AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Employees Provident Fund | UAN ಸಂಖ್ಯೆಯ ಗೊಡವೆ ಇಲ್ಲದೆ ಪಿಎಫ್ ಖಾತೆಯಲ್ಲಿ ಬ್ಯಾಲೆನ್ಸ್ ಚೆಕ್ ಮಾಡುವ ಉಪಾಯ ಇಲ್ಲಿದೆ!

How to check PF balance: ಇಪಿಎಫ್​ಒ ಖಾತೆದಾರರು ಯುಎಎನ್ ಸಂಖ್ಯೆ ಇಲ್ಲದೆಯೂ ಪಿಎಫ್ ಅಥವಾ ಇಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಮಾಡುವುದು ಹೇಗೆ ಎಂಬ ಬಗ್ಗೆ ಹಂತ ಹಂತವಾದ ಮಾಹಿತಿ ಇಲ್ಲಿದೆ.

Employees Provident Fund | UAN ಸಂಖ್ಯೆಯ ಗೊಡವೆ ಇಲ್ಲದೆ ಪಿಎಫ್ ಖಾತೆಯಲ್ಲಿ ಬ್ಯಾಲೆನ್ಸ್ ಚೆಕ್ ಮಾಡುವ ಉಪಾಯ ಇಲ್ಲಿದೆ!
ಪ್ರಾತಿನಿಧಿಕ ಚಿತ್ರ
Srinivas Mata
|

Updated on: Apr 20, 2021 | 3:21 PM

Share

ಕಾರ್ಮಿಕ ಭವಿಷ್ಯನಿಧಿ ಒಕ್ಕೂಟವು (ಇಪಿಎಫ್​ಒ) ಉದ್ಯೋಗಿಗಳ ಅನುಕೂಲಕ್ಕಾಗಿ ಭವಿಷ್ಯನಿಧಿ ಹೂಡಿಕೆಯನ್ನು ಪಾರದರ್ಶಕವಾಗಿ ಮಾಡಿದೆ. ಇಪಿಎಫ್​ಒ ಚಂದಾದಾರರು ಈಗ ಪಿಎಫ್ ಅಥವಾ ಇಪಿಎಫ್ ಬಾಕಿಯನ್ನು ಯೂನಿವರ್ಸಲ್ ಅಕೌಂಟ್ ನಂಬರ್​ (UAN) ಇಲ್ಲದೆಯೂ ಪರಿಶೀಲನೆ ಮಾಡಿಕೊಳ್ಳಬಹುದು. ಈ ಹೊಸ ಪದ್ಧತಿಯನ್ನು ಇಪಿಎಫ್​ಒ ಅಳವಡಿಸಿಕೊಂಡಿದೆ. ಇಪಿಎಫ್​ಒ ಚಂದಾದಾರರು ಇಪಿಎಫ್​ಒ ಹೋಮ್ ಪೇಜ್​ಗೆ ಲಾಗ್​ ಇನ್​ ಆಗಿ, ಕೆಲವು ಸರಳ ಹಂತಗಳನ್ನು ಅನುಸರಿಸಿದರೆ ತುಂಬ ಸಲೀಸಾಗಿಯೇ ತಮ್ಮ ಖಾತೆಯಲ್ಲಿನ ಬಾಕಿ ಮೊತ್ತವನ್ನು ಯೂನಿವರ್ಸಲ್ ಅಕೌಂಟ್ ನಂಬರ್ ಇಲ್ಲದೆಯೂ ಪರಿಶೀಲಿಸಬಹುದು.

ಪಿಎಫ್- ಇಪಿಎಫ್​​ ಬಾಕಿ ಪರಿಶೀಲನೆ ಮಾಡೋದು ಹೇಗೆ ಎಂಬುದನ್ನು ಹಂತ ಹಂತವಾಗಿ ತಿಳಿದುಕೊಳ್ಳಿ: 1) ಪಿಎಫ್ ಅಥವಾ ಇಪಿಎಫ್ ಖಾತೆದಾರರು ಇಪಿಎಫ್​ಒ ಹೋಮ್ ಪೇಜ್​ಗೆ ಲಾಗ್ ಇನ್ ಆಗಬೇಕು.

2) ಅಲ್ಲಿ “ಕ್ಲಿಕ್ ಹಿಯರ್ ಟು ನೋ ಯುವರ್ ಪಿಎಫ್ ಬಾಲೆನ್ಸ್” (Click here to know your PF balance) ಎಂಬ ಬಟನ್ ಒತ್ತಿ.

3) ಹೀಗೆ ಕ್ಲಿಕ್ ಮಾಡಿದ ಮೇಲೆ ಇಪಿಎಫ್​ಒ ಸದಸ್ಯರಿಗೆ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಮಾಹಿತಿಗಳನ್ನು ಭರ್ತಿ ಮಾಡಬೇಕು.

4) ನಿಮ್ಮ ರಾಜ್ಯ, ಇಪಿಎಫ್ ಕಚೇರಿ, ಎಸ್ಟಾಬ್ಲಿಷ್​ಮೆಂಟ್ ಕೋಡ್, ಪಿಎಫ್ ಖಾತೆ ಸಂಖ್ಯೆ ಮತ್ತು ಇತರ ಮಾಹಿತಿಗಳನ್ನು ನಮೂದಿಸಬೇಕು.

5) ದೃಢೀಕರಣ (Acknowledgement)ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು I agree ಎಂಬ ಆಯ್ಕೆಯನ್ನು ಒತ್ತಿ/

6) ಸ್ಕ್ರೀನ್ ಮೇಲೆ ನಿಮ್ಮ ಪಿಎಫ್ ಅಥವಾ ಇಪಿಎಫ್ ಬಾಕಿ ಕಾಣಿಸಿಕೊಳ್ಳುತ್ತದೆ.

ಯುಎಎನ್ ಸಂಖ್ಯೆ ಇರುವಾಗ ಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಹೇಗೆ? 1) ಎಸ್ಸೆಮ್ಮೆಸ್ ಅಥವಾ ಮಿಸ್ಡ್ ಕಾಲ್ ಸೇವೆ ಮೂಲಕವೂ ಇಪಿಎಫ್​ಒ ಚಂದಾದಾರರು ಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಮಾಡಬಹುದು.

2) ಎಸ್ಸೆಮ್ಮೆಸ್ ಮೂಲಕವಾಗಿ ಪಿಎಫ್ ಬ್ಯಾಲೆನ್ಸ್ ಪರಿಶೀಲನೆ ಮಾಡಿಕೊಳ್ಳುವಂತಿದ್ದಲ್ಲಿ ಚಂದಾದಾರರ ನೋಂದಾಯಿತ (ರಿಜಿಸ್ಟರ್ಡ್) ಮೊಬೈಲ್ ಸಂಖ್ಯೆಯಿಂದ 7738299899ಗೆ ಎಸ್ಸೆಮ್ಮೆಸ್ ಕಳಿಸುವ ಮೂಲಕ ತಿಳಿದುಕೊಳ್ಳಬಹುದು.

3) ‘EPFOHO UAN’ ಈ ಫಾರ್ಮ್ಯಾಟ್​ನಲ್ಲಿ ಎಸ್ಸೆಮ್ಮೆಸ್ ಇರಬೇಕು. ಇಪಿಎಫ್​ಒದಿಂದ ಆ ಎಸ್ಸೆಮ್ಮೆಸ್​ಗೆ ಪಿಎಫ್​ನಲ್ಲಿ ಎಷ್ಟು ಮೊತ್ತ ಇದೆ ಎಂಬ ಬಗ್ಗೆ ಸಂದೇಶ ಕಳಿಸಿದ ಖಾತೆದಾರರಿಗೆ ಮಾಹಿತಿ ಬರುತ್ತದೆ.

4) ಇಪಿಎಫ್​ಒ ಚಂದಾದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ 011-22901406ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಪಿಎಫ್ ಅಥವಾ ಇಪಿಎಫ್ ಬಾಕಿಯನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: EPF account: ಇಪಿಎಫ್ ಖಾತೆ ವರ್ಗಾವಣೆ, ವಿಥ್​ಡ್ರಾ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಸಂಗತಿಗಳಿವು

(Here is the step by step details to check PF or EPF balance without UAN number by EPFO subscribers)

Follow Us
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ