ಕಠಿಣ ನಿಲುವು ಅನಿವಾರ್ಯ ಎಂದ್ರು ಆರ್.ಅಶೋಕ್; ಲಾಕ್ಡೌನ್ ಬಗ್ಗೆಯೇ ಒಲವು?
ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ನಿಯಮ ಜಾರಿಗೊಳಿಸುವ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆಯುತ್ತಿದೆ. ಜನರ ಸಹಕಾರ ಬೇಕು ಎಂದು ಆರ್.ಅಶೋಕ್ ಹೇಳಿದ್ದಾರೆ.

ಬೆಂಗಳೂರು: ಸರ್ವಪಕ್ಷಗಳ ಸಭೆಯಲ್ಲಿ ಲಾಕ್ಡೌನ್ ಬಗ್ಗೆ ಸಲಹೆ ಬಂದಿದೆ. ನಾವು ಕಠಿಣ ನಿಲುವು ತೆಗೆದುಕೊಳ್ಳಬೇಕಾಗಿದೆ. ಸಿಎಂ ಯಡಿಯೂರಪ್ಪನವರ ಜತೆ ಚರ್ಚಿಸಿ ಮುಂದಿನ ಆದೇಶ ನೀಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಸಭೆಯ ಬಳಿಕ ಮಾತನಾಡಿದ ಅವರು, ಯಡಿಯೂರಪ್ಪನವರು ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿದ ಬಳಿಕ ಮಾರ್ಗಸೂಚಿ ಆದೇಶ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಕಠಿಣ ನಿಯಮ ಜಾರಿಗೊಳಿಸುವ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆಯುತ್ತಿದೆ. ಜನರ ಸಹಕಾರ ಬೇಕು. ಇಂದಿನ ಸಭೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಲಾಕ್ ಡೌನ್ ಸಲಹೆ ನೀಡಿದ್ದಾರೆ. ಇನ್ನು ಲಾಕ್ಡೌನ್ ಮಾತ್ರ ಪರಿಹಾರವಲ್ಲ, ತಜ್ಞರ ವರದಿ ಅನುಸರಿಸಿ ಎಂದು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹೇಳಿದ್ದಾರೆ. ಯಾವುದಕ್ಕೂ ಚರ್ಚಿಸಿ ಮುಂದಿನ ನಿರ್ಧಾರ ಪ್ರಕಟಿಸುತ್ತೇವೆ ಎಂದು ಸಚಿವರು ತಿಳಿಸಿದರು.
ನಮ್ಮ ನಿಲುವಿಗೆ ಪೂರಕವಾದ ಸಲಹೆ ನೀಡಿದ ವಿಪಕ್ಷ ನಾಯಕರಿಗೆ ಕೃತಜ್ಞತೆಗಳು ಎಂದ ಆರ್.ಅಶೋಕ್ ಅವರು, ಸ್ಮಶಾನಗಳಲ್ಲಿ ಉಂಟಾಗುತ್ತಿರುವ ಅಡಚಣೆ, ಕ್ಯೂ ತಪ್ಪಿಸಲು ತಾತ್ಕಾಲಿಕ ಚಿತಾಗಾರಗಳ ನಿರ್ಮಾಣ ಮಾಡುವಂತೆ ಎಲ್ಲ ಮಹಾನಗರ ಪಾಲಿಕೆಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮತ್ತೆ ಲಾಕ್ಡೌನ್ ಮಾಡೋದಾದ್ರೆ ಮಾಡಿ ಎಂದ ರಾಜ್ಯಪಾಲರು; ಸಚಿವರ ಜತೆ ಚರ್ಚೆ ಮಾಡ್ತೇವೆ ಎಂದ ಸಿಎಂ ಯಡಿಯೂರಪ್ಪ
ನನ್ನ ಮತ್ತು ಮಿಚೆಲ್ ಒಬಾಮಾ ಸ್ನೇಹದ ಕುರಿತು ಸಾರ್ವಜನಿಕರ ಅಭಿಪ್ರಾಯ ಕೇಳಿ ಆಶ್ಚರ್ಯವಾಗಿದೆ: ಜಾರ್ಜ್ ಬುಷ್