ICC World T20 -2021: ವೀಸಾ ಅನುಮೋದನೆ ಬಳಿಕ ಸದ್ಯದಲ್ಲೇ ಭಾರತಕ್ಕೆ ಬರುತ್ತಿದ್ದಾರೆ ಪಾಕಿಸ್ತಾನದ ಕ್ರಿಕೆಟ್ ಆಟಗಾರರು!
ಬಾಬರ್ ಅಜಂ ನೇತೃತ್ವದ ಪಾಕಿಸ್ತಾನದ ಕ್ರಿಕೆಟ್ ತಂಡಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಭಾರತ ಸರ್ಕಾರವು ಅವರಿಗೆಲ್ಲಾ ವೀಸಾ ನೀಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಆದರೆ ಪಾಕಿಸ್ತಾನದಲ್ಲಿನ ಕ್ರಿಕೆಟ್ ಪ್ರೇಮಿಗಳೂ ಸಹ ಭಾರತದೊಳಕ್ಕೆ ಪ್ರವೇಶಿಸಬಹುದಾ? ಅವರಿಗೂ ವೀಸಾ ನೀಡಲಾಗುವುದಾ? ಎಂಬುದು ಇನ್ನೂ ತೀರ್ಮಾನವಾಗಿಲ್ಲ.
T20 World Cup ಹವಾ ಸದ್ಯದಲ್ಲೇ ಶುರುವಾಗಲಿದೆ. ಜೊತೆಗೆ ಪಾಕಿಸ್ತಾನದ ಆಟಗಾರರು ಭಾರತದೊಳಕ್ಕೆ ಬಂದು ಕ್ರಿಕೆಟ್ ಆಡಲಿದ್ದಾರೆ. ಈ ಮಧ್ಯೆ, ನೆರೆಯ ಪಾಕಿಸ್ತಾನದ ಕ್ರಿಕೆಟ್ ಆಟಗಾರರು ಭಾರತಕ್ಕೆ ಬರಲು ವೀಸಾ ನೀಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನದ ಕ್ರಿಕೆಟ್ ಆಟಗಾರರು ಭಾರತಕ್ಕೆ ಬರಲು ವೀಸಾ ನೀಡುವುದಕ್ಕೆ ಭಾರತ ಸರ್ಕಾರ ಅನುಮೋದನೆ ನೀಡಿದೆ ಎಂದು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ಗೆ ಬಿಸಿಸಿಐ ಸಂದೇಶ ರವಾನಿಸಿದೆ ಎಂಬ ಮಾಹಿತಿ ಸಿಕ್ಕಿದೆ.
ಇದೇ ಅಕ್ಟೋಬರ್ ತಿಂಗಳಲ್ಲಿ ICC World T20 -2021 ಪಂದ್ಯಾವಳಿ ನಡೆಯಲಿದೆ. ಅದರಲ್ಲಿ ಭಾಗವಹಿಸಲು ಬಾಬರ್ ಅಜಂ ನೇತೃತ್ವದ ಪಾಕಿಸ್ತಾನದ ಕ್ರಿಕೆಟ್ ತಂಡಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಭಾರತ ಸರ್ಕಾರವು ಅವರಿಗೆಲ್ಲಾ ವೀಸಾ ನೀಡಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಪಾಕ್ ಕ್ರಿಕೆಟ್ ತಂಡಕ್ಕೆ ವೀಸಾ ನೀಡುವ ವಿಚಾರ ಇತ್ಯರ್ಥಗೊಂಡಿದೆ. ಆದರೆ ಪಾಕಿಸ್ತಾನದಲ್ಲಿನ ಕ್ರಿಕೆಟ್ ಪ್ರೇಮಿಗಳೂ ಸಹ ಭಾರತದೊಳಕ್ಕೆ ಪ್ರವೇಶಿಸಬಹುದಾ? ಅವರಿಗೂ ವೀಸಾ ನೀಡಲಾಗುವುದಾ? ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಸದ್ಯದಲ್ಲೇ ಅದೂ ತೀರ್ಮಾನವಾಗಲಿದೆ ಎಂದು ಬಿಸಿಸಿಐ ಉನ್ನತ ಪದಾಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ಹಲವಾರು ವರ್ಷಗಳಿಂದ ರಾಜಕೀಯ ಸಂಘರ್ಷಗಳು ತಾಂಡವವಾಡುತ್ತಿರುವುದರಿಂದ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಪ್ರವಾಸಗಳು ಏರ್ಪಟ್ಟಿಲ್ಲ. ಈ ಮಧ್ಯೆ 9 ಕೇಂದ್ರಗಳಲ್ಲಿ ICC World T20 -2021 ಮ್ಯಾಚ್ಗಳನ್ನು ನಡೆಸಲು ಬಿಸಿಸಿಐ ನಿಗದಿಪಡಿಸಿದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ದೆಹಲಿ, ಧರ್ಮಶಾಲಾ ಮತ್ತು ಮುಂಬೈ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಫೈನಲ್ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.
(India to grant visas to Pak cricket players for T20 World Cup BCCI secretary Jay Shah reportedly informed icc)
Published On - 1:16 pm, Sat, 17 April 21