Chris Gayle IPL 2021 PBKS Team Player: ಕೆರಿಬಿಯನ್ ದೈತ್ಯ ಗೇಲ್ ಅಬ್ಬರಿಸಲು ಆರಂಭಿಸಿದರೆ ಎದುರಾಳಿ ತಂಡಗಳ ಸೋಲು ಖಚಿತ
Chris Gayle profile: ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ 349 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಂದರೆ, ಅವರು ಕೇವಲ 349 ಎಸೆತಗಳಿಂದ 2094 ರನ್ ಗಳಿಸಿದ್ದಾರೆ.
ಐಪಿಎಲ್ ಟೀಮ್ ಕಿಂಗ್ಸ್ ಇಲೆವೆನ್ ಪಂಜಾಬ್ ಅನ್ನು ಈಗ ಪಂಜಾಬ್ ಕಿಂಗ್ಸ್ ಎಂದು ಹೆಸರಿಸಲಾಗಿದೆ. ಹೊಸ ಹೆಸರು ಮತ್ತು ಹೊಸ ಜರ್ಸಿಯೊಂದಿಗೆ, ತಂಡವು ಈ ಬಾರಿಯ ಐಪಿಎಲ್‌ನ ಹೊಸ ಒಳನೋಟಕ್ಕೆ ಸಿದ್ಧವಾಗಿದೆ. ಕಳೆದ ಬಾರಿ, ಕೆಎಲ್ ರಾಹುಲ್ ನೇತೃತ್ವದ ಈ ತಂಡಕ್ಕೆ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ, ಆದರೆ ಕೊನೆಯ ಹಂತದವರೆಗೂ ಅದ್ಭುತ ಹೋರಾಟ ನಡೆಸಿ ಎಲ್ಲರ ಮನಗೆಲ್ಲುವಲ್ಲಿ ಸಫಲವಾಗಿತ್ತು. ಇದರ ಕ್ರೆಡಿಟ್ ಇಬ್ಬರು ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳಾದ ಕ್ರಿಸ್ ಗೇಲ್ ಮತ್ತು ನಿಕೋಲಸ್ ಪೂರನ್‌ಗೆ ಸಲ್ಲುತ್ತದೆ. ಆದಾಗ್ಯೂ, ಕಳೆದ ಆವೃತ್ತಿಯಲ್ಲಿ ಗೇಲ್ 14 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಮಾತ್ರ ಆಡಿದ್ದರು.
ನಿರಂತರವಾಗಿ ಗೆದ್ದು ಪ್ಲೇಆಫ್ ಹತ್ತಿರ ಬಂತು ಮೈದಾನಕ್ಕೆ ಕ್ರಿಸ್ ಗೇಲ್ ಆಗಮಿಸುವ ಮೊದಲು, ತಂಡವು ಎಂಟನೇ ಸ್ಥಾನದಲ್ಲಿ ಉಳಿಯುತ್ತದೆಯೇ ಅಥವಾ ಏಳನೇ ಸ್ಥಾನದಲ್ಲಿ ಉಳಿಯುತ್ತದೆಯೇ ಎಂಬ ಸ್ಥಿತಿ ಇತ್ತು ಹಾಗೂ ಅವರು ಆ ಸ್ಥಾನಕ್ಕೇ ಹೋರಾಡಬೇಕು ಎಂಬಂತಾಗಿತ್ತು. ಆದರೆ ಗೇಲ್ ಫಿಟ್ ಆಗಿ ಮೈದಾನಕ್ಕೆ ಇಳಿದ ಕೂಡಲೇ ತಂಡವು ಮೈಕೊಡವಿ ನಿಂತಿತ್ತು. ಪಂಜಾಬ್ ತಂಡ ನಿರಂತರವಾಗಿ ಪಂದ್ಯಗಳನ್ನು ಗೆದ್ದು ಪ್ಲೇಆಫ್ ಹತ್ತಿರ ಬಂತು. ಇತರ ತಂಡಗಳಂತೆ ಬೇರೆಯವರ ಸೋಲು ಗೆಲುವಿನ ಮೇಲೆ ಅವರ ಫಲಿತಾಂಶ ನಿರ್ಧಾರವಾಗಿರಲಿಲ್ಲ. ಬದಲಾಗಿ, ಅವರೇ ತಮ್ಮ ಸ್ವಂತ ಪರಿಶ್ರಮದಿಂದ ಗೆದ್ದು ಪ್ಲೇಆಫ್ ಹತ್ತಿರ ಬಂದಿದ್ದರು. ಆದರೆ ತಂಡವು ನಿರ್ಣಾಯಕ ಪಂದ್ಯದಲ್ಲಿ ಸೋತು ಪಂದ್ಯಾವಳಿಯಿಂದ ಹೊರಬಿತ್ತು. ಇದರ ಹೊರತಾಗಿಯೂ, ಗೇಲ್ 7 ಪಂದ್ಯಗಳಲ್ಲಿ 23 ಸಿಕ್ಸರ್ಗಳನ್ನು ಹೊಡೆದರು. ಆ ಮೂಲಕ ಯೂನಿವರ್ಸ್ ಬಾಸ್ ಎಂಬ ದೈತ್ಯ ಪ್ರತಿಭೆ ಗೇಲ್ ಅವರನ್ನು ಟೀಕಿಸಬಹುದು, ಆದರೆ ನಿರ್ಲಕ್ಷಿಸಲಾಗುವುದಿಲ್ಲ ಎಂಬುದು ಸಾಬೀತಾಯ್ತು. ಹೀಗಾಗಿ ಈ ಬಾರಿ ಉಳಿದ ತಂಡಗಳು ಗೇಲ್ ಅವರ ಆಟವನ್ನು ಆದಷ್ಟು ಬೇಗ ಮುಗಿಸುವತ್ತಲೇ ತಂತ್ರಗಾರಿಕೆ ರೂಪಿಸುತ್ತಿವೆ.
ಕಳೆದ ಬಾರಿ 23 ಸಿಕ್ಸರ್ಗಳನ್ನು ಸಿಡಿಸಿದ್ದ ಗೇಲ್ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ನಡೆದ ಐಪಿಎಲ್ 13 ನೇ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಕೇವಲ 7 ಪಂದ್ಯಗಳನ್ನು ಆಡಿದ್ದರು. ಅನಾರೋಗ್ಯದಿಂದಾಗಿ, ಆರಂಭಿಕ ಪಂದ್ಯಗಳಲ್ಲಿ ಅವರು ತಂಡದ ಭಾಗವಾಗಲು ಸಾಧ್ಯವಾಗಿರಲಿಲ್ಲ. ನಂತರ ಅವರು 41.14 ಸರಾಸರಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 288 ರನ್ ಮತ್ತು 137.14 ಸ್ಟ್ರೈಕ್ ರೇಟ್ ಗಳಿಸಿದರು. ಇದರಲ್ಲಿ ಅವರ ಗರಿಷ್ಠ ಸ್ಕೋರ್ 99 ರನ್. ಆಡಿದ 7 ಪಂದ್ಯಗಳಲ್ಲಿ 3 ಅರ್ಧಶತಕಗಳನ್ನು ಗಳಿಸಿದ್ದ ಗೇಲ್ ಕಳೆದ ಆವೃತ್ತಿಯಲ್ಲಿ 23 ಸಿಕ್ಸರ್ಗಳನ್ನು ಹಾಗೂ 15 ಬೌಂಡರಿಗಳನ್ನು ಬಾರಿಸಿದ್ದರು.
ಗೇಲ್ ಐಪಿಎಲ್‌ನಲ್ಲಿ 349 ಸಿಕ್ಸರ್‌ಗಳೊಂದಿಗೆ 2094 ರನ್ ಗಳಿಸಿದ್ದಾರೆ ಪ್ರಸ್ತುತ, ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್ ಆಗಿರುವ ಕ್ರಿಸ್ ಗೇಲ್ ಐಪಿಎಲ್‌ನಲ್ಲಿ 349 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಂದರೆ, ಅವರು ಕೇವಲ 349 ಎಸೆತಗಳಿಂದ 2094 ರನ್ ಗಳಿಸಿದ್ದಾರೆ. ಗೇಲ್ ಬ್ಯಾಟ್ನಿಂದ ಸಿಡಿದ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಸೇರಿಸಿ 733 ಎಸೆತಗಳಿಂದ 3630 ರನ್ ಬಂದಿದೆ. ಗೇಲ್ ಐಪಿಎಲ್‌ನಲ್ಲಿ ಒಟ್ಟು 132 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 4772 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 41.13 ಸರಾಸರಿ ಮತ್ತು ಸ್ಟ್ರೈಕ್ ದರ 150.11 ಆಗಿದೆ.