AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KKR vs SRH: ಆತ್ಮ ವಿಶ್ವಾಸ ಹೆಚ್ಚಾಗಿದೆ! ಸಂದರ್ಶನಕಾರನ ಎಲ್ಲಾ ಪ್ರಶ್ನೆಗಳಿಗೆ ಕನ್ನಡದಲ್ಲೇ ಉತ್ತರಿಸಿದ ಪ್ರಸಿದ್ಧ್ ಕೃಷ್ಣ.. ವಿಡಿಯೋ ನೋಡಿ

ಆತ್ಮ ವಿಶ್ವಾಸ ಹೆಚ್ಚಾಗಿದೆ. ಅಲ್ಲದೆ ನನ್ನಲ್ಲಿ ಯಾವ ರೀತಿಯ ಬದಲಾವಣೆಯಾಗಿದೆ ಎಂಬುದನ್ನು ನೀವು ಹೇಳಬೇಕು. ಹಾಗಾಗಿ ಅದನ್ನ ನಿಮಗೆ ಬಿಟ್ಟಿದ್ದೀನಿ.

KKR vs SRH: ಆತ್ಮ ವಿಶ್ವಾಸ ಹೆಚ್ಚಾಗಿದೆ! ಸಂದರ್ಶನಕಾರನ ಎಲ್ಲಾ ಪ್ರಶ್ನೆಗಳಿಗೆ ಕನ್ನಡದಲ್ಲೇ ಉತ್ತರಿಸಿದ ಪ್ರಸಿದ್ಧ್ ಕೃಷ್ಣ.. ವಿಡಿಯೋ ನೋಡಿ
ಪ್ರಸಿದ್ಧ್ ಕೃಷ್ಣ
ಪೃಥ್ವಿಶಂಕರ
|

Updated on: Apr 11, 2021 | 10:48 PM

Share

ಕೋಲ್ಕತಾ ನೈಟ್ ರೈಡರ್ಸ್ ತಂಡವು ಯುವ ಭಾರತದ ವೇಗದ ಬೌಲರ್‌ಗಳನ್ನು ಹೊಂದಿದ್ದು, ಅಂತಹ ಒಬ್ಬ ಯುವ ಬೌಲರ್​ಗಳಲ್ಲಿ ಪ್ರಸಿದ್ಧ್ ಕೃಷ್ಣ ಕೂಡ ಒಬ್ಬರು. ಪ್ರಸಿದ್ಧ್ ಕೃಷ್ಣ ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಏಕದಿನ ಚೊಚ್ಚಲ ಪಂದ್ಯವನ್ನಾಡಿದರು ಮತ್ತು ಅವರ ಮೊದಲ ಪಂದ್ಯದಲ್ಲಿಯೇ ಅವರು ಎಷ್ಟು ಪ್ರಭಾವಶಾಲಿ ಬೌಲರ್​ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಮೊದಲ ಪಂದ್ಯದಲ್ಲೇ ಉತ್ತಮ ಪ್ರದರ್ಶನ ತೋರಿರುವ ಪ್ರಸಿದ್ದ್ ತಮ್ಮ ಮೊದಲ ಓವರ್​ನ 3ನೇ ಎಸೆತದಲ್ಲೇ ಅಪಾಯಕಾರಿ ಡೇವಿಡ್ ವಾರ್ನರ್ ಅವರ ವಿಕೆಟ್ ಪಡೆದು ಮಿಂಚಿದ್ದಾರೆ. ಇದರೆ ಸುದ್ದಿ ಇರುವುದು ಈ ಬಗ್ಗೆ ಅಲ್ಲ. ಪಂದ್ಯ ಆರಂಭಕ್ಕೂ ಮುನ್ನ ಸಂದರ್ಶನದಲ್ಲಿ, ಸಂದರ್ಶನಕಾರ ಕೇಳಿದ ಅಷ್ಟೂ ಪ್ರಶ್ನೆಗಳಿಗೂ ಕೃಷ್ಣ ಕನ್ನಡದಲ್ಲಿಯೇ ಉತ್ತರಿಸಿರುವುದು.

ಸಂದರ್ಶನಕಾರ: ಟೀಂ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ನೀವು ಬೌಲರ್​ ಆಗಿ ಏನನ್ನು ಬದಲಾಯಿಸಿಕೊಂಡಿದ್ದೀರಾ?

ಪ್ರಸಿದ್ಧ್ ಕೃಷ್ಣ: ನನ್ನ ಪ್ರದರ್ಶನ ಹಾಗೆಯೇ ಇದೆ. ಆ ರೀತಿಯ ಉತ್ತಮ ಪ್ರದರ್ಶನ ನೀಡಿದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಅದೇ ರೀತಿಯ ಪ್ರದರ್ಶನವನ್ನು ಇಲ್ಲಿಯೂ ನೀಡಬೇಕು ಎಂದುಕೊಂಡಿದ್ದೇನೆ.

ಸಂದರ್ಶನಕಾರ: ಇಂಗ್ಲೆಂಡ್​ ವಿರುದ್ಧದ ಸರಣಿಯಲ್ಲಿ ಮೋರ್ಗಾನ್​ ಆ ತಂಡದ ನಾಯಕರಾಗಿದ್ದರು. ಅಲ್ಲಿ ನೀವು ಉತ್ತಮ ಪ್ರದರ್ಶನ ನೀಡಿದ್ರಿ. ಆ ಸರಣಿ ಮುಗಿದ ಬಳಿಕ ಮೋರ್ಗಾನ್​ ಜೊತೆ ಮಾತುಕತೆ ಮುಂದುವರೆಸಿದ್ದೀರಾ?

ಪ್ರಸಿದ್ಧ್ ಕೃಷ್ಣ: ನಾವಿಬ್ಬರು ಒಬ್ಬರಿಗೊಬ್ಬರು ಚೆನ್ನಾಗಿ ತಿಳಿದಿರುವುದರಿಂದ ಅಲ್ಲಿಯೂ ಸಹ ಸಂಭಾಷಣೆಯಲ್ಲಿ ತೊಡಗುತ್ತಿದ್ದೇವು. ಹಾಗೆಯೇ ಇಲ್ಲಿಯೂ ಸಹ ನಮ್ಮಿಬ್ಬರ ನಡುವೆ ಒಳ್ಳೆಯ ಸಂಭಾಷಣೆ ನಡೆಯುತ್ತಿರುತ್ತದೆ.

ಸಂದರ್ಶನಕಾರ: ಕೊನೆಯ ಐಪಿಎಲ್​ಗೆ ಹೋಲಿಸಿದರೆ ನೀವು ಒಬ್ಬ ಬೌಲರ್​ ಆಗಿ ಕೌಶಲ್ಯದ ವಿಚಾರದಲ್ಲಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ನಿಮ್ಮಲ್ಲಿ ಯಾವ ರೀತಿಯ ಬದಲಾವಣೆ ಆಗಿದೆ?

ಪ್ರಸಿದ್ಧ್ ಕೃಷ್ಣ: ಆತ್ಮ ವಿಶ್ವಾಸ ಹೆಚ್ಚಾಗಿದೆ. ಅಲ್ಲದೆ ನನ್ನಲ್ಲಿ ಯಾವ ರೀತಿಯ ಬದಲಾವಣೆಯಾಗಿದೆ ಎಂಬುದನ್ನು ನೀವು ಹೇಳಬೇಕು. ಹಾಗಾಗಿ ಅದನ್ನ ನಿಮಗೆ ಬಿಟ್ಟಿದ್ದೀನಿ.

ಸಂದರ್ಶನಕಾರ: ಈ ಐಪಿಎಲ್​ನ ಕೊನೆಯ 5 ಪಂದ್ಯಗಳನ್ನು ಕೋಲ್ಕತ್ತಾ ತಂಡ ಬೆಂಗಳೂರಿನಲ್ಲಿ ಆಡಲಿದೆ. ಹೀಗಾಗಿ ನೀವು 100 ಪ್ರತಿಶತ ಪ್ರದರ್ಶನ ನೀಡ್ತಿರ?

ಪ್ರಸಿದ್ಧ್ ಕೃಷ್ಣ: ಖಂಡಿತವಾಗಿಯೂ. ಏಕೆಂದರೆ ನಾನು ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಿಂದ ಪಂದ್ಯಗಳನ್ನಾಡುತ್ತಾ ಬಂದಿದ್ದೇನೆ. ಹಾಗಾಗಿ ಕೊನೆಯ 5 ಪಂದ್ಯಗಳನ್ನು ಅಲ್ಲಿ ಆಡುತ್ತಿರುವುದು ನನಗೆ ತುಂಬಾ ಸಹಕಾರಿಯಾಗಲಿದೆ. ಹೀಗಾಗಿ ಒಳ್ಳೆಯ ಪ್ರದರ್ಶನ ನೀಡಲು ಬಯಸುತ್ತೇನೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ