IPL 2021 MI vs DC Live Streaming: ಪಂದ್ಯ ಆರಂಭವಾಗುವ ಸಮಯ, ಲೈವ್ ಸ್ಟ್ರೀಮಿಂಗ್, ಯಾವ ಚಾನೆಲ್ನಲ್ಲಿ ವೀಕ್ಷಣೆ, ಇಲ್ಲಿದೆ ಮಾಹಿತಿ
IPL 2021 MI vs DC live streaming: ಎರಡೂ ತಂಡಗಳು ಟೂರ್ನಿಯಲ್ಲಿ ಇದುವರೆಗೆ ಮೂರು ಪಂದ್ಯಗಳನ್ನು ಆಡಿದ್ದು ಎರಡು ಬಾರಿ ಜಯಗಳಿಸಿವೆ. ತಂಡಗಳು ಗುಣಮಟ್ಟದ ಆಟಗಾರರನ್ನು ಹೊಂದಿವೆ.
ಕಳೆದ ವರ್ಷದ ರನ್ನರ್ ಅಪ್ ದೆಹಲಿ ಕ್ಯಾಪಿಟಲ್ಸ್ ಮತ್ತು ಚಾಂಪಿಯನ್ ಮುಂಬೈ ಇಂಡಿಯನ್ಸ್ ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 2021 ರ 13ನೇ ಪಂದ್ಯದಲ್ಲಿ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಎದುರುಬದುರಾಗುತ್ತಿವೆ. ಎರಡೂ ತಂಡಗಳು ಟೂರ್ನಿಯಲ್ಲಿ ಇದುವರೆಗೆ ಮೂರು ಪಂದ್ಯಗಳನ್ನು ಆಡಿದ್ದು ಎರಡು ಬಾರಿ ಜಯಗಳಿಸಿವೆ. ತಂಡಗಳು ಗುಣಮಟ್ಟದ ಆಟಗಾರರನ್ನು ಹೊಂದಿವೆ ಮತ್ತು ಯಾವುದೇ ಕ್ಷಣದಲ್ಲೂ ಪಂದ್ಯದ ದಿಕ್ಕನ್ನು ಬದಲಿಸುವ ಆಟಗಾರರನ್ನು ಹೊಂದಿವೆ. ಎರಡು ಬ್ಯಾಕ್-ಟು-ಬ್ಯಾಕ್ ವಿಜಯಗಳೊಂದಿಗೆ ಮುಂಬೈ ಆತ್ಮ ವಿಶ್ವಾದಲ್ಲಿ ಬೀಗುತ್ತಿದೆ.
ಮುಂಬೈನ ಬೌಲರ್‌ಗಳು, ವಿಶೇಷವಾಗಿ ಸ್ಪಿನ್ನರ್ ರಾಹುಲ್ ಚಹರ್ ಅವರು ಗೆದ್ದ ಪಂದ್ಯಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕಳೆದ ಪಂದ್ಯದಲ್ಲಿ ರಾಹುಲ್ ಚೆನ್ನೈ ಟ್ರ್ಯಾಕ್‌ಗಳ ನಿಧಾನ ಸ್ವರೂಪದ ಪಿಚ್ನಲ್ಲಿ ಸ್ಥಿರತೆ ಕಂಡುಕೊಂಡು ಕೊನೆಯ ಎರಡು ಪಂದ್ಯಗಳಲ್ಲಿ ಏಳು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಈಗ ಅವರು ಜಸ್ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ಅವರೊಂದಿಗೆ ದೆಹಲಿಯ ಗುಣಮಟ್ಟದ ಬ್ಯಾಟಿಂಗ್ ಶ್ರೇಣಿಯನ್ನು ಪತನ ಮಾಡುವಲ್ಲಿ ಮುಂಬೈಗೆ ಪ್ರಮುಖ ಪಾತ್ರ ವಹಿಸಲಿದ್ದಾರೆ.
ದೆಹಲಿ ಕ್ಯಾಪಿಟಲ್ಸ್ ತಮ್ಮ ಹಿಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಉತ್ತಮ ಪ್ರದರ್ಶನ ನೀಡಿತು. ಆರಂಭಿಕರಾದ ಧವನ್ ಹಾಗೂ ಪೃಥ್ವಿ ಶಾ ಉತ್ತಮ ಅಡಿಪಾಯ ಹಾಕಿಕೊಟ್ಟರು. ಅದರಲ್ಲೂ ಧವನ್ ಅಬ್ಬರದ ಬ್ಯಾಟಿಂಗ್ ಮಾಡಿದ್ದಲ್ಲದೆ ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು. ನಂತರ ಬಂದ ನಾಯಕ ರಿಷಭ್ ಹಾಗೂ ಸ್ಟೋಯ್ನಿಸ್ ಕೊನೆಯ ಹಂತದಲ್ಲಿ ಅವಶ್ಯಕವಾದ ಆಟ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಹೀಗಾಗಿ ಕಳೆದ ಪಂದ್ಯದ ಗೆಲುವಿನಿಂದಾಗಿ ಡೆಲ್ಲಿ ತಂಡವೂ ಗೆಲುವಿನ ಹಾಟ್ ಫೆವರೆಟ್ ಆಗಿದೆ.
ಡಿಸಿ ಮತ್ತು ಎಂಐ ನಡುವಿನ ಐಪಿಎಲ್‌ನ 13 ನೇ ಪಂದ್ಯ ಯಾವಾಗ ನಡೆಯಲಿದೆ? ಡಿಸಿ ಮತ್ತು ಎಂಐ ನಡುವಿನ ಐಪಿಎಲ್‌ನ ಪಂದ್ಯ 13 ಪಂದ್ಯ 2021 ಏಪ್ರಿಲ್ 20 ರಂದು ನಡೆಯಲಿದೆ.
ಪಂದ್ಯದ ಸ್ಥಳ ಯಾವುದು? ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಪಂದ್ಯವು ಯಾವ ಸಮಯದಲ್ಲಿ ಪ್ರಾರಂಭವಾಗುತ್ತದೆ? ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ. ಟಾಸ್ ಸಂಜೆ 7 ಗಂಟೆಗೆ ನಡೆಯಲಿದೆ.
ಯಾವ ಟಿವಿ ಚಾನೆಲ್‌ಗಳು ಪಂದ್ಯವನ್ನು ಪ್ರಸಾರ ಮಾಡುತ್ತವೆ? ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿಯೂ ಲಭ್ಯವಿರುತ್ತದೆ.
ಸಂಭವನೀಯ ಇಲೆವನ್ ದೆಹಲಿ ಕ್ಯಾಪಿಟಲ್ಸ್ ಶಿಖರ್ ಧವನ್, ಪೃಥ್ವಿ ಶಾ, ಸ್ಟೀವ್ ಸ್ಮಿತ್, ರಿಷಭ್ ಪಂತ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಲಲಿತ್ ಯಾದವ್, ಕ್ರಿಸ್ ವೋಕ್ಸ್, ಲುಕ್ಮನ್ ಮೆರಿವಾಲಾ / ಅಮಿತ್ ಮಿಶ್ರಾ, ರವಿ ಅಶ್ವಿನ್, ಕಗಿಸೊ ರಬಾಡಾ, ಅವೇಶ್ ಖಾನ್
ಬೆಂಚ್: ಶಿಮ್ರಾನ್ ಹೆಟ್ಮಿಯರ್, ಶಮ್ಸ್ ಮುಲಾನಿ, ಆಕ್ಸಾರ್ ಪಟೇಲ್, ಟಾಮ್ ಕುರ್ರನ್, ಅನ್ರಿಕ್ ನಾರ್ಟ್ಜೆ, ಅನಿರುದ್ಧಾ ಜೋಶಿ, ವಿಷ್ಣು ವಿನೋದ್, ಸ್ಯಾಮ್ ಬಿಲ್ಲಿಂಗ್ಸ್, ರಿಪಾಲ್ ಪಟೇಲ್, ಅಮಿತ್ ಮಿಶ್ರಾ / ಲುಕ್ಮನ್ ಮೆರಿವಾಲಾ, ಇಶಾಂತ್ ಶರ್ಮಾ, ಪ್ರವೀಣ್ ದುಬೆ, ಉಮೇಶ್ ಯಾದವ್
ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ರಾಹುಲ್ ಚಹರ್, ಆಡಮ್ ಮಿಲ್ನೆ, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ
ಬೆಂಚ್: ಅಂಮೋಲ್‌ಪ್ರೀತ್ ಸಿಂಗ್, ಸೌರಭ್ ತಿವಾರಿ, ಅನುಕುಲ್ ರಾಯ್, ಜೇಮ್ಸ್ ನೀಶಮ್, ಅರ್ಜುನ್ ತೆಂಡೂಲ್ಕರ್, ಪಿಯೂಷ್ ಚಾವ್ಲಾ, ನಾಥನ್ ಕೌಲ್ಟರ್ ನೈಲ್, ಆದಿತ್ಯ ತಾರೆ, ಜಯಂತ್ ಯಾದವ್, ಯುಧ್ವೀರ್ ಸಿಂಗ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್, ಕ್ರಿಸ್ ಲಿನ್, ಮಾರ್ಕೊ ಜಾನ್ಸ್
Published On - 7:37 am, Tue, 20 April 21