PM Narendra Modi LIVE: ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ

PM Modi's Speech LIVE: ಕೊರೊನಾ ಎರಡನೇ ಅಲೆ ವೇಗವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತನಾಡಲಿದ್ದಾರೆ.

PM Narendra Modi LIVE: ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ
ಪ್ರಧಾನಿ ನರೇಂದ್ರ ಮೋದಿ

ದೇಶದಲ್ಲಿ ಕೊರೊನಾ ಅಲೆ ದಿನೇದಿನೆ ಹೆಚ್ಚುತ್ತಿದೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ಲಾಕ್​ಡೌನ್​, ನೈಟ್​ ಕರ್ಫ್ಯೂಗಳಂಥ ನಿಯಮಗಳೂ ಜಾರಿಯಾಗಿವೆ. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಆಯಾ ರಾಜ್ಯಗಳ ಕೊರೊನಾ ಪರಿಸ್ಥಿತಿಯನ್ನು ಪರಾಮರ್ಶಿಸಿದ್ದಾರೆ. ಸದ್ಯಕ್ಕೆ ದೇಶಾದ್ಯಂತ ಲಾಕ್​​ಡೌನ್​ ಇಲ್ಲ ಎಂದೇ ಕೇಂದ್ರ ಸರ್ಕಾರ ಹೇಳುತ್ತ ಬಂದಿದ್ದರೂ  ಕೊರೊನಾ ಅಬ್ಬರದ ಎದುರು ಮತ್ಯಾವ ನಿಯಮಗಳೂ ನಿಲ್ಲುವುದಿಲ್ಲ ಎಂಬಂತಾಗಿದೆ. ಇನ್ನು ಗೃಹ ಸಚಿವ ಅಮಿತ್ ಶಾ ಜತೆ ಕೊರೊನಾ ನಿಯಂತ್ರಣದ ಬಗ್ಗೆ ಗಂಭೀರವಾಗಿ ಚರ್ಚಿಸಿರುವ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ.

Published On - 9:23 pm, Tue, 20 April 21

Click on your DTH Provider to Add TV9 Kannada