AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಹಾರ ಧಾನ್ಯಗಳನ್ನೂ ಇನ್ನುಮುಂದೆ ಎಟಿಎಮ್​ಗಳಂತೆ ಕೆಲಸ ಮಾಡುವ ಕಾಳು-ಎಟಿಮ್​ಗಳಲ್ಲಿ ಪಡೆಯಬಹುದು

ಅಟೊಮೇಟೆಡ್ ಮಲ್ಟಿ ಕಮ್ಮೊಡಿಟಿ ಗ್ರೇನ್ ಡಿಸ್ಪೆನ್ಸಿಂಗ್ ಮಷೀನ್ ಅಂತ ಕರೆಸಿಕೊಳ್ಳುವ ಈ ಯಂತ್ರವನ್ನು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (ವರ್ಲ್ಡ್ ಫುಡ್​ ಪ್ರೊಗ್ರಾಮ್) ಯೋಜನೆಯಡಿ ಸ್ಥಾಪಿಸಲಾಗಿದೆ.

ಆಹಾರ ಧಾನ್ಯಗಳನ್ನೂ ಇನ್ನುಮುಂದೆ ಎಟಿಎಮ್​ಗಳಂತೆ ಕೆಲಸ ಮಾಡುವ ಕಾಳು-ಎಟಿಮ್​ಗಳಲ್ಲಿ ಪಡೆಯಬಹುದು
ಕಾಳು ಎಟಿಎಮ್​ ಅಂದರೆ ಇದೇ!
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 17, 2021 | 8:04 PM

Share

ಗುರುಗ್ರಾಮ್:  ಪಡಿತರ ಅಂಗಡಿಗಳ ಮುಂದೆ ಮೈಲಿಯುದ್ದ ಗ್ರಾಹಕರ ಸಾಲುಗಳನ್ನು ನೀವು ನೋಡಿರುತ್ತೀರಿ.ಅದರಲ್ಲಿ ಕಾಲು ಭಾಗದಷ್ಟು ರೈತರಿಗೆ ಆಹಾರ ಧಾನ್ಯ ವಿತರಿಸುವುದರಲ್ಲಿ ಸಮಯ ಮುಗಿದು ಅಂಗಡಿ ಮುಚ್ಚಲ್ಪಡುತ್ತದೆ. ಕ್ಯೂನಲ್ಲಿ ನಿಂತ ಮುಕ್ಕಾಲು ಭಾಗ ಜನ ಅಂಗಡಿ ನಡೆಸುವವನಿಗೆ ಹಿಡಿಶಾಪ ಹಾಕುತ್ತಾ ಮನಗೆ ತೆರಳುತ್ತಾರೆ. ಕಾಳುಘಲ್ನನು ಪಡೆದವರು ಸಹ ತೂಕದ ಪ್ರಮಾಣ ಬಗ್ಗೆ ಗೊಣಗುತ್ತಾ ಮನೆ ಕಡೆ ತೆರಳುತ್ತಾರೆ. ಇಂಥ ಸನ್ನಿವೇಶಕ್ಕೆ ಬ್ರೇಕ್ ಬೀಳುವ ಸಮಯ ಬಂದುಬಿಟ್ಟಿದೆ. ಹೌದು ನಾವು ಹೇಳುತ್ತಿರುವುದು ಮತ್ತು ನೀವು ಓದುತ್ತಿರುವುದು ಸತ್ಯ. ಹಣ ಒದಗಿಸುವ ಎಟಿಎಮ್​ ಕಿಯಾಸ್ಕ್​ಗಳಂತೆ ದವಸ ಧಾನ್ಯಗಳನ್ನು ವಿತರಿಸುವ ಕಾಳು-ಎಟಿಎಮ್​ಗಳು (ಗ್ರೇನ್ ಎಟಿಎಮ್​) ಇನ್ನು ಮುಂದೆ ಬರಲಿವೆ.

ಇಂಥದೊಂದು ಕಿಯಾಸ್ಕ್​ ಅನ್ನು ಪೈಲಟ್ ಪ್ರಾಜೆಕ್ಟ್ ಆಗಿ ಹರಿಯಾಣದ ಗುರುಗ್ರಾಮ್​ ಹತ್ತಿರದಲ್ಲಿರುವ ಫರೂಕ್​ನಗರ್​ನಲ್ಲಿ ಸ್ಥಾಪಿಸಲಾಗಿದ್ದು ಇದು ಎಟಿಎಮ್​ಗಳ ರೀತಿಯಲ್ಲೇ ಕೆಲಸ ಮಾಡುತ್ತದೆ. ಗ್ರಾಹಕರು ಮಷೀನ್ ಮೇಲೆ ತಮ್ಮ ಹೆಬ್ಬೊಟ್ಟನ್ನು ಇಡುವ ಮೂಲಕ ತಮ್ಮ ಪಾಲಿನ ರೇಷನ್ ಪಡೆದುಕೊಳ್ಳಬಹುದು.

ಇದು ಪಾರದರ್ಶಕವಾಗಿದೆ!

ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವರೂ ಆಗಿರುವ ಹರಿಯಾಣದ ಉಪ ಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರು, ಗ್ರಾಹಕರು ಪದೇಪದೆ ಸರಿಯಾದ ಪ್ರಮಾಣ ಮತ್ತು ಸೂಕ್ತ ಸಮಯದಲ್ಲಿ ಆಹಾರ ಧಾನ್ಯಗಳು ದೊರಕದಿರುವ ಬಗ್ಗೆ ನೀಡುತ್ತಿರುವ ದೂರು ಮತ್ತು ಅನುಭವಿಸುತ್ತಿರುವ ತೊಂದರೆ ಹಿನ್ನೆಲೆಯಲ್ಲಿ ಈ ಮಷೀನ್​ಗಳನ್ನು ರಾಜ್ಯಾದ್ಯಂದ ಇರುವ ಸರ್ಕಾರೀ ಡಿಪೋಗಳ ಬಳಿ ಸ್ಥಾಪಿಸಲಾಗುವುದು ಅಂತ ಶನಿವಾರ ಹೇಳಿದರು.

ಇದು ಗ್ರಾಹಕರಿಗೆ ಬಹಳ ಪ್ರಯೋಜನಕಾರಿಯಾಗುವುದರ ಜೊತೆಗೆ ಡಿಪೋಗಳಲ್ಲಿ ಆಹಾರ ಧಾನ್ಯದ ಕೊರತೆ ಬಗ್ಗೆ ವ್ಯಕ್ತವಾಗುವ ದೂರುಗಳನ್ನು ಕೊನೆಗೊಳಿಸುತ್ತದೆ ಮತ್ತು ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುತ್ತದೆ ಎಂದು ಹೇಳಿದರು.

ಸುದ್ದಿಸಂಸ್ಥೆಯೊಂದರ ಜತೆ ಮಾತಾಡಿರುವ ಚೌತಾಲಾ ಅವರು, ಈ ಮಷೀನ್​ಗಳು ಸರ್ಕಾರೀ ಡಿಪೋಗಳನ್ನು ನಡೆಸುವವರಿಗೆ ಆಹಾರ ಧಾನ್ಯಗಳ ಸಮರ್ಪಕ ವಿತರಣೆಗೆ ನೆರವಾಗುವುದರೊಂದಿಗೆ ಅವರ ಸಮಯವನ್ನೂ ಉಳಿಸುತ್ತವೆ ಎಂದು ಹೇಳಿದ್ದಾರೆ.

ಅಟೊಮೇಟೆಡ್ ಮಲ್ಟಿ ಕಮ್ಮೊಡಿಟಿ ಗ್ರೇನ್ ಡಿಸ್ಪೆನ್ಸಿಂಗ್ ಮಷೀನ್ ಅಂತ ಕರೆಸಿಕೊಳ್ಳುವ ಈ ಯಂತ್ರವನ್ನು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮ (ವರ್ಲ್ಡ್ ಫುಡ್​ ಪ್ರೊಗ್ರಾಮ್) ಯೋಜನೆಯಡಿ ಸ್ಥಾಪಿಸಲಾಗಿದೆ.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಅಂಕಿತ್ ಸೂದ್ ಹೆಸರಿನ ಅಧಿಕಾರಿಯೊಬ್ಬರು, ತೂಕದ ವಿಷಯದಲ್ಲಿ ಕಾಳು-ಎಟಿಎಮ್ ಪ್ರಮಾದ ಪ್ರಮಾಣ ನಗಣ್ಯ ಎಂದು ಹೇಳಿದ್ದಾರೆ. ಇದು ಐದರಿಂದ ಏಳು ನಿಮಿಷಗಳಲ್ಲಿ 70 ಕೆಜಿ ಅಹಾರ ಧಾನ್ಯಗಳನ್ನು ವಿತರಿಸಬಲ್ಲದು ಅಂತ ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಯಂತ್ರದಲ್ಲಿ ಟಚ್​ ಸ್ಕ್ರೀನ್ ಒಂದಿಗೆ ಬಯೊಮೆಟ್ರಿಕ್ ಉಪಕರಣ ಬರುತ್ತದೆ ಮತ್ತು ಇದರಲ್ಲಿ ಗ್ರಾಹಕ ತನ್ನ ಆಧಾರ್ ಕಾರ್ಡ್ ನಂಬರ್ ಇಲ್ಲವೆ ರೇಷನ್ ಕಾರ್ಡ್ ನಂಬರ್ ಫೀಡ್ ಮಾಡಬೇಕು. ಬಯೋಮೆಟ್ರಿಕ್ ಅದನ್ನು ದೃಢೀಕರಿಸಿದ ನಂತರ ಮಷೀನ್ ಕೆಳಗೆ ಇಟ್ಟಿರುವ ಚೀಲಗಳಲ್ಲಿ ನಿರ್ದಿಷ್ಟ ಗ್ರಾಹಕನಿಗೆ ಸರ್ಕಾರ ನಿಗದಿ ಮಾಡಿರುವಷ್ಟು ಆಹಾರ ಧಾನ್ಯಗಳು ಸ್ವಯಂ ಚಾಲಿತವಾಗಿ ಬಂದು ಬೀಳುತ್ತವೆ.

ಇದನ್ನೂ ಓದಿ: Viral Video: ದೇವರ ವಿಗ್ರಹವನ್ನು ಮುರಿದ ಆರೋಪ; ನಡುರಸ್ತೆಯಲ್ಲಿ ವೃದ್ಧನಿಗೆ ಥಳಿಸಿದ ಯುವಕರ ವಿಡಿಯೋ ವೈರಲ್

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ