ಕೊವಿಡ್ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್

ಕೊವಿಡ್ 2ನೇ ಅಲೆಯಿಂದಾಗಿ ನಷ್ಟ ಅನುಭವಿಸಿದ ವಲಯಗಳ ಸುಧಾರಣೆಗೆ ಈ ನಿಧಿಯ ಬಳಕೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಕೊವಿಡ್ ಬಾಧಿತ ವಲಯಗಳಿಗೆ 1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್
ಸಾಂದರ್ಭಿಕ ಚಿತ್ರ
Follow us
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jun 28, 2021 | 4:23 PM

ದೆಹಲಿ: ಕೊವಿಡ್ ಬಾಧಿತ ವಲಯಗಳ ನೆರವಿಗೆ ಮತ್ತೊಮ್ಮೆ ಧಾವಿಸಿರುವ ಕೇಂದ್ರ ಸರ್ಕಾರವು ₹ 1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆಯನ್ನು ಘೋಷಿಸಿದೆ. ಕೊವಿಡ್ 2ನೇ ಅಲೆಯಿಂದಾಗಿ ನಷ್ಟ ಅನುಭವಿಸಿದ ವಲಯಗಳ ಸುಧಾರಣೆಗೆ ಈ ನಿಧಿಯ ಬಳಕೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಕಳೆದ ವರ್ಷ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರವು ಕೊರೊನಾ ಬಾಧಿತ ವಲಯಗಳಿಗಾಗಿ ಆತ್ಮನಿರ್ಭರ್ ಭಾರತ್ ಸೇರಿದಂತೆ ಹಲವು ವಿಶೇಷ ಪ್ಯಾಕೇಜ್​ಗಳನ್ನು ಘೋಷಿಸಿತ್ತು. ₹ 21 ಲಕ್ಷ ಕೋಟಿಯಷ್ಟು ಮೊತ್ತದ ಆರ್ಥಿಕ ಮತ್ತು ಇತರ ರೂಪದ ನೆರವನ್ನು ಇದು ಹೊಂದಿತ್ತು. ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ (Gross Domestic Product – GDP) ಪ್ಯಾಕೇಜ್​ ಶೇ 10ರಷ್ಟು ಮೊತ್ತದ ಪರಿಹಾರ ಇದಾಗಿತ್ತು.

ರಿಸರ್ವ್​ ಬ್ಯಾಂಕ್ ಅಫ್ ಇಂಡಿಯಾದ ಜೂನ್ ತಿಂಗಳ ಮಾಸಿಕ ಬುಲೆಟಿನ್​ ಪ್ರಕಟವಾದ ನಂತರ ಸಚಿವರ ನೆರವಿನ ಹೇಳಿಕೆ ಪ್ರಕಟವಾಗಿರುವುದು ಗಮನಾರ್ಹ ಸಂಗತಿ. ಕೊವಿಡ್ 2ನೇ ಅಲೆಯು ದೇಶದ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳನ್ನು ಬಾಧಿಸುತ್ತಿರುವುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಕುಸಿತವಾಗಲಿದೆ. ಇದರಿಂದ ದೇಶಕ್ಕೆ ಈ ಬಾರಿ ಸುಮಾರು ₹ 2 ಲಕ್ಷ ಕೋಟಿಯಷ್ಟು ಆರ್ಥಿಕ ನಷ್ಟ ಆಗಬಹುದು ಎಂದು ಆರ್​ಬಿಐ ಅಂದಾಜಿಸಿತ್ತು. ಜೂನ್ ತಿಂಗಳ ಆರಂಭದಲ್ಲಿ ಸರ್ಕಾರ ಪ್ರಕಟಿಸಿದ್ದ ಮಾಹಿತಿ ಪ್ರಕಾರ 2020-21ರ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಶೇ 7.3ರಷ್ಟು ಕುಸಿದಿದೆ.

ಕೇಂದ್ರ ಸರ್ಕಾರ ಪ್ರಕಟಿಸಿರುವ ಸಾಲ ಖಾತರಿ ಯೋಜನೆ ವಿವರ

(Covid Stimulus Package Finance Minister Nirmala Sitharaman Announces Loan Guarantee Scheme)

ಇದನ್ನೂ ಓದಿ: Nirmala Sitharaman: ಕೊರೊನಾ ಆರ್ಥಿಕ ಬಿಕ್ಕಟ್ಟು ಎದುರಿಸಲು ಮತ್ತೊಂದು ಸುತ್ತಿನ ಪ್ಯಾಕೇಜ್ ಘೋಷಿಸಿದ ನಿರ್ಮಲಾ ಸೀತಾರಾಮನ್: ಕೇಂದ್ರದಿಂದ 8 ಅಂಶಗಳ ನೆರವು

ಇದನ್ನೂ ಓದಿ: ಕೊರೊನಾ ಲಸಿಕೆ ಖರೀದಿಗೆ ಹೆಚ್ಚಿನ ಹಣ ನೀಡಲು ನಿರ್ಮಲಾ ಸೀತಾರಾಮನ್ ಒಪ್ಪಿಗೆ

Published On - 4:14 pm, Mon, 28 June 21