IPL 2021 CSK vs PBKS: ಪಂಜಾಬ್​ ತಂಡದ ಪೆವಿಲಿಯನ್ ಪರೇಡ್.. 4 ವಿಕೆಟ್ ಪಡೆದು ವಿಶಿಷ್ಠ ದಾಖಲೆ ನಿರ್ಮಿಸಿದ ದೀಪಕ್​ ಚಹರ್!

IPL 2021: ಐಪಿಎಲ್ -2017 ರಿಂದ ಹೆಚ್ಚು ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಔಟ್​ ಮಾಡಿದ ಬೌಲರ್ ದೀಪಕ್. 2017 ರಿಂದ ಐಪಿಎಲ್‌ನಲ್ಲಿ ದೀಪಕ್ ಹೆಚ್ಚು 15 ಬಾರಿ ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಔಟ್​ ಮಾಡಿದ್ದಾರೆ.

IPL 2021 CSK vs PBKS: ಪಂಜಾಬ್​ ತಂಡದ ಪೆವಿಲಿಯನ್ ಪರೇಡ್.. 4 ವಿಕೆಟ್ ಪಡೆದು ವಿಶಿಷ್ಠ ದಾಖಲೆ ನಿರ್ಮಿಸಿದ ದೀಪಕ್​ ಚಹರ್!
ದೀಪಕ್ ಚಹರ್

ಯಾವುದೇ ಬ್ಯಾಟ್ಸ್‌ಮನ್‌ಗೆ ಕೆಟ್ಟದ್ದೇನೆಂದರೆ, ಅವನು ಕ್ರೀಸ್‌ಗೆ ಬಂದು ಖಾತೆ ತೆರೆಯದೆ ಪೆವಿಲಿಯನ್‌ಗೆ ಹಿಂದಿರುಗುವುದು. ಅದೇ ಸಮಯದಲ್ಲಿ, ಬೌಲರ್ ಕೂಡ ಬ್ಯಾಟ್ಸ್‌ಮನ್‌ನನ್ನು ರನ್ ಗಳಿಸುವ ಮೊದಲು ಪೆವಿಲಿಯನ್‌ಗೆ ಕಳುಹಿಸಲು ಪ್ರಯತ್ನಿಸುತ್ತಾನೆ. ಇದು ಸಂಭವಿಸಿದಲ್ಲಿ, ಬೌಲರ್ ಮತ್ತು ತಂಡ ಇಬ್ಬರೂ ಸಹ ಸಂತೋಷವಾಗಿರುತ್ತಾರೆ. ಪ್ರತಿಯೊಬ್ಬ ಬೌಲರ್ ಬ್ಯಾಟ್ಸ್‌ಮನ್‌ನನ್ನು ಆದಷ್ಟು ಬೇಗ ಹೊರಹಾಕಲು ಬಯಸುತ್ತಾರೆ, ವಿಶೇಷವಾಗಿ ಐಪಿಎಲ್‌ನಂತಹ ಪಂದ್ಯಾವಳಿಗಳಲ್ಲಿ ಬ್ಯಾಟ್ಸ್‌ಮನ್‌ಗಳು ವೇಗವಾಗಿ ಸ್ಕೋರ್ ಮಾಡಲು ಬಯಸುತ್ತಾರೆ ಮತ್ತು ಬೌಲರ್‌ಗಳು ಆದಷ್ಟೂ ಬೇಗ ಅವರನ್ನು ಔಟ್​ ಮಾಡಲು ಬಯಸುತ್ತಾರೆ.

ಐಪಿಎಲ್‌ನಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಔಟ್ ಮಾಡುವಲ್ಲಿ ಪರಿಣತಿ ಹೊಂದಿರುವ ಬೌಲರ್ ಇದ್ದಾರೆ. ಅಂತಹ ಆಟಗಾರರಲ್ಲಿ ಸಿಎಸ್​ಕೆ ತಂಡದ ಬೌಲರ್​ ಕೂಡ ಇದ್ದಾನೆ. ಈ ಬೌಲರ್ ಹೆಸರು ದೀಪಕ್ ಚಹರ್. ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ದೀಪಕ್, ಖಾತೆ ತೆರೆಯುವ ಮೊದಲು ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್​ಗೆ ಕಳುಹಿಸುವುದರಲ್ಲಿ ನಿಸ್ಸೀಮಾ. 2017 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ದೀಪಕ್, ಅಂದಿನಿಂದ ಅತಿ ಹೆಚ್ಚು ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಔಟ್​ ಮಾಡಿದ್ದಾರೆ.

ಬೋಲ್ಟ್, ಬುಮ್ರಾ ಹಿಂದೆ ಇದ್ದಾರೆ ಈ ಸಂದರ್ಭದಲ್ಲಿ, ಟ್ರೆಂಟ್ ಬೋಲ್ಟ್ ಮತ್ತು ಬುಮ್ರಾ ಕೂಡ ದೀಪಕ್ ಹಿಂದೆ ಇದ್ದಾರೆ. ಐಪಿಎಲ್ -2017 ರಿಂದ ಹೆಚ್ಚು ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಔಟ್​ ಮಾಡಿದ ಬೌಲರ್ ದೀಪಕ್. 2017 ರಿಂದ ಐಪಿಎಲ್‌ನಲ್ಲಿ ದೀಪಕ್ ಹೆಚ್ಚು 15 ಬಾರಿ ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಔಟ್​ ಮಾಡಿದ್ದಾರೆ. ಅವರ ನಂತರ ಭಾರತೀಯ ಟೆಸ್ಟ್ ತಂಡದ ಬೌಲರ್ ಉಮೇಶ್ ಯಾದವ್ ಅವರ ಹೆಸರು ಇದೆ, ಅವರು 2017 ರಿಂದ ಐಪಿಎಲ್‌ನಲ್ಲಿ 10 ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಔಟ್​ ಮಾಡಿದ್ದಾರೆ. ನ್ಯೂಜಿಲೆಂಡ್‌ನ ಎಡ- ಆರ್ಮ್ ಫಾಸ್ಟ್ ಬೌಲರ್ ಟ್ರೆಂಟ್ ಬೋಲ್ಟ್, ಮುಂಬೈ ಇಂಡಿಯನ್ಸ್ ಪರ ಮೂರನೇ ಸ್ಥಾನದಲ್ಲಿದ್ದಾರೆ, ಮುಂಬೈನ ಜಸ್ಪ್ರೀತ್ ಬುಮ್ರಾ ನಂತರದ ಸ್ಥಾನದಲ್ಲಿದ್ದಾರೆ. ಇಬ್ಬರೂ ಕ್ರಮವಾಗಿ ಒಂಬತ್ತು ಮತ್ತು ಎಂಟು ಬಾರಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ.

ಪಂಜಾಬ್ ಬ್ಯಾಟ್ಸ್‌ಮನ್‌ಗಳ ಅಸಮಾಧಾನ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧ ದೀಪಕ್ ಇಬ್ಬರು ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಔಟ್ ಮಾಡಿದರು. ದೀಪಕ್ ಮೊದಲು ಖಾತೆ ತೆರೆಯದೆ ಪಂಜಾಬ್ ಓಪನರ್ ಮಾಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದರು. ಪಂದ್ಯದ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ದೀಪಕ್ ಮಾಯಾಂಕ್ ಅವರನ್ನು ಬಲಿ ಪಡೆದರು. ಇದರ ನಂತರ, ಅವರು ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಖಾತೆ ತೆರೆಯಲು ನಿಕೋಲಸ್ ಪುರಾನ್‌ಗೆ ಅವಕಾಶ ನೀಡಲಿಲ್ಲ. ದೀಪಕ್ ಅಷ್ಟು ದೊಡ್ಡ ಲಯದಲ್ಲಿದ್ದರು, ಚೆನ್ನೈ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಕೋಟಾದ ಎಲ್ಲಾ ನಾಲ್ಕು ಓವರ್‌ಗಳನ್ನು ಆರಂಭದಲ್ಲೇ ಹಾಕಿಸಿದರು. ದೀಪಕ್ ತನ್ನ ನಾಯಕನನ್ನು ನಿರಾಶೆಗೊಳಿಸಲಿಲ್ಲ ಮತ್ತು ನಾಲ್ಕು ಓವರ್‌ಗಳ ಕೋಟಾದಲ್ಲಿ 13 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದರು. ಮಯಾಂಕ್ ಮತ್ತು ನಿಕೋಲಸ್ ಅವರಲ್ಲದೆ, ಕ್ರಿಸ್ ಗೇಲ್ (10) ಮತ್ತು ದೀಪಕ್ ಹೂಡಾ (10) ರನ್ನೂ ದೀಪಕ್ ಔಟ್ ಮಾಡಿದರು.

Click on your DTH Provider to Add TV9 Kannada