IPL 2021: ರಾಜಸ್ಥಾನ್ ವಿರುದ್ಧ 4 ಕ್ಯಾಚ್ ಪಡೆದ ರವೀಂದ್ರ ಜಡೇಜಾ; ಧೋನಿ 2013ರಲ್ಲಿ ಮಾಡಿದ್ದ ಟ್ವೀಟ್ ಮತ್ತೆ ವೈರಲ್!
ನಾಲ್ಕು ಕ್ಯಾಚ್ ಹಿಡಿದ ರವೀಂದ್ರ ಜಡೇಜಾ ಬಗ್ಗೆ ಟ್ವಿಟರ್ನಲ್ಲಿ 2013ರ ಟ್ವೀಟ್ ಒಂದು ಹರಿದಾಡುತ್ತಿದೆ. ಅದರಲ್ಲಿ ಧೋನಿ ಜಡೇಜಾ ಫೀಲ್ಡಿಂಗ್ ಬಗ್ಗೆ ಬರೆದುಕೊಂಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧ ನಿನ್ನೆ (ಏಪ್ರಿಲ್ 19) ನಡೆದ ಐಪಿಎಲ್ 2021 ಟೂರ್ನಿಯ 12ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 45 ರನ್ಗಳ ಸುಲಭ ಜಯ ದಾಖಲಿಸಿತು. ಪಂದ್ಯದಲ್ಲಿ ರವೀದ್ರ ಜಡೇಜಾ ಬೌಲಿಂಗ್ ಹಾಗೂ ಫೀಲ್ಡಿಂಗ್ ಎರಡರಲ್ಲೂ ಮಿಂಚಿದರು. 4 ಓವರ್ಗಳಲ್ಲಿ 28 ರನ್ ನೀಡಿ 2 ವಿಕೆಟ್ ಕಬಳಿಸಿದ್ದಲ್ಲದೆ, 4 ಕ್ಯಾಚ್ಗಳನ್ನು ಕೂಡ ಪಡೆದರು. ರಾಜಸ್ಥಾನ್ ರಾಯಲ್ಸ್ ತಂಡವನ್ನು 143/9ಕ್ಕೆ ನಿಯಂತ್ರಿಸಲು ಜಡೇಜಾ ಬಿರುಸಿನ ಫೀಲ್ಡಿಂಗ್ ಕೂಡ ಸಹಕಾರಿಯಾಗಿತ್ತು.
ನಾಲ್ಕು ಕ್ಯಾಚ್ ಹಿಡಿದ ರವೀಂದ್ರ ಜಡೇಜಾ ಬಗ್ಗೆ ಟ್ವಿಟರ್ನಲ್ಲಿ 2013ರ ಟ್ವೀಟ್ ಒಂದು ಹರಿದಾಡುತ್ತಿದೆ. ಅದರಲ್ಲಿ ಧೋನಿ ಜಡೇಜಾ ಫೀಲ್ಡಿಂಗ್ ಬಗ್ಗೆ ಬರೆದುಕೊಂಡಿದ್ದಾರೆ. ‘ಸರ್ ಜಡೇಜಾ ಕ್ಯಾಚ್ ಪಡೆದುಕೊಳ್ಳಲು ಓಡುವುದಿಲ್ಲ. ಬದಲಾಗಿ, ಬಾಲ್ ತಾನಾಗೇ ಜಡೇಜಾರನ್ನು ಹುಡುಕಿ ಬಂದು ಕೈಯಲ್ಲಿ ಲ್ಯಾಂಡ್ ಆಗುತ್ತದೆ’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಈಗ ಮತ್ತೆ ವೈರಲ್ ಆಗಿದೆ.
ನಾಲ್ಕನೇ ಕ್ಯಾಚ್ ಪಡೆದ ಬಳಿಕ ಜಡೇಜಾ ಕೈ ಎತ್ತಿ ‘ನಾಲ್ಕು’ ಕ್ಯಾಚ್ ಎಂದು ಸೂಚಿಸುತ್ತಾ ಸಂಭ್ರಮಿಸಿದ್ದರು.
Sir jadeja doesn’t run to take the catch but the ball finds him and lands on his hand
— Mahendra Singh Dhoni (@msdhoni) April 9, 2013
ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಟೂರ್ನಿಯ 12ನೇ ಪಂದ್ಯಾಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ವಿರುದ್ಧ 45 ರನ್ಗಳ ಗೆಲುವು ದಾಖಲಿಸಿತ್ತು. ಚೆನ್ನೈ ಪರ ಮೊಯೀನ್ ಅಲಿ 3 ಓವರ್ಗೆ 7 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಜಡೇಜಾ 4 ಓವರ್ಗೆ 28 ರನ್ ನೀಡಿ 2 ವಿಕೆಟ್ ಕಿತ್ತಿದ್ದರು. ಸ್ಯಾಮ್ ಕುರ್ರನ್ 4 ಓವರ್ಗೆ 24 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದ್ದರು.
ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರ ಬಟ್ಲರ್ 49 (35) ಗಳಿಸಿದ್ದರು. ವೋಹ್ರಾ 14, ದುಬೆ 17, ತೆವಾಟಿಯಾ 20, ಉನಾದ್ಕತ್ 24 ಹೊರತುಪಡಿಸಿ ಘಟಾನುಘಟಿ ದಾಂಡಿಗರು 5 ರನ್ ಕೂಡ ದಾಟದೆ ವಿಕೆಟ್ ನೀಡಿ ಸೋಲೊಪ್ಪಿಕೊಂಡಿದ್ದರು.
ಇದನ್ನೂ ಓದಿ: IPL 2021, MS Dhoni: ನನಗೆ ವಯಸ್ಸಾಗಿದೆ ಅನಿಸುತ್ತಿದೆ: 200ನೇ ಪಂದ್ಯ ಗೆದ್ದ ಬಳಿಕ ಧೋನಿ ಮಾತು
ಇದನ್ನೂ ಓದಿ: IPL 2021: ರಾಜಸ್ಥಾನ್ ವಿರುದ್ಧ ಅಪರೂಪದ ದಾಖಲೆ ಮಾಡಿದ ಧೋನಿ! ಕ್ಯಾಪ್ಟನ್ ಕೂಲ್ ನಂತರದ ಸ್ಥಾನದಲ್ಲಿ ಕೊಹ್ಲಿ, ರೋಹಿತ್
(IPL 2021 MS Dhoni 2013 tweet on Ravindra Jadeja goes viral after he took 4 catches against RR)
Published On - 3:32 pm, Tue, 20 April 21