AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾಂನಲ್ಲಿ ಭಯೋತ್ಪಾದನೆ, ಒಳನುಸುಳುವಿಕೆ ಕಡಿಮೆಯಾಗಿದೆ; ರಾಜ್ಯ ಪ್ರಗತಿಯ ಹಾದಿಯಲ್ಲಿದೆ: ರಾಜ್​​ನಾಥ್ ಸಿಂಗ್

Rajnath Singh in Assam: ಅಸ್ಸಾಂನ ಪರಿಸ್ಥಿತಿ ಬಹಳಷ್ಟು ಉತ್ತಮವಾಗಿದೆ, ರಾಜ್ಯ ಪ್ರಗತಿಯ ಹಾದಿಯಲ್ಲಿದೆ. ಬಿಜೆಪಿ ನೇತ್ವದ ಸರ್ಕಾರ ಭಾರತ-ಬಾಂಗ್ಲಾದೇಶ ಗಡಿಭಾಗದಲ್ಲಿ ಪ್ರಧಾನ ಪ್ರದೇಶಗಳನ್ನು ಮುಚ್ಚಿದ್ದು, ಒಳನುಸುಳುವಿಕೆ ತಡೆಯಲು ಎಲೆಕ್ಟ್ರಾನಿಕ್ ನಿಗಾ ವ್ಯವಸ್ಥೆ ಸ್ಥಾಪಿಸಲಾಗಿದೆ.

ಅಸ್ಸಾಂನಲ್ಲಿ ಭಯೋತ್ಪಾದನೆ, ಒಳನುಸುಳುವಿಕೆ ಕಡಿಮೆಯಾಗಿದೆ; ರಾಜ್ಯ ಪ್ರಗತಿಯ ಹಾದಿಯಲ್ಲಿದೆ: ರಾಜ್​​ನಾಥ್ ಸಿಂಗ್
ರಾಜ್​ನಾಥ್ ಸಿಂಗ್
ರಶ್ಮಿ ಕಲ್ಲಕಟ್ಟ
|

Updated on:Mar 14, 2021 | 5:14 PM

Share

ಬಿಸ್ವನಾಥ್: ಅಸ್ಸಾಂನಲ್ಲಿ ಭಯೋತ್ಪಾದನೆ ಮತ್ತು ಒಳನುಸುಳುವಿಕೆ ಕಡಿಮೆಯಾಗಿದ್ದು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಕ್ಷಿಪ್ರ ಗತಿಯಲ್ಲಿ ಸಾಗುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜ್​ನಾ​​ಥ್​ ಸಿಂಗ್ ಹೇಳಿದ್ದಾರೆ. ಅಸ್ಸಾಂನಲ್ಲಿ ಭಾನುವಾರ ಮೊದಲ ಬಾರಿ ಚುನಾವಣಾ ಪ್ರಚಾರ ನಡೆಸಿದ ಸಿಂಗ್, ಅಸ್ಸಾಂನಲ್ಲಿ ಶಾಂತಿ ಮರಳಿದೆ. ಕಳೆದ ಐದು ವರ್ಷದ ಬಿಜೆಪಿ ಅಧಿಕಾರವಧಿಯಲ್ಲಿ 12ಕ್ಕಿಂತಲೂ ಹೆಚ್ಚು ಬಂಡಾಯ ಗುಂಪುಗಳು ಶಸ್ತ್ರಾಸ್ತ್ರ ತ್ಯಜಿಸಿವೆ. ನನ್ನಲ್ಲಿ ಬಿಸ್ವನಾಥ್​ಗೆ ಬರಬೇಕು ಎಂದು ಕರೆದಾಗ ನನಗೆ 2014ರಲ್ಲಿ ನಡೆದ ಆದಿವಾಸಿಗಳ ಹತ್ಯಾಕಾಂಡ ನೆನಪಿಗೆ ಬಂತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಈ ಪ್ರದೇಶದಲ್ಲಿ ಶಾಂತಿ ನೆಲೆಸುವುದಕ್ಕಿಂತ ಮಹತ್ವದ ಘಟನೆ ಬೇರೆ ಯಾವುದೂ ಇಲ್ಲ ಎಂದು ಅವರು ಹೇಳಿದ್ದಾರೆ.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೇರಿದಾಗ ಭಯೋತ್ಪಾದನೆ ಮತ್ತು ಒಳ ನುಸುಳುವಿಕೆಯನ್ನು ನಿಲ್ಲಿಸುವುದಾಗಿ ಹೇಳಿತ್ತು. ಅಸ್ಸಾಂನ ಪರಿಸ್ಥಿತಿ ಬಹಳಷ್ಟು ಉತ್ತಮವಾಗಿದೆ, ರಾಜ್ಯ ಪ್ರಗತಿಯ ಹಾದಿಯಲ್ಲಿದೆ. ಬಿಜೆಪಿ ನೇತ್ವದ ಸರ್ಕಾರ ಭಾರತ-ಬಾಂಗ್ಲಾದೇಶ ಗಡಿಭಾಗದಲ್ಲಿ ಪ್ರಧಾನ ಪ್ರದೇಶಗಳನ್ನು ಮುಚ್ಚಿದ್ದು, ಒಳನುಸುಳುವಿಕೆ ತಡೆಯಲು ಎಲೆಕ್ಟ್ರಾನಿಕ್ ನಿಗಾ ವ್ಯವಸ್ಥೆ ಸ್ಥಾಪಿಸಿದೆ. ಧುಬ್ರಿಯಲ್ಲಿ ನಾವು ಅಂತರರಾಷ್ಟ್ರೀಯ ಗಡಿಯನ್ನು ಮುಚ್ಚಿದ್ದೇವೆ. ಅಸ್ಸಾಂನಲ್ಲಿ ಇನ್ನುಳಿದ ಕೆಲಸ ಕಾರ್ಯಗಳು ಬಾಕಿ ಇದ್ದರೆ ಮತ್ತೊಮ್ಮೆ ಅಧಿಕಾರಕ್ಕೇರಿದಾಗ ಅದನ್ನು ನಾವು ಪೂರೈಸುತ್ತೇವೆ.

ರಾಜ್ಯದಾದ್ಯಂತ ಮನೆಗಳಲ್ಲಿ ಶೌಚಾಲಯ ನಿರ್ಮಿಸಿದ್ದಕ್ಕೆ ನಾನು ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ. ಅಸ್ಸಾಂನ ಎಲ್ಲ ಜಿಲ್ಲೆಗಳು ಈ ಬಹಿರ್ದೆಸೆ ಮುಕ್ತವಾಗಿದೆ. ತ್ರಿಪುರಾದಲ್ಲಿ ನಮ್ಮ ಸರ್ಕಾರವಿದೆ. ನಿಮ್ಮ ಆಶೀರ್ವಾದದಿಂದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ನಾವು ಅಧಿಕಾರ ರಚಿಸಲಿದ್ದೇವೆ. ಈ ರಾಜ್ಯಗಳು ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿವೆ. ಇಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಮುಖ ಗಡಿಭಾಗಗಳನ್ನು ಬಂದ್ ಮಾಡುವ ಮೂಲಕ ಬಾಂಗ್ಲಾದೇಶಿಗಳು ಭಾರತಕ್ಕೆ ಪ್ರವೇಶಿಸದಂತೆ ತಡೆಯುತ್ತೇವೆ ಎಂದಿದ್ದಾರೆ ರಾಜ್​ನಾಥ್ ಸಿಂಗ್.

ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯಿ ಅವರು ಯಾವತ್ತೂ ಎಐಯುಡಿಎಫ್ ಜತೆ ಮೈತ್ರಿ ಮಾಡಿಕೊಂಡಿಲ್ಲ. ಆದರೆ ಇಂದು ಕಾಂಗ್ರೆಸ್ ಅಧಿಕಾರಕ್ಕಾರಕ್ಕಾಗಿ ಎಐಯುಡಿಎಫ್ ಜತೆ ಮೈತ್ರಿಮಾಡಿದೆ ಎಂದಿದ್ದಾರೆ. ಅಸ್ಸಾಂನ ಬಿಸ್ವನಾಥ್​ನಲ್ಲಿ ಹಾಲಿ ಬಿಜೆಪಿ ಶಾಸಕ ಪ್ರಮೋದ್ ಬೊರ್ಥಾಕುರ್ ಅವರ ಪರ ರಾಜನಾಥ ಸಿಂಗ್ ಪ್ರಚಾರ ನಡೆಸುತ್ತಿದ್ದಾರೆ. ಪ್ರಮೋದ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅಂಜನ್ ಬೋರ್ಹಾ ಸ್ಪರ್ಧಿಸಲಿದ್ದು, ಮಾರ್ಚ್ 27ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: Assam Assembly Elections 2021: ರಾಜಕೀಯದಲ್ಲಿ ಬಿಜೆಪಿ ನನ್ನನ್ನು ಮುಗಿಸಲು ಯತ್ನಿಸುತ್ತಿದೆ: ಎಐಯುಡಿಎಫ್ ಮುಖ್ಯಸ್ಥ ಮೌಲಾನಾ ಬದ್ರುದ್ದೀನ್ ಅಜ್ಮಲ್

Published On - 4:46 pm, Sun, 14 March 21

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ