DC vs MI, IPL 2021 Match 13 Result: ಮುಂಬೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಜಯ

TV9 Web
| Updated By: ganapathi bhat

Updated on:Nov 30, 2021 | 12:16 PM

DC vs MI Live Score in Kannada: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2021 ಟೂರ್ನಿಯ 13ನೇ ಪಂದ್ಯದ ಲೈವ್ ಅಪ್ಡೇಟ್​ಗಳು ಇಲ್ಲಿ ಸಿಗಲಿದೆ.

DC vs MI, IPL 2021 Match 13 Result: ಮುಂಬೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಜಯ
ಇಂದಿನ ಪಂದ್ಯದಲ್ಲಿ ಜಯಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್​

ಚೆನ್ನೈ: ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಟೂರ್ನಿಯ 13ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. ಡೆಲ್ಲಿ ಪರ ಶಿಖರ್ ಧವನ್ 45 (42), ಸ್ಮಿತ್ 33 (29), ಲಲಿತ್ ಯಾದವ್ 22 (25) ರನ್ ಗಳಿಸಿ ಡೆಲ್ಲಿ ಗೆಲುವಿಗೆ ಕಾರಣರಾಗಿದ್ದಾರೆ. ಮುಂಬೈ ಬೌಲರ್‌ಗಳು ತಂಡ ಗೆಲ್ಲಿಸುವ ಪ್ರದರ್ಶನ ನೀಡಿಲ್ಲ.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ಅಲ್ಪ ಮೊತ್ತಕ್ಕೆ ಕುಸಿತ ಕಂಡಿತ್ತು. ಮುಂಬೈ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್​ಗೆ ಗೆಲ್ಲಲು 138 ರನ್ ಟಾರ್ಗೆಟ್ ನೀಡಿತ್ತು.

ಮುಂಬೈ ಪರ ನಾಯಕ ರೋಹಿತ್ ಶರ್ಮಾ 44 (30), ಸೂರ್ಯಕುಮಾರ್ ಯಾದವ್ 24, ಇಶಾನ್ ಕಿಶನ್ 26 ಹಾಗೂ ಜಯಂತ್ ಯಾದವ್ 23 ರನ್ ಗಳಿಸಿದ್ದರು. ಉಳಿದ ಆಟಗಾರರು 5 ರನ್ ದಾಟುಲು ಕೂಡ ವಿಫಲರಾಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಅಮಿತ್ ಮಿಶ್ರಾ 4 ಓವರ್​ಗೆ 24 ರನ್ ನೀಡಿ ಮುಖ್ಯ 4 ವಿಕೆಟ್ ಕಬಳಿಸಿದ್ದರು. ಅವೇಶ್ ಖಾನ್ 2, ಸ್ಟಾಯ್ನಿಸ್, ರಬಾಡ ಹಾಗೂ ಲಲಿತ್ ಯಾದವ್ ತಲಾ 1 ವಿಕೆಟ್ ಪಡೆದಿದ್ದರು.

ಇದನ್ನೂ ಓದಿ: ICC World T20 -2021: ವೀಸಾ ಅನುಮೋದನೆ ಬಳಿಕ ಸದ್ಯದಲ್ಲೇ ಭಾರತಕ್ಕೆ ಬರುತ್ತಿದ್ದಾರೆ ಪಾಕಿಸ್ತಾನದ ಕ್ರಿಕೆಟ್​ ಆಟಗಾರರು!

Karnataka Weekend Curfew: ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ವೀಕೆಂಡ್​ ಕರ್ಫ್ಯೂ ಘೋಷಿಸಿದ ಸರ್ಕಾರ, ಶಾಲಾ-ಕಾಲೇಜುಗಳು ಕ್ಲೋಸ್​

LIVE NEWS & UPDATES

The liveblog has ended.
  • 20 Apr 2021 10:56 PM (IST)

    ಡೆಲ್ಲಿ ಗೆಲ್ಲಲು 30 ಬಾಲ್​ಗೆ 37 ರನ್ ಬೇಕು

    ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವಿಗೆ 30 ಬಾಲ್​ಗೆ 37 ರನ್ ಗಳಿಸಬೇಕಿದೆ. ಡೆಲ್ಲಿ 15 ಓವರ್ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 101 ರನ್ ದಾಖಲಿಸಿದೆ.

  • 20 Apr 2021 10:55 PM (IST)

    ಧವನ್ ಔಟ್!

    ಬೌಂಡರಿ- ಸಿಕ್ಸರ್ ಸಿಡಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಮುಂದಾಗಿದ್ದ ಶಿಖರ್ ಧವನ್ ಚಹರ್ ಬಾಲ್​ಗೆ ವಿಕೆಟ್ ಒಪ್ಪಿಸಿದ್ದಾರೆ. ಮತ್ತೊಂದು ಬೌಂಡರಿಗೆ ಮುಂದಾದ ಧವನ್ ಕೃನಾಲ್ ಪಾಂಡ್ಯ ಕೈಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ತಂಡದ ನಾಯಕ ರಿಷಭ್ ಪಂತ್ ಕ್ರೀಸ್​ಗೆ ಇಳಿದಿದ್ದಾರೆ. ಲಲಿತ್ ಯಾದವ್ 10 (14) ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 20 Apr 2021 10:53 PM (IST)

    ಫೋರ್- ಸಿಕ್ಸರ್ ಸಿಡಿಸಿದ ಧವನ್

    ಚಹರ್ ಓವರ್​ನ ಮೊದಲೆರಡು ಬಾಲ್​ಗೆ ಶಿಖರ್ ಧವನ್ ಫೋರ್- ಸಿಕ್ಸರ್ ಬಾರಿಸಿದ್ದಾರೆ. ಅಂತಿಮ ಓವರ್​ಗಳ ಹಂತದಲ್ಲಿ ವೇಗದ ಆಟಕ್ಕೆ ಮುಂದಾಗಿದ್ದಾರೆ. ತಂಡಕ್ಕೆ 32 ಬಾಲ್​ಗೆ 38 ರನ್ ಬೇಕಿದೆ.

  • 20 Apr 2021 10:49 PM (IST)

    ಡೆಲ್ಲಿ ಗೆಲುವಿಗೆ 36 ಬಾಲ್​ಗೆ 48 ರನ್

    ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 36 ಬಾಲ್​ಗೆ 48 ರನ್ ಗಳಿಸಬೇಕಿದೆ. ನಿಧಾನಗತಿಯ ಆಟದಿಂದ ಮೇಲೆದ್ದು ಕೊಂಚ ವೇಗವಾಗಿ ಆಡುವ ಅನಿವಾರ್ಯತೆಯೂ ಡೆಲ್ಲಿ ತಂಡಕ್ಕಿದೆ. ಅದಕ್ಕೆ ತಕ್ಕನಾಗಿ ವಿಕೆಟ್ ಉಳಿಸಿಕೊಂಡಿರುವ ಡಿಸಿ, ಮುಂಬೈ ತಂಡಕ್ಕೆ ಸೋಲುಣಿಸುವ ಸಾಧ್ಯತೆ ಕಂಡುಬರುತ್ತಿದೆ. ಇನ್ನೂ 6 ಓವರ್​ಗಳು ಬಾಕಿ ಇರುವಂತೆ ಫಲಿತಾಂಶ ಏನಾಗಬಹುದು ಎಂದು ಕಾದುನೋಡಬೇಕಿದೆ. ಡೆಲ್ಲಿ ತಂಡ 14 ಓವರ್ ಅಂತ್​ಯಕ್ಕೆ 2 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದೆ.

  • 20 Apr 2021 10:38 PM (IST)

    ಡೆಲ್ಲಿ ಕ್ಯಾಪಿಟಲ್ಸ್ 83/2 (12 ಓವರ್)

    12 ಓವರ್​ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 2 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದೆ. ಗೆಲ್ಲಲು 48 ಬಾಲ್​ಗೆ 55 ರನ್ ಬೇಕಿದೆ. ಶಿಖರ್ ಧವನ್, ಲಲಿತ್ ಯಾದವ್ ಕ್ರೀಸ್​ನಲ್ಲಿದ್ದಾರೆ. ಜೊತೆಗೆ ಡೆಲ್ಲಿ ತಂಡದ 8 ವಿಕೆಟ್ ಉಳಿದುಕೊಂಡಿದೆ.

  • 20 Apr 2021 10:32 PM (IST)

    ಡೆಲ್ಲಿ ಕ್ಯಾಪಿಟಲ್ಸ್ 54 ಬಾಲ್​ಗೆ 62 ರನ್ ಬೇಕು

    6.90 ರನ್ ರೇಟ್​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 54 ಬಾಲ್​ಗೆ 62 ರನ್ ಬೇಕಿದೆ. 11 ಓವರ್ ಅಂತ್ಯಕ್ಕೆ 76 ರನ್ ಗಳಿಸಿರುವ ಡೆಲ್ಲಿ 2 ವಿಕೆಟ್ ಕಳೆದುಕೊಂಡಿದೆ. ಶಿಖರ್ ಧವನ್ 27 ಬಾಲ್​ಗೆ 27 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

  • 20 Apr 2021 10:26 PM (IST)

    ಡೆಲ್ಲಿ ಗೆಲ್ಲಲು 60 ಬಾಲ್​ಗೆ 70 ರನ್ ಬೇಕು

    ಡೆಲ್ಲಿ ಕ್ಯಾಪಿಟಲ್ಸ್ ಗೆಲುವಿಗೆ 60 ಬಾಲ್​ಗೆ 70 ರನ್ ಬೇಕಿದೆ. 10 ಓವರ್​ಗಳ ಅಂತ್ಯಕ್ಕೆ ಡೆಲ್ಲಿ ದಾಂಡಿಗರು 68/2 ರನ್ ಗಳಿಸಿದ್ದಾರೆ. ಧವನ್ ಹಾಗೂ ಲಲಿತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 20 Apr 2021 10:24 PM (IST)

    ಪೊಲಾರ್ಡ್​ಗೆ ವಿಕೆಟ್ ಒಪ್ಪಿಸಿದ ಸ್ಮಿತ್

    ಕೀರನ್ ಪೊಲಾರ್ಡ್ ಬೌಲಿಂಗ್​ಗೆ ಸ್ಟೀವ್ ಸ್ಮಿತ್ ಎಲ್​ಬಿಡಬ್ಲ್ಯು ಆಗಿ ವಿಕೆಟ್ ಒಪ್ಪಿಸಿದ್ದಾರೆ. 29 ಬಾಲ್​ಗೆ 33 ರನ್ ಗಳಿಸಿ ನಿರ್ಗಮಿಸಿದ್ದಾರೆ. ಈ ಮೂಲಕ ಡೆಲ್ಲಿ ತಂಡದ ಸ್ಮಿತ್-ಧವನ್ ಜೊತೆಯಾಟಕ್ಕೆ ಬ್ರೇಕ್ ಬಿದ್ದಿದೆ.

  • 20 Apr 2021 10:17 PM (IST)

    ಡೆಲ್ಲಿ ಗೆಲ್ಲಲು 66 ಬಾಲ್​ಗೆ 74 ರನ್ ಬೇಕು

    ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 66 ಬಾಲ್​ಗೆ 74 ರನ್ಗ ಬೇಕಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಟೀವ್ ಸ್ಮಿತ್ ಹಾಗೂ ಶಿಖರ್ ಧವನ್ 50 ರನ್​ಗಳ ಜೊತೆಯಾಟ ನೀಡಿದ್ದಾರೆ. ಡೆಲ್ಲಿ ಮೊತ್ತ 9 ಓವರ್ ಅಂತ್ಯಕ್ಕೆ 1 ವಿಕೆಟ್​ಗೆ 64 ರನ್ ಆಗಿದೆ.

  • 20 Apr 2021 10:12 PM (IST)

    ಡೆಲ್ಲಿ ಕ್ಯಾಪಿಟಲ್ಸ್ 52/1 (8 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ ತಂಡ 8 ಓವರ್​ಗಳ ಅಂತ್ಯಕ್ಕೆ 52 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಸ್ಮಿತ್ 22 (22) ಹಾಗೂ ಶಿಖರ್ ಧವನ್ 19 (21) ಆಟ ಆಡುತ್ತಿದ್ದಾರೆ. ಸುಲಭ ಟಾರ್ಗೆಟ್ ಬೆನ್ನತ್ತುವಲ್ಲಿ ಅವಸರ ಮಾಡದೇ ನಿಧಾನಗತಿಯ ಆಟಕ್ಕೆ ಮುಂದಾಗಿದ್ದಾರೆ.

  • 20 Apr 2021 10:02 PM (IST)

    ಪವರ್​ಪ್ಲೇ ಅಂತ್ಯಕ್ಕೆ 39/1

    6 ಓವರ್​ಗಳ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 1 ವಿಕೆಟ್ ಕಳೆದುಕೊಂಡು 39 ರನ್ ದಾಖಲಿಸಿದೆ. ಶಿಖರ್ ಧವನ್, ಸ್ಟೀವ್ ಸ್ಮಿತ್ ಆಡುತ್ತಿದ್ದಾರೆ. ರಿಷಭ್ ಪಂತ್, ಸ್ಟಾಯ್ನಿಸ್, ಹೆಟ್ಮೆಯರ್ ಬ್ಯಾಟಿಂಗ್​ ವಿಭಾಗದಲ್ಲಿ ಆಡಲು ಬಾಕಿ ಇದ್ದಾರೆ.

  • 20 Apr 2021 09:57 PM (IST)

    ನಿಧಾನಗತಿಯ ಆಟ ಆಡುತ್ತಿರುವ ಡೆಲ್ಲಿ

    ಡೆಲ್ಲಿ ಕ್ಯಾಪಿಟಲ್ಸ್ ಮೊದಲ ವಿಕೆಟ್ ಪತನಗೊಂಡಿದೆ. ಸ್ಮಿತ್ ಹಾಗೂ ಧವನ್ ನಿಧಾನಗತಿಯ ಆಟ ಆಡುತ್ತಿದ್ದಾರೆ. 5 ಓವರ್​ಗಳಲ್ಲಿ ಡೆಲ್ಲಿ 34 ರನ್ ಗಳಿಸಿದೆ. ಗೆಲ್ಲಲು 90 ಬಾಲ್​ಗೆ 104 ರನ್ ಬೇಕಿದೆ.

  • 20 Apr 2021 09:52 PM (IST)

    ಡೆಲ್ಲಿ ಕ್ಯಾಪಿಟಲ್ಸ್ 28/1 (4 ಓವರ್)

    ಡೆಲ್ಲಿ ಕ್ಯಾಪಿಟಲ್ಸ್ 4 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿದೆ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಶಿಖರ್ ಧವನ್ 9(7) ಹಾಗೂ ಸ್ಟೀವ್ ಸ್ಮಿತ್ 11(12) ಕ್ರೀಸ್​ನಲ್ಲಿದ್ದಾರೆ.

  • 20 Apr 2021 09:48 PM (IST)

    ಡೆಲ್ಲಿ ಕ್ಯಾಪಿಟಲ್ಸ್ 22/1 (3 ಓವರ್)

    3 ಓವರ್ ಅಂತ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡ 22 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಶಿಖರ್ ಧವನ್ ಹಾಗೂ ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪೃಥ್ವಿ ಶಾ 5 ಬಾಲ್​ಗೆ 7 ರನ್ ಗಳಿಸಿ ಜಯಂತ್ ಯಾದವ್​ಗೆ ವಿಕೆಟ್ ಒಪ್ಪಿಸಿದ್ದಾರೆ.

  • 20 Apr 2021 09:16 PM (IST)

    ಮುಂಬೈ ಇಂಡಿಯನ್ಸ್ 137/9 (20 ಓವರ್)

    ನಿಗದಿತ 20 ಓವರ್​ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲಲು 138 ರನ್ ಬೇಕಿದೆ.

  • 20 Apr 2021 09:14 PM (IST)

    ಚಹರ್ ಔಟ್

    ರಾಹುಲ್ ಚಹರ್ 6 ಬಾಲ್​ಗೆ 6 ರನ್ ಗಳಿಸಿ ನಿರ್ಗಮಿಸಿದ್ದಾರೆ. 9 ವಿಕೆಟ್ ಕಳೆದುಕೊಂಡಿರುವ ಮುಂಬೈ 135 ರನ್ ಗಳಿಸಿ ಆಡುತ್ತಿದೆ. 2 ಬಾಲ್ ಉಳಿದಿದೆ.

  • 20 Apr 2021 09:11 PM (IST)

    ಜಯಂತ್ ಯಾದವ್ ಔಟ್

    22 ಬಾಲ್​ಗೆ 23 ರನ್ ಗಳಿಸಿ ಜಯಂತ್ ಯಾದವ್ ಔಟ್ ಆಗಿದ್ದಾರೆ. ರಬಾಡ ಬಾಲ್​ಗೆ ರಬಾಡಗೆ ಕ್ಯಾಚ್ ನೀಡಿ ಯಾದವ್ ನಿರ್ಗಮಿಸಿದ್ದಾರೆ. ಅಂತಿಮ ಓವರ್​ನಲ್ಲಿ ತಂಡದ ಮೊತ್ತ 125 ದಾಟುವಲ್ಲಿ ಯಾದವ್ ಆಟ ಮುಖ್ಯ ಪಾತ್ರವಹಿಸಿದೆ. ಮುಂಬೈ ಸ್ಕೋರ್ 19 ಓವರ್​ಗೆ 130/8 ಆಗಿದೆ. ಚಹರ್ ಹಾಗೂ ಬುಮ್ರಾ ಕ್ರೀಸ್​ನಲ್ಲಿದ್ದಾರೆ.

  • 20 Apr 2021 09:06 PM (IST)

    ಇಶಾನ್ ಕಿಶನ್ ಔಟ್

    ಮಿಶ್ರಾ ಸ್ಪಿನ್ ಕಮಾಲ್​ಗೆ ಇಶಾನ್ ಕಿಶನ್ ಔಟ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್ ಆಟಗಾರರು 18 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿದ್ದಾರೆ. ಇಶಾನ್ ಕಿಶನ್ 28 ಬಾಲ್​ಗೆ 26 ರನ್ ಗಳಿಸಿ ನಿರ್ಗಮಿಸಿದ್ದಾರೆ. ಜಯಂತ್ ಯಾದವ್ ಹಾಗೂ ಚಹರ್ ಆಡುತ್ತಿದ್ದಾರೆ.

  • 20 Apr 2021 08:49 PM (IST)

    ಮುಂಬೈ ಇಂಡಿಯನ್ಸ್ 114/6 (16 ಓವರ್)

    16 ಓವರ್​ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿದೆ. ತಂಡದ ಪರ ಇಶಾನ್ ಕಿಶನ್ ಹಾಗೂ ಜಯಂತ್ ಯಾದವ್ ಕ್ರೀಸ್​ನಲ್ಲಿದ್ದಾರೆ.

  • 20 Apr 2021 08:47 PM (IST)

    ಮುಂಬೈ ತಂಡದ ಆಟ ನಿಧಾನ

    ಮುಂಬೈ ಇಂಡಿಯನ್ಸ್ ತಂಡ 14 ಓವರ್​ಗೆ 6 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿದೆ. ಇಶಾನ್ ಕಿಶನ್ 18 ಬಾಲ್​ಗೆ 12 ಹಾಗೂ ಜಯಂತ್ 7 ಬಾಲ್​ಗೆ 7 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡ ಮುಂಬೈ ಆಟ ನಿಧಾನವಾಗಿ ಸಾಗುತ್ತಿದೆ.

  • 20 Apr 2021 08:40 PM (IST)

    ಮುಂಬೈ ಇಂಡಿಯನ್ಸ್ 89/6 (13 ಓವರ್)

    13 ಓವರ್​ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 6 ವಿಕೆಟ್ ಕಳೆದುಕೊಂಡು ಕೇವಲ 89 ರನ್ ಗಳಿಸಿದೆ. ಇಶಾನ್ ಕಿಶನ್ 15 ಬಾಲ್​ಗೆ 9 ಹಾಗೂ ಜಯಂತ್ ಯಾದವ್ 3 ಬಾಲ್​ಗೆ 2 ರನ್ ಗಳಿಸಿ ಕಣದಲ್ಲಿದ್ದಾರೆ.

  • 20 Apr 2021 08:38 PM (IST)

    ಬಂದಂತೆ ಹೋದ ಪೊಲಾರ್ಡ್

    5 ಬಾಲ್​ಗೆ 2 ರನ್ ಗಳಿಸಿ ಕೀರನ್ ಪೊಲಾರ್ಡ್ ಕೂಡ ಔಟ್ ಆಗಿದ್ದಾರೆ. ಪೊಲಾರ್ಡ್ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದ್ದಾರೆ. ಮುಂಬೈ ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸೊರಗಿದೆ. 12 ಓವರ್ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡಿರುವ ಮುಂಬೈ 84 ರನ್ ಗಳಿಸಲಷ್ಟೇ ಶಕ್ತವಾಗಿದೆ.

  • 20 Apr 2021 08:29 PM (IST)

    1 ರನ್​ಗೆ ನಿರ್ಗಮಿಸಿದ ಕೃನಾಲ್ ಪಾಂಡ್ಯ

    5 ಬಾಲ್​ಗೆ 1 ರನ್ ಗಳಿಸಿ ಕೃನಾಲ್ ಪಾಂಡ್ಯ ವಿಕೆಟ್ ಒಪ್ಪಿಸಿದ್ದಾರೆ. ಲಲಿತ್ ಯಾದವ್ ಬಾಲ್​ಗೆ ಬೌಲ್ಡ್ ಆಗಿದ್ದಾರೆ. ಮುಂಬೈ ಇಂಡಿಯನ್ಸ್ 11 ಓವರ್ ಅಂತ್ಯಕ್ಕೆ 82 ರನ್ ಗಳಿಸಿ 5 ವಿಕೆಟ್ ಕಳೆದುಕೊಂಡಿದ್ದಾರೆ. ಇಶಾನ್ ಕಿಶನ್ ಹಾಗೂ ಕೀರನ್ ಪೊಲಾರ್ಡ್ ಬ್ಯಾಟಿಂಗ್ ಮಾಡುತ್ತಿದ್ದಾರೆ.

  • 20 Apr 2021 08:24 PM (IST)

    ಮುಂಬೈ ಇಂಡಿಯನ್ಸ್ 78/4 (10 ಓವರ್)

    ಮುಂಬೈ ಇಂಡಿಯನ್ಸ್ ತಂಡ 10 ಓವರ್ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 78 ರನ್ ಕಲೆಹಾಕಿದೆ. ತಂಡದ ಪರ ಕೃನಾಲ್ ಪಾಂಡ್ಯ ಮತ್ತು ಇಶಾನ್ ಕಿಶನ್ ಬ್ಯಾಟ್ ಬೀಸುತ್ತಿದ್ದಾರೆ.

  • 20 Apr 2021 08:22 PM (IST)

    ರೋಹಿತ್ ಬೆನ್ನಲ್ಲೇ ವಿಕೆಟ್ ಒಪ್ಪಿಸಿದ ಹಾರ್ದಿಕ್ ಪಾಂಡ್ಯ

    ರೋಹಿತ್ ಶರ್ಮಾ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಔಟ್ ಆಗಿದ್ದಾರೆ. ರನ್ ಗಳಿಸದೇ ಅಮಿತ್ ಮಿಶ್ರಾಗೆ ವಿಕೆಟ್ ಒಪ್ಪಿಸಿದ್ದಾರೆ. ಕೊನೆಯ ಓವರ್​ನಲ್ಲಿ ಮಿಶ್ರಾ ಸ್ಪಿನ್​ಗೆ 2 ವಿಕೆಟ್ ಬಿದ್ದಿದೆ.

  • 20 Apr 2021 08:17 PM (IST)

    ಅರ್ಧಶತಕದ ಹೊಸ್ತಿಲಲ್ಲಿ ವಿಕೆಟ್ ಒಪ್ಪಿಸಿದ ರೋಹಿತ್ ಶರ್ಮಾ

    30 ಬಾಲ್​ಗೆ 44 ರನ್ ಗಳಿಸಿ ರೋಹಿತ್ ಶರ್ಮಾ ಔಟ್ ಆಗಿದ್ದಾರೆ. ಮಿಶ್ರಾ ಎಸೆತವನ್ನು ಸ್ಮಿತ್​ಗೆ ಕ್ಯಾಚ್ ನೀಡಿ ರೋಹಿತ್ ನಿರ್ಗಮಿಸಿದ್ದಾರೆ.

  • 20 Apr 2021 08:14 PM (IST)

    ಮುಂಬೈ ಇಂಡಿಯನ್ಸ್ 70/2 (8 ಓವರ್)

    ಮುಂಬೈ ಇಂಡಿಯನ್ಸ್ ತಂಡ 8 ಓವರ್​ಗಳ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 70 ರನ್ ದಾಖಲಿಸಿದೆ. ರೋಹಿತ್ ಶರ್ಮಾ 38 ರನ್ ಗಳಿಸಿ ಆಡುತ್ತಿದ್ದಾರೆ.

  • 20 Apr 2021 08:11 PM (IST)

    ಸೂರ್ಯಕುಮಾರ್ ಯಾದವ್ ಔಟ್

    ಅವೇಶ್ ಖಾನ್ ಬೌಲಿಂಗ್​ಗೆ ಕೀಪರ್ ರಿಷಭ್ ಪಂತ್​ಗೆ ಕ್ಯಾಚ್ ನೀಡಿ ಸೂರ್ಯಕುಮಾರ್ ಯಾದವ್ ವಿಕೆಟ್ ಒಪ್ಪಿಸಿದ್ದಾರೆ. 15 ಬಾಲ್​ಗೆ 24 ರನ್ ಗಳಿಸಿ ಯಾದವ್ ಔಟ್ ಆಗಿದ್ದಾರೆ. 7 ಓವರ್ ಅಂತ್ಯಕ್ಕೆ ಮುಂಬೈ 2 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದೆ. ಇಶಾನ್ ಕಿಶನ್ ಹಾಗೂ ರೋಹಿತ್ ಶರ್ಮಾ ಕ್ರಿಸ್​ನಲ್ಲಿದ್ದಾರೆ.

  • 20 Apr 2021 08:02 PM (IST)

    ಪವರ್​ಪ್ಲೇ ಅಂತ್ಯಕ್ಕೆ ಮುಂಬೈ 55/1

    6 ಓವರ್​ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ ತಂಡ 1 ವಿಕೆಟ್ ಕಳೆದುಕೊಂಡು 55 ರನ್ ದಾಖಲಿಸಿದೆ. ರೋಹಿತ್ ಶರ್ಮಾ 29 (19) ಹಾಗೂ ಸೂರ್ಯಕುಮಾರ್ ಯಾದವ್ 23 (13) ಕ್ರೀಸ್ ಕಾಯ್ದುಕೊಂಡಿದ್ದಾರೆ. ಮುಂಬೈ ಪರ ಸ್ಟಾಯ್ನಿಸ್ 1 ವಿಕೆಟ್ ಪಡೆದಿದ್ದಾರೆ.

  • 20 Apr 2021 07:57 PM (IST)

    ರೋಹಿತ್ ವೇಗದ ಆಟ

    ಮುಂಬೈ ಇಂಡಿಯನ್ಸ್ ಪರ ತಂಡದ ನಾಯಕ ರೋಹಿತ್ ಶರ್ಮಾ ಬಿರುಸಿನ ಆಟ ಆಡುತ್ತಿದ್ದಾರೆ. 17 ಬಾಲ್​ಗೆ 2 ಬೌಂಡರಿ, 2 ಸಿಕ್ಸರ್ ಸಹಿತ 28 ರನ್ ಗಳಿಸಿದ್ದಾರೆ. ಮುಂಬೈ ಇಂಡಿಯನ್ಸ್ 5 ಓವರ್ ಅಂತ್ಯಕ್ಕೆ 45 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ.

  • 20 Apr 2021 07:53 PM (IST)

    ಅಶ್ವಿನ್ ಓವರ್​ಗೆ 15 ರನ್

    ಡೆಲ್ಲಿ ಪರ ನಾಲ್ಕನೇ ಓವರ್ ಬೌಲಿಂಗ್ ಮಾಡಿದ ಆರ್.ಅಶ್ವಿನ್ ಓವರ್​ಗೆ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಫೋರ್-ಸಿಕ್ಸರ್ ಸಿಡಿಸಿದ್ದಾರೆ. ಮುಂಬೈ ತಂಡದ ಮೊತ್ತ 4 ಓವರ್​ಗೆ 1 ವಿಕೆಟ್ ಕಳೆದುಕೊಂಡು 31 ರನ್ ಆಗಿದೆ.

  • 20 Apr 2021 07:49 PM (IST)

    ಬೌಂಡರಿ ಬಾರಿಸಿದ ರೋಹಿತ್ ಶರ್ಮಾ

    ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಪಂದ್ಯದ ಮೊದಲ ಬೌಂಡರಿ ಬಾರಿಸಿದ್ದಾರೆ. ಸ್ಟಾಯ್ನಿಸ್ ಬೌಲಿಂಗ್​ನ ಕೊನೆಯ ಬಾಲ್​ಗೆ ನಾಲ್ಕು ರನ್ ಕಲೆಹಾಕಿದ್ದಾರೆ. ಡೆಲ್ಲಿ ವಿರುದ್ಧ ಮುಂಬೈ 3 ಓವರ್ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 16 ರನ್ ಕಲೆಹಾಕಿದೆ.

  • 20 Apr 2021 07:45 PM (IST)

    ಡಿ ಕಾಕ್ ಔಟ್

    ಮುಂಬೈ ಇಂಡಿಯನ್ಸ್ ದಾಂಡಿಗ ಕ್ವಿಂಟನ್ ಡಿ ಕಾಕ್ 4 ಬಾಲ್​ಗೆ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಸ್ಟಾಯಿನಿಸ್ ಬಾಲ್​ಗೆ ಕೀಪರ್ ಪಂತ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ಮುಂಬೈ ಇಂಡಿಯನ್ಸ್ 9 ರನ್​ಗೆ 1 ವಿಕೆಟ್ ಕಳೆದುಕೊಂಡಿದೆ.

  • 20 Apr 2021 07:42 PM (IST)

    ಮುಂಬೈ ಇಂಡಿಯನ್ಸ್ 9/0 (2 ಓವರ್)

    2 ಓವರ್​ಗಳ ಅಂತ್ಯಕ್ಕೆ ಮುಂಬೈ ಇಂಡಿಯನ್ಸ್ 9 ರನ್ ಗಳಿಸಿದೆ. ಯಾವುದೇ ವಿಕೆಟ್ ನಷ್ಟವಿಲ್ಲದೆ ಮುಂಬೈ ಬ್ಯಾಟಿಂಗ್ ಮಾಡುತ್ತಿದೆ. ಡೆಲ್ಲಿ ಪರ ಸ್ಪಿನ್ನರ್ ಆರ್. ಅಶ್ವಿನ್ ಬೌಲಿಂಗ್ ಮಾಡಿದ್ದು, ಕೇವಲ 3 ರನ್ ಬಿಟ್ಟುಕೊಟ್ಟಿದ್ದಾರೆ.

  • 20 Apr 2021 07:37 PM (IST)

    ಮೊದಲ ಓವರ್​ಗೆ 6 ರನ್

    ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ತಂಡದ ಪರ ರೋಹಿತ್ ಶರ್ಮಾ ಹಾಗೂ ಡಿ ಕಾಕ್ ಕ್ರೀಸ್​ನಲ್ಲಿದ್ದಾರೆ. ಮೊದಲ ಓವರ್​ನ್ನು ಸ್ಟಾಯ್ನಿಸ್ ಬಾಲ್ ಮಾಡಿದ್ದು 6 ರನ್ ಬಿಟ್ಟುಕೊಟ್ಟಿದ್ದಾರೆ. ತಂಡದ ಮೊತ್ತ 6/0 (1 ಓವರ್) ಆಗಿದೆ. ಯಾವುದೇ ಬೌಂಡರಿ ಅಥವಾ ಸಿಕ್ಸರ್ ಮುಂಬೈನಿಂದ ಬಂದಿಲ್ಲ.

  • 20 Apr 2021 07:31 PM (IST)

    ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್

    ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್, ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ರಾಹುಲ್ ಚಹರ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್

  • 20 Apr 2021 07:29 PM (IST)

    ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್

    ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್: ಪೃಥ್ವಿ ಶಾ, ಶಿಖರ್ ಧವನ್, ಸ್ಟೀವನ್ ಸ್ಮಿತ್, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೋಯಿನಿಸ್, ಶಿಮ್ರಾನ್ ಹೆಟ್ಮಿಯರ್, ಲಲಿತ್ ಯಾದವ್, ರವಿಚಂದ್ರನ್ ಅಶ್ವಿನ್, ಕಗಿಸೊ ರಬಾಡ, ಅಮಿತ್ ಮಿಶ್ರಾ, ಅವೇಶ್ ಖಾನ್

  • 20 Apr 2021 07:27 PM (IST)

    ಟಾಸ್ ವೇಳೆ ಉಭಯ ತಂಡದ ನಾಯಕರು

    ಟಾಸ್ ವೇಳೆ ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ

  • 20 Apr 2021 07:06 PM (IST)

    ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್

    ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಮಾಡಲಿದೆ.

  • Published On - Apr 20,2021 10:56 PM

    Follow us
    ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
    ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
    ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
    ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
    70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
    70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
    ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
    ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
    ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
    ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
    ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
    ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
    ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
    ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
    ‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
    ‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
    ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
    ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
    ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
    ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ