IPL 2021, MS Dhoni: ನನಗೆ ವಯಸ್ಸಾಗಿದೆ ಅನಿಸುತ್ತಿದೆ: 200ನೇ ಪಂದ್ಯ ಗೆದ್ದ ಬಳಿಕ ಧೋನಿ ಮಾತು
ಮಹೇಂದ್ರ ಸಿಂಗ್ ಧೋನಿಗೆ ಇದು ಕೊನೆಯ ಸೀಸನ್ ಐಪಿಎಲ್ ಎಂಬ ಮಾತು ಕೂಡ ಕೇಳಿಬಂದಿದೆ. ಈ ಸೀಸನ್ ಬಳಿಕ ಧೋನಿ ನಿವೃತ್ತಿ ಹೊಂದುತ್ತಾರೆ ಎಂಬ ಅಭಿಪ್ರಾಯವಿದೆ. ಈ ಎಲ್ಲದರ ಮಧ್ಯೆ ಧೋನಿ ನಿನ್ನೆ (ಏಪ್ರಿಲ್ 16) ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಆಡಿದ ಮಾತು ಎಲ್ಲರನ್ನೂ ಚಕಿತಗೊಳಿಸಿದೆ.
ಮುಂಬೈ: ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ, 40 ವರ್ಷ ವಯಸ್ಸಿನತ್ತ ಹೆಜ್ಜೆ ಇಡುತ್ತಿದ್ದಾರೆ. ಟಿ20 ವಿಶ್ವಕಪ್, ಅಂತಾರಾಷ್ಟ್ರೀಯ ಕ್ರಿಕೆಟ್ ವಿಶ್ವಕಪ್, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಐಪಿಎಲ್ ಟ್ರೋಫಿ ತಂದುಕೊಟ್ಟ ನಾಯಕ ಧೋನಿ, ವಯಸ್ಸು ಆಗುತ್ತಿದ್ದಂತೆ ಹೆಚ್ಚು ಹೆಚ್ಚು ಗಂಭಿರವಾಗುತ್ತಿದ್ದಾರೆ. ಮೊದಲಿನ ಅಗ್ರೆಸಿವ್ ನೋಟ, ಸಂಭ್ರಮ, ಬೇಸರ ಎಲ್ಲವೂ ಹದವಾಗಿ ಹೊಂದಿಕೊಂಡಂತೆ ಕಾಣುತ್ತಿರುತ್ತಾರೆ. ಹಿರಿಯ ಕ್ರಿಕೆಟಿಗ ಎಂದೇ ಹೇಳಬಹುದಾದ ಧೋನಿ, ವಯಸ್ಸಾಗುತ್ತಿದ್ದರೂ ತಮ್ಮ ಆಟದಲ್ಲಿ ಶೇ. 100ರಷ್ಟು ಸಮರ್ಪಿತ ಭಾವದಿಂದ ಆಡುವುದನ್ನು ಬಿಟ್ಟಿಲ್ಲ. ತಂಡಕ್ಕೆ ಬೇಕಾದಂತೆ ಹೊಂದುತ್ತಾ, ತಂಡವನ್ನೂ ಹೊಂದಿಸುತ್ತಾ ಕ್ಯಾಪ್ಟನ್ ಕೂಲ್ ಆಗಿಯೇ ಇರುತ್ತಾರೆ.
ಮಹೇಂದ್ರ ಸಿಂಗ್ ಧೋನಿಗೆ ಇದು ಕೊನೆಯ ಸೀಸನ್ ಐಪಿಎಲ್ ಎಂಬ ಮಾತು ಕೂಡ ಕೇಳಿಬಂದಿದೆ. ಈ ಸೀಸನ್ ಬಳಿಕ ಧೋನಿ ನಿವೃತ್ತಿ ಹೊಂದುತ್ತಾರೆ ಎಂಬ ಅಭಿಪ್ರಾಯವಿದೆ. ಈ ಎಲ್ಲದರ ಮಧ್ಯೆ ಧೋನಿ ನಿನ್ನೆ (ಏಪ್ರಿಲ್ 16) ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಬಳಿಕ ಆಡಿದ ಮಾತು ಎಲ್ಲರನ್ನೂ ಚಕಿತಗೊಳಿಸಿದೆ.
ಎಮ್.ಎಸ್. ಧೋನಿ ನಿನ್ನೆ ಚೆನ್ನೈ ಪರ ತಮ್ಮ 200ನೇ ಐಪಿಎಲ್ ಪಂದ್ಯವನ್ನು ಆಡಿದರು. 200ನೇ ಪಂದ್ಯದ ಉಡುಗೊರೆಯಾಗಿ ಚೆನ್ನೈ ತಂಡ 6 ವಿಕೆಟ್ಗಳ ಗೆಲುವನ್ನೂ ದಾಖಲಿಸಿತು. ಪಂದ್ಯದ ಬಳಿಕ, ಧೋನಿಗೆ 200ನೇ ಪಂದ್ಯದ ಬಗ್ಗೆ ಅಭಿಪ್ರಾಯ ಕೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಧೋನಿ, ಬಹಳ ಹಳಬನಾದೆ ಎಂದು ಅನಿಸುತ್ತಿದೆ. ವಯಸ್ಸಾದಂತೆ ಅನಿಸುತ್ತಿದೆ ಎಂದು ಹೇಳಿದ್ದಾರೆ. ಪಂದ್ಯದ ಬಳಿಕ ಧೋನಿ ಆಡಿರುವ ಮಾತೀಗ ಎಮ್ಎಸ್ಡಿ ಅಭಿಮಾನಿಗಳಿಗೆ ಬೇಸರ ತರಿಸಿದೆ. ಸ್ವತಃ ಧೋನಿ ತಮಗೆ ವಯಸ್ಸಾಗಿದೆ ಅಂದಿದ್ದು, ಧೋನಿ ಆಟದ ಬಗ್ಗೆ ಆಸೆ, ವಯಸ್ಸಾಯ್ತು ಎಂಬ ಬೇಸರ ಎರಡನ್ನೂ ತಂದೊಡ್ಡಿದೆ.
ಐಪಿಎಲ್ 2021 ಟೂರ್ನಿಯ 8ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ಗಳ ಸುಲಭ ಜಯ ದಾಖಲಿಸಿತ್ತು. ಚೆನ್ನೈ ಬೌಲರ್ಗಳ ಅದ್ಭುತ ದಾಳಿ ಹಾಗೂ ದಾಂಡಿಗರ ಶಿಸ್ತುಬದ್ಧ ಬ್ಯಾಟಿಂಗ್ ಮೂಲಕ ಪಂದ್ಯವನ್ನು ತಂಡ ತನ್ನ ವಶವಾಗಿಸಿಕೊಂಡಿತ್ತು. ಚೆನ್ನೈ ಪರ ಮೊಯೀನ್ ಅಲಿ 46 (31) ಹಾಗೂ ಡು ಪ್ಲೆಸಿಸ್ 36 (33)* ದಾಖಲಿಸಿದ್ದರು. ಪಂಜಾಬ್ ಪರ ಶಮಿ 2, ಅರ್ಶ್ದೀಪ್ ಹಾಗೂ ಮುರುಗನ್ 1 ವಿಕೆಟ್ ಪಡೆದಿದ್ದರು.
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 106 ರನ್ ದಾಖಲಿಸಿತ್ತು. ಚೆನ್ನೈ ಸೂಪರ್ ಕಿಂಗ್ಸ್ಗೆ ಗೆಲ್ಲಲು 107 ರನ್ ಟಾರ್ಗೆಟ್ ನೀಡಿತ್ತು. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತ ಪ್ರದರ್ಶನ ತೋರಿತ್ತು. ತಂಡದ ಪರ ದೀಪಕ್ ಚಹರ್ 4 ಓವರ್ಗೆ ಕೇವಲ 13 ರನ್ ನೀಡಿ, ಮುಖ್ಯ 4 ವಿಕೆಟ್ ಪಡೆದು ಮಿಂಚಿದ್ದರು. ಮೊಯೀನ್ ಅಲಿ ಹಾಗೂ ಡ್ವೇನ್ ಬ್ರಾವೊ ತಲಾ 1 ವಿಕೆಟ್ ಪಡೆದಿದ್ದರು. ನಿನ್ನೆ ಗೆಲ್ಲುವ ಮೂಲಕ ಸಿಎಸ್ಕೆ ತಂಡ ಧೋನಿಗೆ 200ನೇ ಪಂದ್ಯದ ಉಡುಗೊರೆ ನೀಡಿತ್ತು.
ಇದನ್ನೂ ಓದಿ: IPL 2021: ಸಿಎಸ್ಕೆ ಪರ 200ನೇ ಪಂದ್ಯವನ್ನಾಡಿದ ಧೋನಿ! ಸೋಜಿಗವೆಂಬಂತೆ ಪಂಜಾಬ್ ವಿರುದ್ಧವೇ ದಾಖಲಾದವು 3 ದಾಖಲೆಗಳು
ಇದನ್ನೂ ಓದಿ: IPL 2021: ಚೆನ್ನೈ ನಾಯಕ ಧೋನಿಗೆ ಕಾಡಿದ ನಿಷೇಧ ಭೀತಿ; ಐಪಿಎಲ್ ಮಂಡಳಿ ಎಚ್ಚರಿಕೆ
(IPL 2021 CSK Chennai Super Kings MS Dhoni Mahendra Singh Dhoni after 200 th IPL Match)
Published On - 3:08 pm, Sat, 17 April 21