ಒಎನ್‌ಜಿಸಿ ತೈಲ ಸಂಸ್ಕರಣಾ ಘಟಕದ ಬಳಿ ಬೆಳಗಿನ ಜಾವ ಮೂವರು ಉದ್ಯೋಗಿಗಳ ಅಪಹರಣ

ಒಎನ್‌ಜಿಸಿ ತೈಲ ಸಂಸ್ಕರಣಾ ಘಟಕದ ಬಳಿ ಬೆಳಗಿನ ಜಾವ ಮೂವರು ಉದ್ಯೋಗಿಗಳ ಅಪಹರಣ
ತೈಲ ಸಂಸ್ಕರಣಾ ಘಟಕದ ಬಳಿ ಬೆಳಗಿನ ಜಾವ ಒಎನ್‌ಜಿಸಿಯ ಮೂವರು ಉದ್ಯೋಗಿಗಳ ಅಪಹರಣ

ONGC employees abducted| ಅಸ್ಸಾಂನ ಶಿವಸಾಗರ ಜಿಲ್ಲೆಯ ಲಖ್ವಾದಿಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಈ ಮೂವರನ್ನು ಇಂದು ಬೆಳಗಿನ ಜಾವ ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ.

sadhu srinath

|

Apr 21, 2021 | 9:54 AM

ಶಿವಸಾಗರ: ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿ ಸಂಸ್ಥೆಯ ತೈಲ ಸಂಸ್ಕರಣಾ ಘಟಕದ ಬಳಿ ಮೂವರು ಉದ್ಯೋಗಿಗಳನ್ನು ಅಪಹರಣ ಮಾಡಲಾಗಿದೆ. ಇಬ್ಬರು ಸಹಾಯಕ ಜೂನಿಯರ್ ಇಂಜಿನಿಯರ್‌ಗಳು ಮತ್ತು ಓರ್ವ ಜೂನಿಯರ್ ಟೆಕ್ನಿಷಿಯನ್​ನ್ನು ಅಪಹರಣಕ್ಕೀಡಾಗಿದ್ದಾರೆ. ಅಸ್ಸಾಂನ ಶಿವಸಾಗರ ಜಿಲ್ಲೆಯ ಲಖ್ವಾದಿಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಈ ಮೂವರನ್ನು ಇಂದು ಬೆಳಗಿನ ಜಾವ ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ.

ಅಪಹರಣಕ್ಕೀಡಾದ ಉದ್ಯೋಗಿಗಳನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳು ONGC ಸಂಸ್ಥೆಯ ವಾಹನದಲ್ಲೇ ಅಪಹರಣ ಮಾಡಿದ್ದಾರೆ. ಬಳಿಕ ವಾಹನವನ್ನು ಅಸ್ಸಾಂ-ನಾಗಾಲ್ಯಾಂಡ್​ ಗಡಿ ಭಾಗದಲ್ಲಿ ನಿಮೋನಗಢ ಅರಣ್ಯ ಪ್ರದೇಶದ ಬಳಿ ಬಿಟ್ಟುಹೋಗಿದ್ದಾರೆ. ಸ್ಥಳೀಯ ಆಡಳಿತ, ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಸ್ಥಳೀಯ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ರಾಜ್ಯದ ಉನ್ನತ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ ಎಂದು ONGC ಮೂಲಗಳು ಹೇಳಿವೆ. ಅಪ್ಪರ್​ ಅಸ್ಸಾಂನ ಈ ಭಾಗದಲ್ಲಿ 1960ರಿಂದಲೂ ONGC ಸಂಸ್ಥೆ ತೈಲ ಮತ್ತು ಅನಿಲವನ್ನು ಉತ್ಪಾದಿಸುತ್ತಾ ಬಂದಿದೆ.

(three ONGC employees abducted by unknown armed miscreants in the early hours of 21 April 2021 at rig site in Lakwa Sivasagar Assam)

Follow us on

Related Stories

Most Read Stories

Click on your DTH Provider to Add TV9 Kannada