AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದಲ್ಲಿ ಇಲ್ಲಿಯವರೆಗೆ 44 ಲಕ್ಷ ಡೋಸ್ ಲಸಿಕೆ ವ್ಯರ್ಥ; ಅತಿ ಹೆಚ್ಚು ಪೋಲಾಗಿದ್ದು ತಮಿಳುನಾಡಿನಲ್ಲಿ

ಭಾರತದಲ್ಲಿ ಏಪ್ರಿಲ್ 11ರವರೆಗೆ ರಾಜ್ಯಗಳು 10 ಕೋಟಿ ಡೋಸ್ ಲಸಿಕೆಯನ್ನು ಬಳಸಿದ್ದು, ಅದರಲ್ಲಿ 44 ಲಕ್ಷ ಡೋಸ್​​ಗಳು ವ್ಯರ್ಥವಾಗಿವೆ ಎಂದು ಆರ್​ಟಿಐ ಮಾಹಿತಿ ಬಹಿರಂಗಗೊಳಿಸಿದೆ.

ದೇಶದಲ್ಲಿ ಇಲ್ಲಿಯವರೆಗೆ 44 ಲಕ್ಷ ಡೋಸ್ ಲಸಿಕೆ ವ್ಯರ್ಥ; ಅತಿ ಹೆಚ್ಚು ಪೋಲಾಗಿದ್ದು ತಮಿಳುನಾಡಿನಲ್ಲಿ
ಪ್ರಾತಿನಿಧಿಕ ಚಿತ್ರ
Lakshmi Hegde
|

Updated on: Apr 20, 2021 | 5:44 PM

Share

ಭಾರತದಲ್ಲಿ ಎರಡನೇ ವಾರದಿಂದ ಕೊರೊನಾ ಲಸಿಕೆ ವಿತರಣೆ ಅಭಿಯಾನ ಶುರುವಾಗಿದೆ. ಇಲ್ಲಯವರೆಗೆ ಅನೇಕರಿಗೆ ಲಸಿಕೆ ನೀಡಲಾಗಿದೆ. ಈ ಮಧ್ಯೆ ಕೆಲವು ರಾಜ್ಯಗಳು ಕೊರೊನಾ ಲಸಿಕೆ ಅಭಾವವಾಗಿದೆ ಎಂದು ಹೇಳುತ್ತಿವೆ. ಆದರೆ ಇದೀಗ ಆರ್​ಟಿಐನಿಂದ ಶಾಕಿಂಗ್ ಮಾಹಿತಿಯೊಂದು ಹೊರಬಿದ್ದಿದೆ.

ಭಾರತದಲ್ಲಿ ಏಪ್ರಿಲ್ 11ರವರೆಗೆ ರಾಜ್ಯಗಳು 10 ಕೋಟಿ ಡೋಸ್ ಲಸಿಕೆಯನ್ನು ಬಳಸಿದ್ದು, ಅದರಲ್ಲಿ 44 ಲಕ್ಷ ಡೋಸ್​​ಗಳು ವ್ಯರ್ಥವಾಗಿವೆ ಎಂದು ಆರ್​ಟಿಐ ಮಾಹಿತಿ ಬಹಿರಂಗಗೊಳಿಸಿದೆ. ಅದರಲ್ಲಿ ತಮಿಳುನಾಡಿನಲ್ಲೇ ಹೆಚ್ಚು ಅಂದರೆ ಶೇ.12.10 ಡೋಸ್ ಲಸಿಕೆ ಪೋಲಾಗಿದೆ. ಇನ್ನುಳಿದಂತೆ ಹರ್ಯಾಣದಲ್ಲಿ ಶೇ.9.74, ಪಂಜಾಬ್​ನಲ್ಲಿ ಶೇ.8.12, ಮಣಿಪುರದಲ್ಲಿ ಶೇ.7.8 ಮತ್ತು ತೆಲಂಗಾಣದಲ್ಲಿ ಶೇ.7.55 ಡೋಸ್​ಗಳಷ್ಟು ಲಸಿಕೆ ಹಾಳಾಗಿದೆ ಎಂದು ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆ ಕೇರಳ, ಪಶ್ಚಿಮಬಂಗಾಳ, ಹಿಮಾಚಲಪ್ರದೇಶ, ಮಿಜೋರಾಂ, ಗೋವಾ, ದಮನ್, ದಿಯು, ಅಂಡಮಾನ್​, ನಿಕೋಬಾರ್​ ಮತ್ತು ಲಕ್ಷದ್ವೀಪ್​ಗಳಲ್ಲಿ ಲಸಿಕೆ ವ್ಯರ್ಥದ ಪ್ರಮಾಣ ತೀರ ಕಡಿಮೆ ಇರುವುದಾಗಿ ಆರ್​ಟಿಐ ತಿಳಿಸಿದೆ.

ಸದ್ಯ ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ, ಪಂಜಾಬ್​, ದೆಹಲಿಗಳ ನಡುವೆ ಲಸಿಕೆ ಅಭಾವದ ಬಗ್ಗೆ ಜಟಾಪಟಿ ನಡೆಯುತ್ತಿದೆ. ನಮ್ಮಲ್ಲಿರುವ ನಮ್ಮಲ್ಲಿರುವ ಜನಸಂಖ್ಯೆಗೂ, ಹಂಚಿಕೆಯಾಗಿರುವ ಲಸಿಕೆಗೂ ಸಂಬಂಧವೇ ಇಲ್ಲವೆಂದು ದೆಹಲಿ ಸರ್ಕಾರ ಆರೋಪ ಮಾಡಿದೆ. ಈ ಮಧ್ಯೆ ಮಾಹಿತಿ ಹಕ್ಕು ಕಾಯ್ದೆ, ಲಸಿಕೆ ವ್ಯರ್ಥವಾಗುತ್ತಿರುವ ಮಾಹಿತಿಯನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ನಟ ರಣವೀರ್ ಸಿಂಗ್​ಗೆ​ ಪತ್ನಿ ದೀಪಿಕಾ ಪಡುಕೋಣೆಯಿಂದಲೇ ಬಹಿರಂಗ ಬೆದರಿಕೆ!

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ