AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕಂಠಪೂರ್ತಿ ಕುಡಿದು ಬೈಕ್ ಓಡಿಸಿದ ಪುಣ್ಯಾತ್ಮ ಏನೆಲ್ಲ ಮಾಡಿದ ಗೊತ್ತಾ?; ವೈರಲ್ ವಿಡಿಯೋ ಇಲ್ಲಿದೆ

ಹಾಡಹಗಲೇ ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ತೂರಾಡುತ್ತಾ ಬೈಕಿನಲ್ಲಿ ಹೋಗಿ ಏನೆಲ್ಲ ಅವಾಂತರಗಳನ್ನು ಮಾಡಿಕೊಂಡಿದ್ದಾನೆ ಎಂಬ ವಿಡಿಯೋವೊಂದನ್ನು ತೆಲಂಗಾಣದ ಟ್ರಾಫಿಕ್ ಪೊಲೀಸರು ರಿಲೀಸ್ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

Viral Video: ಕಂಠಪೂರ್ತಿ ಕುಡಿದು ಬೈಕ್ ಓಡಿಸಿದ ಪುಣ್ಯಾತ್ಮ ಏನೆಲ್ಲ ಮಾಡಿದ ಗೊತ್ತಾ?; ವೈರಲ್ ವಿಡಿಯೋ ಇಲ್ಲಿದೆ
ಕುಡುಕನ ಬೈಕ್ ಸವಾರಿಯ ವಿಡಿಯೋ ತುಣುಕು
TV9 Web
| Edited By: |

Updated on:Jul 13, 2021 | 5:38 PM

Share

ಹೈದರಾಬಾದ್: ಕುಡಿದು ವಾಹನ ಚಲಾಯಿಸಬೇಡಿ ಎಂಬ ಬೋರ್ಡನ್ನು ದಾರಿಯುದ್ದಕ್ಕೂ ಹಾಕಿರುವುದನ್ನು ನೋಡಿರುತ್ತೀರಿ. ಕುಡಿದು ಗಾಡಿ ಓಡಿಸಿದರೆ ನಿಮಗೆ ಮಾತ್ರವಲ್ಲ ನಿಮ್ಮ ಅಕ್ಕಪಕ್ಕದಲ್ಲಿ ವಾಹನಗಳಲ್ಲಿ ಹೋಗುತ್ತಿರುವವರಿಗೆ ಅಪಾಯ ತಪ್ಪಿದ್ದಲ್ಲ. ಹಾಡಹಗಲೇ ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ತೂರಾಡುತ್ತಾ ಬೈಕಿನಲ್ಲಿ ಹೋಗಿ ಏನೆಲ್ಲ ಅವಾಂತರಗಳನ್ನು ಮಾಡಿಕೊಂಡಿದ್ದಾನೆ ಎಂಬ ವಿಡಿಯೋವೊಂದನ್ನು ತೆಲಂಗಾಣದ ಟ್ರಾಫಿಕ್ ಪೊಲೀಸರು ರಿಲೀಸ್ ಮಾಡಿದ್ದಾರೆ. ಈ ವಿಡಿಯೋ ಈಗ ಭಾರೀ ವೈರಲ್ ಆಗಿದೆ.

ತೆಲಂಗಾಣದ ಸೈಬರಾಬಾದ್​ ಟ್ರಾಫಿಕ್ ಪೊಲೀಸರು ಸಿಸಿಟಿವಿಯಲ್ಲಿ ಸೆರೆಯಾದ ಈ ವಿಡಿಯೋವನ್ನು ಎಡಿಟ್ ಮಾಡಿ ಫೇಸ್​ಬುಕ್ ಮತ್ತು ಟ್ವಿಟ್ಟರ್​ನಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೋಡಿಯಾದರೂ ಜನರು ಬುದ್ಧಿ ಕಲಿಯಲಿ ಎಂಬ ಉದ್ದೇಶ ಅವರದ್ದು. ಆದರೆ, ಇದೀಗ ಈ ವಿಡಿಯೋ ತಮಾಷೆಯ ಸಂಗತಿಯಾಗಿದ್ದು, ಸಾಕಷ್ಟು ಜನರು ಶೇರ್ ಮಾಡಿಕೊಂಡಿದ್ದಾರೆ. ಆ ಕುಡುಕನ ಅವಸ್ಥೆ ಹೇಗಿತ್ತು? ಅವನ ಎದುರಿನಿಂದ ಬರುತ್ತಿದ್ದ ವಾಹನ ಸವಾರರನ್ನು ಆತ ಯಾವೆಲ್ಲ ರೀತಿಯಲ್ಲಿ ಕಾಡಿದ? ಎಂಬುದನ್ನು ಇಲ್ಲಿ ಕ್ಲಿಕ್ ಮಾಡಿ ನೀವೇ ಒಮ್ಮೆ ಕಣ್ಣಾರೆ ನೋಡಿಬಿಡಿ!

ಹೈದರಾಬಾದ್ ಬಳಿಯ ಚೆವೆಲ್ಲಾದಲ್ಲಿನ ಇಬ್ರಾಹಿಂಪಲ್ಲಿ ಗೇಟ್​ ಬಳಿ ಇರುವ ಸಿಸಿಟಿವಿಯಲ್ಲಿ ಈ ವಿಡಿಯೋ ರೆಕಾರ್ಡ್​ ಆಗಿದೆ. ಹಗಲು ಹೊತ್ತಿನಲ್ಲೇ ಪ್ರಜ್ಞೆ ತಪ್ಪುವಷ್ಟು ಕುಡಿದಿದ್ದ ಯುವಕನೊಬ್ಬ ಬೈಕ್​ನಲ್ಲಿ ಹೋಗುತ್ತಿರುತ್ತಾನೆ. ಅಷ್ಟರಲ್ಲಿ ಪಕ್ಕದಲ್ಲಿ ಹಾದುಹೋದ ಕಾರಿನ ರಭಸಕ್ಕೆ ಆತ ತನ್ನಷ್ಟಕ್ಕೆ ತಾನೇ ಕೆಳಗೆ ಬೀಳುತ್ತಾನೆ. ಆತನ ಹಿಂದೆ ಬರುತ್ತಿದ್ದ ಬೈಕಿನವರು ಆ ಕುಡುಕನನ್ನು ಎತ್ತಿ, ಬೈಕನ್ನೂ ಎತ್ತಿ ಕೊಡುತ್ತಾರೆ. ಮತ್ತೆ ಬೈಕ್ ಏರಿದ ಕುಡುಕ ರಸ್ತೆಯೆಲ್ಲಾ ನಂದೇ ಎಂಬಂತೆ ಅತ್ತಿಂದಿತ್ತ ಹೋಗುತ್ತಾ ಎದುರು ಬರುತ್ತಿರುವವರಿಗೂ ಗಾಬರಿ ಉಂಟುಮಾಡುತ್ತಾನೆ.

ಹಾವಿನಂತೆ ರಸ್ತೆ ತುಂಬ ಹೋಗುತ್ತಿದ್ದ ಆತನಿಗೆ ಹಿಂದಿನಿಂದ ಬರುತ್ತಿದ್ದ ಕಾರಿನವರು ಎಷ್ಟು ಹಾರ್ನ್ ಹಾಕಿದರೂ ಕೇಳುವುದೇ ಇಲ್ಲ. ಹೀಗೇ ರಸ್ತೆಯ ಒಂದು ತುದಿಯಿಂದ ಮತ್ತೊಂದು ತುದಿಗೆ ಮನಬಂದಂತೆ ತೂರಾಡುತ್ತಾ ಬೈಕಿನಲ್ಲಿ ಹೋಗುತ್ತಿದ್ದ ಆತನನ್ನು ಬೇರೆ ವಾಹನ ಸವಾರರು ಕಾಪಾಡಲು ತಮ್ಮ ಕಾರನ್ನೇ ಬೇರೆಡೆ ತಿರುಗಿಸುತ್ತಾರೆ. ಇಷ್ಟಾದರೂ ಆತನ ಗ್ರಹಚಾರ ಸರಿಯಿರದ ಕಾರಣ ಎದುರು ಬಂದ ಕಾರಿಗೆ ಬೈಕನ್ನು ಡಿಕ್ಕಿ ಹೊಡೆಸಿ ನಡುರಸ್ತೆಯಲ್ಲೇ ಬೀಳುತ್ತಾನೆ. ಈ ವಿಡಿಯೋ ಇನ್ನೂ ನೋಡದಿದ್ದರೆ ಮಿಸ್ ಮಾಡದೆ ನೋಡಿ…

ಇದನ್ನೂ ಓದಿ: Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್​ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?

(Why you Should Not Drink and Drive Traffic Police Sared Drunken Man Viral Video on Facebook and Twitter )

Published On - 5:37 pm, Tue, 13 July 21

Follow Us
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ