IPL 2021: ಚೆನ್ನೈ ನಾಯಕ ಧೋನಿಗೆ ಕಾಡಿದ ನಿಷೇಧ ಭೀತಿ; ಐಪಿಎಲ್​ ಮಂಡಳಿ ಎಚ್ಚರಿಕೆ

ಡೆಲ್ಲಿ ಬ್ಯಾಟ್​ ಮಾಡುವಾಗ ಚೆನ್ನೈ ನಿಧಾನವಾಗಿ ಬೌಲಿಂಗ್​ ಮಾಡಿತ್ತು. ಈ ಕಾರಣಕ್ಕೆ ಧೋನಿಗೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್​ ಮಂಡಳಿ ತಿಳಿಸಿದೆ.

IPL 2021: ಚೆನ್ನೈ ನಾಯಕ ಧೋನಿಗೆ ಕಾಡಿದ ನಿಷೇಧ ಭೀತಿ; ಐಪಿಎಲ್​ ಮಂಡಳಿ ಎಚ್ಚರಿಕೆ
ಧೋನಿ
Follow us
ರಾಜೇಶ್ ದುಗ್ಗುಮನೆ
| Updated By: Skanda

Updated on: Apr 12, 2021 | 8:04 AM

13ನೇ ಸೀಸನ್​ನಲ್ಲಿ ಹೀನಾಯ ಸೋಲು ಕಂಡಿದ್ದ ಚೆನ್ನೈ ಸೂಪರ್​ ಕಿಂಗ್ಸ್​ 14ನೇ ಸೀಸನ್​ನ ಮೊದಲ ಪಂದ್ಯದಲ್ಲೇ ಸೋತಿದೆ. ಸಿಎಸ್​ಕೆ ನಾಯಕ ಎಂ.ಎಸ್​​. ಧೋನಿ ಶೂನ್ಯ ಸುತ್ತಿದ್ದರು. ಇದಾದ ಬೆನ್ನಲ್ಲೇ ಧೋನಿಗೆ ಭಾರೀ ದಂಡ ಬಿದ್ದಿದೆ. ಧೋನಿಗೆ ಬರೋಬ್ಬರಿ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲ, ಅವರಿಗೆ ನಿಷೇಧ ಭೀತಿ ಕೂಡ ಕಾಡಿದೆ. ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಹಾಗೂ ಚೆನ್ನೈ ನಡುವೆ ಪಂದ್ಯ ನಡೆದಿತ್ತು. ಮೊದಲು ಟಾಸ್​ ಗೆದ್ದ ಡೆಲ್ಲಿ ನಾಯಕ ರಿಷಬ್​ ಪಂತ್​ ಬೌಲಿಂಗ್​ ಆಯ್ದುಕೊಂಡರು. ಮೊದಲು ಬ್ಯಾಟ್​ ಮಾಡಿದ ಚೆನ್ನೈ 188 ರನ್​ಗಳ ಟಾರ್ಗೆಟ್​ ನೀಡಿತ್ತು. ಈ ಟಾರ್ಗೆಟ್​ ಬೆನ್ನು ಹತ್ತಿದ ಡೆಲ್ಲಿ ಕೇವಲ 18.4ಓವರ್​ಗೆ 7 ವಿಕೆಟ್​ಗಳ ಗೆಲುವು ಕಂಡಿತ್ತು.

ಡೆಲ್ಲಿ ಬ್ಯಾಟ್​ ಮಾಡುವಾಗ ಚೆನ್ನೈ ನಿಧಾನವಾಗಿ ಬೌಲಿಂಗ್​ ಮಾಡಿತ್ತು. ಈ ಕಾರಣಕ್ಕೆ ಧೋನಿಗೆ ದಂಡ ವಿಧಿಸಲಾಗಿದೆ ಎಂದು ಐಪಿಎಲ್​ ಮಂಡಳಿ ತಿಳಿಸಿದೆ. ಒಂದೊಮ್ಮೆ ಇದು ಪುನರಾವರ್ತನೆ ಆದರೆ, ಅವರು ಒಂದು ಅಥವಾ ಎರಡು ಮ್ಯಾಚ್​ನಿಂದ ಅವರಿಗೆ ನಿರ್ಬಂಧ ಹೇರುವ ಅವಕಾಶ ಕೂಡ ಐಪಿಎಲ್​ ಮಂಡಳಿಗೆ ಇದೆ. ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.

ಒಂದೊಮ್ಮೆ ಈ ತಪ್ಪು ಮತ್ತೆ ಪುನರಾವರ್ತನೆ ಆದರೆ, 24 ಲಕ್ಷ ದಂಡ ಬೀಳಲಿದೆ. ಜತೆಗೆ ತಂಡದ ಪ್ರತಿ ಆಟಗಾರ 6 ಲಕ್ಷ ದಂಡ ಪಾವತಿ ಮಾಡಬೇಕು. ಮೂರನೇ ಬಾರಿಗೆ ವಿಳಂಬವಾದರೆ, ನಾಯಕನಿಗೆ 30 ಲಕ್ಷ ರೂಪಾಯಿ, ತಂಡದ ಉಳಿದ ಆಟಗಾರರಿಗೆ 12 ಲಕ್ಷ ದಂಡ ಬೀಳಲಿದೆ. ಜತೆಗೆ ಕ್ಯಾಪ್ಟನ್​ಗೆ​ ಒಂದು ಮ್ಯಾಚ್​ಗೆ ನಿಷೇಧ ಬೀಳಲಿದೆ.

ಐಪಿಎಲ್​ ಹೊಸ ನಿಯಮದ ಪ್ರಕಾರ 90 ನಿಮಿಷಕ್ಕೆ ಒಂದು ಸೈಡ್​ ಮ್ಯಾಚ್​ ಮುಗಿಸಬೇಕು. ಅಂದರೆ, ಒಂದು ಗಂಟೆಗೆ 14.1 ಓವರ್ ಪೂರ್ಣಗೊಳ್ಳಬೇಕು. ಆದರೆ, ಸಿಎಸ್​ಕೆ ಬೌಲಿಂಗ್​ ವೇಳೆ ಇದು ಸಾಧ್ಯವಾಗಿಲ್ಲ. ಅವರು ಬೌಲಿಂಗ್​ಗೆ ನಿಗದಿಗಿಂತ ಹೆಚ್ಚಿನ ಸಮಯ ತೆಗೆದುಕೊಂಡಿದ್ದಾರೆ. ಹೀಗಾಗಿ ದಂಡ ಹಾಕಲಾಗಿದೆ.

ಇದನ್ನೂ ಓದಿ: Dinesh Karthik IPL 2021 KKR Team Player: ಧೋನಿ ದಾಖಲೆ ಮುರಿಯುವ ಸನಿಹದಲ್ಲಿ ಕೆಕೆಆರ್​ನ ಮಾಜಿ ನಾಯಕ ದಿನೇಶ್ ಕಾರ್ತಿಕ್!