PF money withdraw: ಕೋವಿಡ್ ಚಿಕಿತ್ಸೆಗೆ ಪಿಎಫ್ ಹಣ ವಿಥ್ಡ್ರಾ ಮಾಡುವುದು ಹೇಗೆ?
ಕೊರೊನಾ ಎರಡನೇ ಅಲೆಯಿಂದ ತತ್ತರಿಸುತ್ತಿರುವ ಇಂಥ ಸನ್ನಿವೇಶದಲ್ಲಿ ಚಿಕಿತ್ಸೆಗಾಗಿ ಪಿಎಫ್ ಹಣ ವಿಥ್ಡ್ರಾ ಮಾಡಬಹುದಾದ ನಿಯಮಾವಳಿಗಳನ್ನು ಇಲ್ಲಿ ತಿಳಿಸಲಾಗಿದೆ.
ನವದೆಹಲಿ: ಕೊರೊನಾ ಎರಡನೇ ಅಲೆ ಬಹಳ ವೇಗವಾಗಿ ವ್ಯಾಪಿಸುತ್ತಿದೆ. ಹೀಗೆ ಹಬ್ಬುತ್ತಿರುವ ಕೊರೊನಾದಿಂದ, ಒಂದು ವೇಳೆ ತಮಗೆ ಸೋಂಕು ಬಂದಲ್ಲಿ ಚಿಕಿತ್ಸಾ ವೆಚ್ಚಕ್ಕೆ ಏನು ಮಾಡಬೇಕು ಎಂಬ ಬಗ್ಗೆ ಜನರಿಗೆ ಚಿಂತೆ ಹೆಚ್ಚಾಗಿದೆ. ವೇತನದಾರರಿಗೆ ಸ್ವಲ್ಪ ಮಟ್ಟಿಗೆ ನಿರಾಳ ಆಗುವಂತೆ ಸುದ್ದಿಯೊಂದು ಇಲ್ಲಿದೆ. ಯಾವ ಸಿಬ್ಬಂದಿಗೆ ಕಾರ್ಮಿಕ ಭವಿಷ್ಯ ನಿಧಿ ಖಾತೆ (ಇಪಿಎಫ್) ಇದೆಯೋ ಅಂಥವರು ವೈದ್ಯಕೀಯ ಕಾರಣಗಳಿಗಾಗಿ ಹಣ ವಿಥ್ಡ್ರಾ ಮಾಡಬಹುದು ಅಥವಾ ಸಾಲ ಪಡೆದುಕೊಳ್ಳಬಹುದು. ಕಾರ್ಮಿಕ ಭವಿಷ್ಯನಿಧಿ ಒಕ್ಕೂಟ (ಇಪಿಎಫ್ಒ) ನಿಯಮಾವಳಿ ಅನ್ವಯ, ಉದ್ಯೋಗಿಗಳು ವೈದ್ಯಕೀಯ ತುರ್ತು ಕಾರಣಗಳಿಗಾಗಿ, ಮನೆ ಖರೀದಿ ಅಥವಾ ಹೊಸ ಮನೆ ನಿರ್ಮಾಣ, ನವೀಕರಣಕ್ಕಾಗಿ, ಗೃಹ ಸಾಲ ವಾಪಸ್ ಮಾಡುವುದಕ್ಕೆ ಮತ್ತು ಮದುವೆ ಕಾರಣಕ್ಕೆ ಹಣವನ್ನು ವಿಥ್ಡ್ರಾ ಮಾಡಬಹುದು.
ಇಪಿಎಫ್ ವಿಥ್ಡ್ರಾ ನಿಯಮಾವಳಿಗಳು ಕೋವಿಡ್ ಚಿಕಿತ್ಸೆಗೆ ಬೇಕಾದ ಹಣವನ್ನು ವಿಥ್ ಡ್ರಾ ಮಾಡುವುದಕ್ಕೆ ಅವಕಾಶ ಇದೆ. ವೈದ್ಯಕೀಯ ತುರ್ತು ಎಂಬ ಕಾರಣ ನೀಡಿ, ಹಣ ಪಡೆಯಬಹುದು. ಇಪಿಎಫ್ಒ ಸದಸ್ಯ, ಸಂಗಾತಿ ಅಥವಾ ಕುಟುಂಬ ಸದಸ್ಯರು ಅಥವಾ ಪೋಷಕರು ಅಥವಾ ಮಕ್ಕಳ ಚಿಕಿತ್ಸೆಗೆ ಹಣ ವಿಥ್ ಡ್ರಾ ಮಾಡಬಹುದು. ಉದ್ಯೋಗಿಯು ತಿಂಗಳ ವೇತನದ ಆರು ಪಟ್ಟು ಅಥವಾ ಉದ್ಯೋಗಿಯ ಕೊಡುಗೆ ಹಾಗೂ ಬಡ್ಡಿ (ಈ ಎರಡರ ಪೈಕಿ ಯಾವುದು ಕಡಿಮೆಯೋ ಅದು) ಅಷ್ಟು ಮೊತ್ತವನ್ನು ಕೋವಿಡ್ ಚಿಕಿತ್ಸೆಗಾಗಿ ಇಪಿಎಫ್ನಿಂದ ಡ್ರಾ ಮಾಡಬಹುದು.
ಇಂಥ ಸನ್ನಿವೇಶದಲ್ಲಿ ಕನಿಷ್ಠ ಇಷ್ಟು ವರ್ಷ ಸೇವೆ ಸಲ್ಲಿಸಿರಲೇಬೆಕು ಎಂಬ ನಿಯಮಗಳು ಅನ್ವಯ ಆಗುವುದಿಲ್ಲ.
ಕೋವಿಡ್ ಚಿಕಿತ್ಸೆಗೆ ಹಣ ಡ್ರಾ ಮಾಡಲು ಬೇಕಾದ ದಾಖಲಾತಿಗಳು: 1) ಉದ್ಯೋಗಿಯ ಯೂನಿವರ್ಸಲ್ ಖಾತೆ ಸಂಖ್ಯೆ (ಯುಎಎನ್) ಇರಬೇಕು.
2) ಉದ್ಯೋಗಿಯ ಬ್ಯಾಂಕ್ ಖಾತೆ ಮಾಹಿತಿಯು ಇಪಿಎಫ್ ಖಾತೆಯೊಂದಿಗೆ ಹೊಂದಾಣಿಕೆ ಆಗುತ್ತಿರಬೇಕು.
3) ಇಪಿಎಫ್ನಿಂದ ವಿಥ್ಡ್ರಾ ಮಾಡುವ ಮೊತ್ತವು ಮೂರನೇ ವ್ಯಕ್ತಿಯ ಖಾತೆಗೆ ವರ್ಗಾವಣೆ ಆಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
4) ಹಣ ಪಡೆಯುತ್ತಿರುವ ವ್ಯಕ್ತಿಯ ಜನ್ಮ ದಿನಾಂಕ ಮತ್ತು ತಂದೆಯ ಹೆಸರು ಐಡಿ ಪ್ರೂಫ್ ಜತೆಗೆ ತಾಳೆ ಆಗುತ್ತಿರಬೇಕು.
ಇದನ್ನೂ ಓದಿ: Employees Provident Fund | UAN ಸಂಖ್ಯೆಯ ಗೊಡವೆ ಇಲ್ಲದೆ ಪಿಎಫ್ ಖಾತೆಯಲ್ಲಿ ಬ್ಯಾಲೆನ್ಸ್ ಚೆಕ್ ಮಾಡುವ ಉಪಾಯ ಇಲ್ಲಿದೆ!
(Here is the procedure to follow withdraw PF money for covid treatment)