ಗೋಧಿ ಸಂಗ್ರಹಣೆ; 11.6 ಲಕ್ಷ ರೈತರು ಎಂಎಸ್​ಪಿ ಮೂಲಕ ಪಡೆದಿದ್ದು ₹24 ಸಾವಿರ ಕೋಟಿ: ಕೇಂದ್ರ ಸರ್ಕಾರ

ಗೋಧಿ ಸಂಗ್ರಹಣೆ; 11.6 ಲಕ್ಷ ರೈತರು ಎಂಎಸ್​ಪಿ ಮೂಲಕ ಪಡೆದಿದ್ದು ₹24 ಸಾವಿರ ಕೋಟಿ: ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ

Minimum Support Price: ಇದೇ ಮೊದಲ ಬಾರಿ ಪಂಜಾಬ್‌ನ ರೈತರು ತಮ್ಮ ರಾಬಿ ಬೆಳೆಗಳ ಮಾರಾಟದಿಂದ ಬಂದ ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗಳಿಂದ ಪಡೆಯುತ್ತಿದ್ದಾರೆ ಎಂದು ಕೇಂದ್ರ ಆಹಾರ ಸಚಿವಾಲಯ ಹೇಳಿದೆ.

Rashmi Kallakatta

|

Apr 20, 2021 | 3:34 PM

ದೆಹಲಿ: ಪ್ರಸಕ್ತ ರಾಬಿ ಮಾರಾಟ ಋತುವಿನಲ್ಲಿ (RMS) ಗೋಧಿ ಸಂಗ್ರಹವು 121.7 ಲಕ್ಷ ಟನ್‌ಗಳಷ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 5.2 ಲಕ್ಷ ಟನ್‌ಗಳಷ್ಟಿತ್ತು . ಕಳೆದ ವರ್ಷ ಕೊರೊನಾವೈರಸ್ ನಿಯಂತ್ರಣಕ್ಕಾಗಿ ಹೇರಿದ ಲಾಕ್​ಡೌನ್​ನಿಂದಾಗಿ ಸಂಗ್ರಹ ಕಡಿಮೆ ಆಗಿತ್ತು ಎಂದು ಆಹಾರ ಸಚಿವಾಲಯ ಹೇಳಿದೆ. ಗೋಧಿ ಸಂಗ್ರಹದಿಂದ ಇದುವರೆಗೆ 11.6 ಲಕ್ಷ ರೈತರಿಗೆ ₹24,037.6 ಕೋಟಿ ಮೌಲ್ಯದ ಕನಿಷ್ಠ ಬೆಂಬಲ ಬೆಲೆ ಲಭಿಸಿದೆ. ಇದೇ ಮೊದಲ ಬಾರಿಗೆ, ಪಂಜಾಬ್ ರೈತರು ತಮ್ಮ ರಾಬಿ ಬೆಳೆಗಳ ಮಾರಾಟದಿಂದ ಬಂದ ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗಳಿಂದ ಪಡೆಯುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ. ಕಳೆದ ಒಂದು ವಾರದಲ್ಲಿ ಸುಮಾರು ₹202.7 ಕೋಟಿ ನೇರವಾಗಿ ಪಂಜಾಬ್ ರೈತರ ಖಾತೆಗಳಿಗೆ ವರ್ಗಾವಣೆಯಾಗಿದೆ.

ಏಪ್ರಿಲ್ 10 ರಿಂದ ಗೋಧಿಯಂತಹ ರಾಬಿ (ಚಳಿಗಾಲದ) ಬೆಳೆಗಳ ಮಾರಾಟಕ್ಕೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪಾವತಿಸುವ ನೇರ ಬ್ಯಾಂಕ್ ವರ್ಗಾವಣೆಯನ್ನು (ಡಿಬಿಟಿ) ಜಾರಿಗೆ ತರಲು ಪಂಜಾಬ್ ಸರ್ಕಾರ ಒಪ್ಪಿದೆ. ಪ್ರಸ್ತುತ, ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಗೋಧಿ ಖರೀದಿ ನಡೆಯುತ್ತಿದೆ.

ಇದೇ ಮೊದಲ ಬಾರಿ ಪಂಜಾಬ್‌ನ ರೈತರು ತಮ್ಮ ರಾಬಿ ಬೆಳೆಗಳ ಮಾರಾಟದಿಂದ ಬಂದ ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗಳಿಂದ ಪಡೆಯುತ್ತಿದ್ದಾರೆ . ಈ ವರ್ಷ ಸಾರ್ವಜನಿಕ ಖರೀದಿಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಸೇರಿಸಲಾಗಿದೆ. ಯಾಕೆಂದರೆ ಹರ್ಯಾಣ ಮತ್ತು ಪಂಜಾಬ್ ಸರ್ಕಾರಗಳು ಕೇಂದ್ರ ಸರ್ಕಾರದ ನಿರ್ದೇಶನವನ್ನು ಅನುಸರಿಸಿ ರೈತರ ಬ್ಯಾಂಕ್ ಖಾತೆಗಳಿಗೆ ಎಂಎಸ್‌ಪಿ ಪಾವತಿಯನ್ನು ನೇರ ಆನ್‌ಲೈನ್ ವರ್ಗಾವಣೆಗೆ ಬದಲಾಯಿಸಿವೆ ಎಂದು ಕೇಂದ್ರ ಆಹಾರ ಸಚಿವಾಲಯ ಹೇಳಿದೆ.

2021-22 ಪ್ರಸಕ್ತ ಋತುವಿನಲ್ಲಿ (ಏಪ್ರಿಲ್-ಮಾರ್ಚ್) ಸುಮಾರು 41.8 ಲಕ್ಷ ಟನ್ ಗೋಧಿಯನ್ನು ಪಂಜಾಬ್‌ನಿಂದ ಸಂಗ್ರಹಿಸಲಾಗಿದೆ. ಏಪ್ರಿಲ್ 18 ರವರೆಗೆ ಪಂಜಾಬ್‌ನಲ್ಲಿ ಸುಮಾರು ₹202.69 ಕೋಟಿ ಮತ್ತು ಹರಿಯಾಣದಲ್ಲಿ ಸುಮಾರು ₹ 1,417 ಕೋಟಿಗಳನ್ನು ನೇರವಾಗಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ.

ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೇಶದಲ್ಲಿ ಇದುವರೆಗೆ ಒಟ್ಟು ಗೋಧಿ ಸಂಗ್ರಹವು 121.7 ಲಕ್ಷ ಟನ್ ತಲುಪಿದೆ.  ಏಪ್ರಿಲ್ 18 ರವರೆಗೆ ಹರಿಯಾಣದಿಂದ ಸುಮಾರು 44.8 ಲಕ್ಷ ಟನ್ ಗೋಧಿ ಮತ್ತು ಮಧ್ಯಪ್ರದೇಶದಿಂದ 28.5 ಲಕ್ಷ ಟನ್ ಗೋಧಿ ಸಂಗ್ರಹಿಸಲಾಗಿದೆ. ಒಟ್ಟಾರೆಯಾಗಿ, ದೇಶಾದ್ಯಂತ ಸುಮಾರು 11.6 ಲಕ್ಷ ರೈತರು ಸಂಗ್ರಹಣೆ ಪ್ರಕ್ರಿಯೆಯಿಂದ ಲಾಭ ಪಡೆದಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಪ್ರಸ್ತುತ ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆಗೆ 427 ಲಕ್ಷ ಟನ್ ಗೋಧಿ ಸಂಗ್ರಹಿಸಿಡಲು ಕೇಂದ್ರ ಚಿಂತನೆ ನಡೆಸಿದೆ. ಕಳೆದ ವಾರದಲ್ಲಿ ಸಂಗ್ರಹಣೆ ವೇಗವನ್ನು ಪಡೆದುಕೊಂಡಿದೆ. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಚಂಡೀಗಡ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಖರೀದಿ ಚುರುಕಾಗಿ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಏಪ್ರಿಲ್ 18 ರ ದಾಖಲೆಗಳ ಪ್ರಕಾರ ಹರಿಯಾಣ- 44.8 ಲಕ್ಷ ಟನ್ (ಶೇ 36.8), ಪಂಜಾಬ್ – 41.8 ಲಕ್ಷ ಟನ್ (ಶೇ 34.2) ಮತ್ತು ಮಧ್ಯಪ್ರದೇಶ – 28.5 ಲಕ್ಷ ಟನ್ (ಶೇ 23.4) ಗೋಧಿ ಸಂಗ್ರಹಣೆಯಲ್ಲಿ ಮಹತ್ತರ ಕೊಡುಗೆ ನೀಡಿದೆ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಕನಿಷ್ಠ ಬೆಂಬಲ ಬೆಲೆ, ರೈತರ ಅನಿಶ್ಚಿತ ಆದಾಯ, ಎಪಿಎಂಸಿ ಬಗ್ಗೆ ಪ್ರಕಾಶ್ ಕಮ್ಮರಡಿ ಎಕ್ಸ್​ಕ್ಲೂಸಿವ್ ಸಂದರ್ಶನ

Follow us on

Related Stories

Most Read Stories

Click on your DTH Provider to Add TV9 Kannada