈಗಿನ ಪೀಳಿಗೆ ಒಂದು ಹೆಜ್ಜೆ ಮುಂದೆ ಹೋಗಿ, ಭಾಷಾಭಿಮಾನವನ್ನು ಇನ್ನು ಹೆಚ್ಚಾಗಿ ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮರಾಠೀ ಮಾನೂಸ್ ಅಂದರೆ ಓರ್ವ ಮರಾಠಿ ವ್ಯಕ್ತಿಗೆ ರೌತ್ ಕೆಲವು ಸಲಹೆ ನೀಡಿದ್ದಾರೆ. ಗಡಿ ತಂಟೆ ವಿಚಾರದಲ್ಲಿ ಯಾವುದನ್ನು ಮಾಡಬೇಕು ಮತ್ತು ಯಾವುದನ್ನು ಮಾಡಬಾರದು (Do’s and Don’t-s) ಎಂಬುದನ್ನು ವಿವರವಾಗಿ ಬರೆದಿದ್ದಾರೆ. ಅಷ್ಟೇ ಅಲ್ಲ, ಕನ್ನಡಿಗರು ಮಹಾರಾಷ್ಟ್ರದ ಮೇಲೆ ಯಾವ ರೀತಿಯ ಅವಲಂಬಿತರಾಗಿದ್ದಾರೆ ಎಂಬುದನ್ನು ಒಂದೇ ವಾಕ್ಯದಲ್ಲಿ ಬರೆದಿದ್ದಾರೆ. ಪ್ರತಿ ದಿನ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ 650 ಬಸ್ ಬರುತ್ತೆ ಆದರೆ ತಿರುಗಿ ಮಹಾರಾಷ್ಟ್ರ ಸರಕಾರ ಕರ್ನಾಟಕಕ್ಕೆ ಬರೀ 50 ಬಸ್ ಓಡಿಸುತ್ತೆ ಎಂದು ಹೇಳಿದ್ದಾರೆ. ಯಾವಾಗೆಲ್ಲಾ ಬೆಳಗಾವಿಯಲ್ಲಿರುವ ಮರಾಠಿ ಮಾತನಾಡುವ ಜನರ ಮೇಲೆ ಹಲ್ಲೆ ನಡೆಯುತ್ತದೆಯೋ, ಶಿವ ಸೈನಿಕರು ಕರ್ನಾಟಕದ ಬಸ್ಗಳ ಮೇಲೆ ತಮ್ಮ ಸಿಟ್ಟನ್ನು ತೋರಿಸಿದ್ದಾರೆ ಎಂದು ಸ್ವರಾಜ್ಯ ಹೇಳಿದೆ. ಇದೇ ರೀತಿ ಆದರೆ ಕನ್ನಡಿಗರಿಗೆ ಮುಂಬೈನಲ್ಲಿ ವ್ಯಾಪಾರ ವ್ಯವಹಾರ ಮಾಡುವುದು ಕಷ್ಟವಾಗಬಹುದು ಎಂದು ಹೇಳಿದ್ದಾರೆ. ಕಳೆದ 17 ರಂದು ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಮಾಜೀ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮರಾಠಿ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡಿದ್ದರು. ಅವರು ಉಪಚುನಾವಣೆಯಿಂದ ದೂರ ಸರಿಯಬಹುದಿತ್ತು. ಆದರೆ ಹಾಗೆ ಮಾಡದೇ, ಆ ಉಪಚುನಾವಣೆಯಲ್ಲಿ ಪ್ರಚಾರ ಮಾಡಿದ್ದು ಎಲ್ಲಾ ಮರಾಠಿಗರಿಗೂ ನೋವು ತಂದಿದೆ ಎಂದು ಹೇಳಿದ್ದಾರೆ.

ಇನ್ನೊಂದು ಅಂಶ ಇವೆಲ್ಲವನ್ನು ರೌತ್ ಬರೆದಿದ್ದು ಉಪಚುನಾವಣೆಗಾಗಿ ನಡೆದ ಮತದಾನದ ಮರುದಿನ. ಯಾವ ಉಪಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್ ಶಿವಸೇನಾದ ಸಹಾಯವನ್ನು ಮುಗುಮ್ಮಾಗಿ ಪಡೆದಿತ್ತೋ ಅದರ ಮರುದಿನವೇ ಇಂತದೊಂದು ಲೇಖನ ಸಾಮ್ನಾದಲ್ಲಿ ಬಂದಿರೋದು ಮುಖ್ಯ. ರಾಜ್ಯದ ಗಡಿ ವಿಚಾರ ಬಂದಾಗ ಯಾವುದೇ ಮುಲಾಜಿಲ್ಲ, ಪಕ್ಷ ಭೇದ ಮರೆತು ರಾಜ್ಯದ ಹಿತಾಸಕ್ತಿ ಕಾಪಾಡುತ್ತೇವೆ ಎಂದು ಹೇಳುವ ರಾಜಕೀಯ ನಾಯಕರು ಈ ಲೇಖನ ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ರಾಜ್ಯದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರಿಗೆ ಮುಖಭಂಗವಾಗುವಂತಹ ಲೇಖನ ಪ್ರಕಟವಾಗಿದೆ ಎಂಬ ಸುದ್ದಿ ರಾಜಕೀಯ ನಾಯಕರ ಕಿವಿಗೆ ಬಿದ್ದರೆ ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಈ ಚುನಾವಣೆಯಲ್ಲಿ ಶಿವ ಸೇನೆಯ ಸಹಾಯವನ್ನು ಮುಗುಮ್ಮಾಗಿ ಪಡೆದಿರುವ ಕಾಂಗ್ರೆಸ್​ ನೀಡುವ ಪ್ರತಿಕ್ರಿಯೆಯನ್ನು ಜನ ಹೇಗೆ ತೆಗೆದುಕೊಳ್ಳಬಹುದು ಎಂಬುದು ಕುತೂಹಲದ ಪ್ರಶ್ನೆಯಾಗಿದೆ.

ಇದನ್ನೂ ಓದಿ:

ಮಹಾರಾಷ್ಟ್ರ ಗಡಿ ವಿವಾದ: ‘ಕಣ್ಮುಚ್ಚಿ ಕುಳಿತಿರುವ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಳ್ಳಬೇಕು’

ಬೆಳಗಾವಿ ಗಡಿ: ಮಹಾಜನ್​ ವರದಿಯಲ್ಲಿ ಏನಿದೆ? ಅಲ್ಲಿನ ಜನ ಇಂದಿರಾ ಗಾಂಧಿಯನ್ನು ದೂರುವುದಾದರೂ ಯಾಕೆ? ಇಲ್ಲಿದೆ ಗಡಿ ವಿವಾದದ ಸಂಪೂರ್ಣ ಮಾಹಿತಿ

(Shiv Sena RS Member Sanjay Raut wrote in Saamana News Paper strongly criticizing Kannadigas distrust against Marathi people in Belagavi)

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ