IPL 2021: ಸಿಎಸ್​ಕೆ ಪರ 200ನೇ ಪಂದ್ಯವನ್ನಾಡಿದ ಧೋನಿ! ಸೋಜಿಗವೆಂಬಂತೆ ಪಂಜಾಬ್​ ವಿರುದ್ಧವೇ ದಾಖಲಾದವು 3 ದಾಖಲೆಗಳು

IPL 2021: ಧೋನಿ 2011 ರಲ್ಲಿ ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪರ ತಮ್ಮ 50 ನೇ ಪಂದ್ಯವನ್ನು ಆಡಿದ್ದರು. 2015 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 150 ನೇ ಪಂದ್ಯವನ್ನು ಆಡಿದ್ದರು.

  • TV9 Web Team
  • Published On - 8:36 AM, 17 Apr 2021
1/6
ಐಪಿಎಲ್ 2021 ರಲ್ಲಿ, ಧೋನಿ ಪಂಜಾಬ್ ಕಿಂಗ್ಸ್ ವಿರುದ್ಧ ಮೈದಾನಕ್ಕೆ ಇಳಿಯುತ್ತಿದ್ದಂತೆ ದೊಡ್ಡ ಮೈಲಿಗಲ್ಲನ್ನು ಮುಟ್ಟಿದರು. ಸಿಎಸ್‌ಕೆ ಪರ 200 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದರೊಂದಿಗೆ ತಂಡಕ್ಕಾಗಿ 200 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
2/6
MS Dhoni
ಸಿಎಸ್​ಕೆ ನಾಯಕ ಧೋನಿ 2008 ರಲ್ಲಿ ತಂಡದ ಪರ ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು.
3/6
ಧೋನಿ 2011 ರಲ್ಲಿ ಕೆಕೆಆರ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಪರ ತಮ್ಮ 50 ನೇ ಪಂದ್ಯವನ್ನು ಆಡಿದ್ದರು.
4/6
ಹಳದಿ ಜರ್ಸಿಯಲ್ಲಿ ಎಂಎಸ್ ಧೋನಿ 2013 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 100 ನೇ ಪಂದ್ಯವನ್ನು ಆಡಿದರು.
5/6
ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ 2015 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮತ್ತೆ 150 ನೇ ಪಂದ್ಯವನ್ನು ಆಡಿದ್ದರು.
6/6
ಈಗ ಸಿಎಸ್​ಕೆ ಪರ ಧೋನಿ ಅವರ 200 ನೇ ಪಂದ್ಯವೂ ಪಂಜಾಬ್ ಕಿಂಗ್ಸ್ ವಿರುದ್ಧವಾಗಿದೆ.