AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಲಾಕ್​ಡೌನ್​ ಮಾಡೋದಾದ್ರೆ ಮಾಡಿ ಎಂದ ರಾಜ್ಯಪಾಲರು; ಸಚಿವರ ಜತೆ ಚರ್ಚೆ ಮಾಡ್ತೇವೆ ಎಂದ ಸಿಎಂ ಯಡಿಯೂರಪ್ಪ

ಲಾಕ್​ಡೌನ್​ ಬಗ್ಗೆ ಜನರಿಗೆ ಹೆದರಿಕೆ ಇದೆ. ಕಾರ್ಮಿಕರ ಬಗ್ಗೆಯೂ ಯೋಚನೆ ಮಾಡಬೇಕು. ಯಾವುದೇ ನಿರ್ಧಾರ ತೆಗೆದುಕೊಳ್ಳಲೂ ಸಿಎಂ ಯಡಿಯೂರಪ್ಪ ಸ್ವತಂತ್ರವಾಗಿದ್ದಾರೆ ಎಂದು ರಾಜ್ಯಪಾಲರು ಹೇಳಿದ್ದಾರೆ.

ಮತ್ತೆ ಲಾಕ್​ಡೌನ್​ ಮಾಡೋದಾದ್ರೆ ಮಾಡಿ ಎಂದ ರಾಜ್ಯಪಾಲರು; ಸಚಿವರ ಜತೆ ಚರ್ಚೆ ಮಾಡ್ತೇವೆ ಎಂದ ಸಿಎಂ ಯಡಿಯೂರಪ್ಪ
ರಾಜ್ಯಪಾಲರ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆ
Lakshmi Hegde
|

Updated on:Apr 20, 2021 | 7:26 PM

Share

ಬೆಂಗಳೂರು: ನಗರದಲ್ಲಿ ಮತ್ತೊಮ್ಮೆ ಲಾಕ್​ ಡೌನ್ ಜಾರಿಯಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಇಂದು ರಾಜ್ಯಪಾಲ ವಜೂಬಾಯಿ ವಾಲಾ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆದಿದ್ದು, ಮುಕ್ತಾಯದ ಹೊತ್ತಿಗೆ ಸಿಎಂ ಯಡಿಯೂರಪ್ಪ ಕೂಡ ಲಾಕ್​ಡೌನ್ ಪರ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ನೇರವಾಗಿಯೇ ಲಾಕ್​ಡೌನ್​ ಸಲಹೆ ನೀಡಿದ್ದರು. ಹಾಗೇ ರಾಜ್ಯಪಾಲರೂ ಕೂಡ ಇದನ್ನೇ ಹೇಳಿದ್ದಾರೆ.

ಲಾಕ್​ ಡೌನ್ ಮಾಡುವುದಾದರೆ ಮಾಡಿ, ನಮಗೆ ಬೇಕಿರುವುದು ಆರೋಗ್ಯಪೂರ್ಣ ಕರ್ನಾಟಕ. ಲಾಕ್​ಡೌನ್​ ಸೇರಿ ಯಾವುದೇ ರೀತಿಯ ಕಠಿಣ ಕ್ರಮವನ್ನಾದರೂ ತೆಗೆದುಕೊಳ್ಳಿ ಎಂದು ರಾಜ್ಯಪಾಲರು ಸಭೆಯಲ್ಲಿ ತಿಳಿಸಿದ್ದಾರೆ. ಈ ಪರಿಸ್ಥಿತಿಯ ಸವಾಲುಗಳನ್ನು ಎದುರಿಸಬೇಕಾಗಿದೆ. ಜನರು ಸಹ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.

ಲಾಕ್​ಡೌನ್​ ಬಗ್ಗೆ ಜನರಿಗೆ ಹೆದರಿಕೆ ಇದೆ. ಕಾರ್ಮಿಕರ ಬಗ್ಗೆಯೂ ಯೋಚನೆ ಮಾಡಬೇಕು. ಯಾವುದೇ ನಿರ್ಧಾರ ತೆಗೆದುಕೊಳ್ಳಲೂ ಸಿಎಂ ಯಡಿಯೂರಪ್ಪ ಸ್ವತಂತ್ರವಾಗಿದ್ದಾರೆ ಎಂದಿದ್ದಾರೆ. ಇನ್ನು ಈ ಸಭೆಯಲ್ಲಿ ಯಡಿಯೂರಪ್ಪನವರೂ ಸಹ ಲಾಕ್​​ಡೌನ್ ಸಲಹೆಯನ್ನು ಸ್ವಾಗತಿಸಿದ್ದಾರೆ ಎನ್ನಲಾಗಿದೆ.  ಸಚಿವರ ಜತೆ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ.

 ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕಾಗಿ ನಿಷೇಧಾಜ್ಞೆ ಜಾರಿ ಮಾಡಲು ಸಿದ್ದರಾಮಯ್ಯ ಸಲಹೆ; ಸಭೆಯಲ್ಲಿ ರಾಜ್ಯಪಾಲರ ನೇತೃತ್ವದ ಬಗ್ಗೆ ಅಸಮಾಧಾನ

DC vs MI Live Score, IPL 2021: ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಆಯ್ಕೆ; ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್

Published On - 7:24 pm, Tue, 20 April 21

Follow Us
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ವಿದ್ಯುತ್ ಚಾಲಿತ ವಾಹನಗಳಿಗೂ ತೆರಿಗೆ​​: ಸರ್ಕಾರದ ನಿರ್ಧಾರಕ್ಕೆ ಜೋಶಿ ಕಿಡಿ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಮಕ್ಕಳಿಂದ ಗೊಂಬೆಯ ಶವ ಯಾತ್ರೆ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಅಭಿವೃದ್ಧಿಯಲ್ಲಿ ಬೆಂಗಳೂರಿಗಿಂತ ದಾವಣಗೆರೆಯೇ ಮುಂದು ಎಂದ ಡಿಕೆಶಿ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ
ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ! ರಾಜಿ ಆಗೋಣವೆಂದು ಕರೆದು ಹಲ್ಲೆ