ಕೆಲವೇ ಹೊತ್ತಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು

ಕೆಲವೇ ಹೊತ್ತಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತು
ಪ್ರಧಾನಿ ನರೇಂದ್ರ ಮೋದಿ

ಇನ್ನು ಕೆಲವೇ ಹೊತ್ತಲ್ಲಿ ಅಂದರೆ ರಾತ್ರಿ 8.45ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಬೆನ್ನಲ್ಲೇ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸ್ಥಿತಗತಿ ಪರಿಶೀಲನೆ ಮಾಡಿದ್ದರು. ಹಾಗೇ ನಿನ್ನೆ ದೇಶದ ಫಾರ್ಮಸಿ ಕಂಪನಿಗಳ ಮುಖಂಡರೊಂದಿಗೆ ಚರ್ಚೆ ನಡೆಸಿದ್ದರು. ಫಾರ್ಮಸಿ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ ಬಳಿಕ ಟ್ವೀಟ್ ಮಾಡಿದ್ದ ನರೇಂದ್ರ ಮೋದಿಯವರು, ನಮ್ಮ ದೇಶದ ಫಾರ್ಮಸಿ ಕಂಪನಿಗಳು ಕೊರೊನಾ ಸಾಂಕ್ರಾಮಿಕದ ವಿರುದ್ಧ […]

Lakshmi Hegde

|

Apr 20, 2021 | 8:34 PM

ಇನ್ನು ಕೆಲವೇ ಹೊತ್ತಲ್ಲಿ ಅಂದರೆ ರಾತ್ರಿ 8.45ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಬೆನ್ನಲ್ಲೇ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸ್ಥಿತಗತಿ ಪರಿಶೀಲನೆ ಮಾಡಿದ್ದರು. ಹಾಗೇ ನಿನ್ನೆ ದೇಶದ ಫಾರ್ಮಸಿ ಕಂಪನಿಗಳ ಮುಖಂಡರೊಂದಿಗೆ ಚರ್ಚೆ ನಡೆಸಿದ್ದರು.

ಫಾರ್ಮಸಿ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಿದ ಬಳಿಕ ಟ್ವೀಟ್ ಮಾಡಿದ್ದ ನರೇಂದ್ರ ಮೋದಿಯವರು, ನಮ್ಮ ದೇಶದ ಫಾರ್ಮಸಿ ಕಂಪನಿಗಳು ಕೊರೊನಾ ಸಾಂಕ್ರಾಮಿಕದ ವಿರುದ್ಧ ಸಮನ್ವಯತೆಯಿಂದ ಹೋರಾಡುತ್ತಿವೆ. ಅವರನ್ನು ನಿಜಕ್ಕೂ ಶ್ಲಾಘಿಸಬೇಕು ಎಂದು ಹೇಳಿದ್ದರು.

ದೇಶದಲ್ಲಿ ಕೊರೊನಾ ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ಗೃಹಸಚಿವ ಅಮಿತ್ ಶಾ ಜತೆ ಕೂಡ ಪ್ರಧಾನಿ ಚರ್ಚಿಸಿದ್ದಾರೆ. ಹಾಗೇ ಇಂದು ಅವರ ಭಾಷಣ ತುಂಬ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಕಠಿಣ ನಿಲುವು ಅನಿವಾರ್ಯ ಎಂದ್ರು ಆರ್.ಅಶೋಕ್​; ಲಾಕ್​ಡೌನ್​ ಬಗ್ಗೆಯೇ ಒಲವು?

ಉಪಚುನಾವಣೆ ಮರುದಿನ ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಕನ್ನಡಿಗರ ವಿರುದ್ಧ ಸಂಜಯ್​ ರೌತ್​ ಲೇಖನ, ಕರ್ನಾಟಕ ನಾಯಕರ ಮೌನ

Follow us on

Related Stories

Most Read Stories

Click on your DTH Provider to Add TV9 Kannada