ಎಲ್ಐಸಿ ಎರಡು ಹೊಸ ಪ್ಲಾನ್ಗಳು ಬಿಡುಗಡೆ; ಮಾರ್ಕೆಟ್ ಲಿಂಕ್ ಆದ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ ಬಗ್ಗೆ ಮಾಹಿತಿ
LIC starts 2 new policies, protection plus and Bima Kavach: ಭಾರತೀಯ ಜೀವ ವಿಮಾ ನಿಗಮವು ಪ್ರೊಟೆಕ್ಷನ್ ಪ್ಲಸ್ ಮತ್ತು ಬಿಮಾ ಕವಚ್ ಎನ್ನುವ ಎರಡು ಹೊಸ ಪ್ಲಾನ್ಗಳನ್ನು ಬಿಡುಗಡೆ ಮಾಡಿದೆ. ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ ಮಾರುಕಟ್ಟೆಗೆ ಲಿಂಕ್ ಆಗಿದ್ದು, 18ರಿಂದ 65 ವರ್ಷ ವಯೋಮಾನದವರು ಪಡೆಯಬಹುದು. ಪ್ರೀಮಿಯಮ್ ಅವಧಿ 15 ವರ್ಷಗಳವರೆಗೆ ಇದ್ದು, ಪಾಲಿಸಿ ಮೆಚ್ಯೂರಿಟಿ 25 ವರ್ಷಗಳವರೆಗೆ ಇದೆ.

ನವದೆಹಲಿ, ಡಿಸೆಂಬರ್ 5: ಭಾರತೀಯ ಜೀವ ವಿಮಾ ನಿಗಮ (LIC) ಎರಡು ಹೊಸ ಇನ್ಷೂರೆನ್ಸ್ ಪ್ಲಾನ್ಗಳನ್ನು (Insurance) ಬಿಡುಗಡೆ ಮಾಡಿದೆ. ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ (LIC Protection Plus) ಮತ್ತು ಬಿಮಾ ಕವಚ್ (LIC Bima Kavach) ಪ್ಲಾನ್ಗಳನ್ನು ಎಲ್ಐಸಿಯ ಸಿಇಒ ಮತ್ತು ಎಂಡಿ ಆರ್ ದೊರೈಸ್ವಾಮಿ ಅನಾವರಣಗೊಳಿಸಿದ್ದಾರೆ. ಇದರಲ್ಲಿ ಪ್ರೊಟೆಕ್ಷನ್ ಪ್ಲಸ್ ಜೀವ ವಿಮೆ ಜೊತೆಗೆ ಉಳಿತಾಯಕ್ಕೆ ನೆರವಾಗುವ ಪ್ಲಾನ್ ಆಗಿದೆ. ಬಿಮಾ ಕವಚ್ ಪ್ಲಾನ್ ಪೂರ್ಣವಾಗಿ ರಿಸ್ಕ್ ಪ್ಲಾನ್ ಆಗಿದೆ.
ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಪ್ಲಾನ್
ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಎಂಬುದು ಲೈಫ್ ಇನ್ಷೂರೆನ್ಸ್ ಕಮ್ ಸೇವಿಂಗ್ಸ್ ಪ್ಲಾನ್ ಆಗಿದೆ. ಮಾರುಕಟ್ಟೆಗೂ ಜೋಡಿತವಾಗಿರುವ ಸ್ಕೀಮ್ ಆಗಿದೆ. ನೀವು ನಿಮ್ಮ ಹಣವನ್ನು ಯಾವ ಫಂಡ್ನಲ್ಲಿ ಹೂಡಿಕೆ ಮಾಡಬಹುದು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಖಾತ್ರಿ ಹಣವನ್ನು ಹೆಚ್ಚಿಸುವುದು, ಇಳಿಸುವುದು, ಅಥವಾ ಹೆಚ್ಚುವರಿ ಪ್ರೀಮಿಯಮ್ ಕಟ್ಟುವುದು ಇತ್ಯಾದಿ ಅನೇಕ ಸೌಲಭ್ಯಗಳು ಮತ್ತು ಅವಕಾಶಗಳಿವೆ.
ಇದನ್ನೂ ಓದಿ: ಪಿಎಂ ವಿದ್ಯಾಲಕ್ಷ್ಮೀ ಯೋಜನೆ; ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂವರೆಗೆ ಸಾಲ; ಇದು ಕೇಂದ್ರ ಪ್ರಾಯೋಜಿತ ಸ್ಕೀಮ್
ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ ಅನ್ನು ಪಡೆಯಲು ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ 65 ವರ್ಷ ಇದೆ. ಇಲ್ಲಿ ಪಾಲಿಸಿ ಮೆಚ್ಯೂರಿಟಿ ಆಗುವ ಅವಧಿ 10, 15, 20 ಮತ್ತು 25 ವರ್ಷ ಈ ನಾಲ್ಕು ಆಯ್ಕೆಗಳಿವೆ.
10 ವರ್ಷದ ಪಾಲಿಸಿಯಾದರೆ ನೀವು 5 ವರ್ಷ ಪ್ರೀಮಿಯಮ್ ಕಟ್ಟಬೇಕು. 15 ವರ್ಷದ ಟರ್ಮ್ ಆಗಿದ್ದರೆ ಪ್ರೀಮಿಯಮ್ ಪಾವತಿಸುವುದು 7 ವರ್ಷ ಮಾತ್ರ. 20 ವರ್ಷವಾದರೆ 10 ವರ್ಷ ಪ್ರೀಮಿಯಮ್; 25 ವರ್ಷವಾದರೆ 15 ವರ್ಷ ಪ್ರೀಮಿಯಮ್ ಕಟ್ಟುವ ಆಯ್ಕೆ ಇರುತ್ತದೆ.
ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್
ಎಲ್ಐಸಿ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ನಲ್ಲಿ ಕನಿಷ್ಠ ಮೂಲ ಖಾತ್ರಿ ಹಣವು ಪ್ರೀಮಿಯಮ್ ಪಾವತಿ ಅವಧಿ ಮತ್ತು ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. 50 ವರ್ಷದೊಳಗಿನ ವಯಸ್ಸಿನಲ್ಲಿ ಪಾಲಿಸಿ ಪಡೆದಲ್ಲಿ ವಾರ್ಷಿಕ ಪ್ರೀಮಿಯಮ್ನ ಏಳು ಪಟ್ಟು ಹಣವು ಬೇಸಿಕ್ ಸಮ್ ಅಶೂರ್ಡ್ ಆಗಿರುತ್ತದೆ. ಅಂದರೆ, ಕನಿಷ್ಠ ಖಾತ್ರಿ ಹಣ. 50 ವರ್ಷ ಮೇಲ್ಪಟ್ಟ ವಯಸ್ಸಿನಲ್ಲಿ ಪಾಲಿಸಿ ಪಡೆದರೆ ವಾರ್ಷಿಕ ಪ್ರೀಮಿಯಮ್ನ ಐದು ಪಟ್ಟು ಹಣವು ಬೇಸಿಕ್ ಸಮ್ ಅಶೂರ್ಡ್ ಆಗಿರುತ್ತದೆ.
ಮ್ಯೂಚುವಲ್ ಫಂಡ್ನಲ್ಲಿ ಸ್ಟೆಪಪ್ನಂತೆ ಪಾಲಿಸಿ ಅವಧಿಯಲ್ಲಿ ಪ್ರೀಮಿಯಮ್ ಹೆಚ್ಚಿಸಬಹುದು. ಇದರಿಂದ ಹೆಚ್ಚಿನ ರಿಟರ್ನ್ ಪಡೆಯುವ ಅವಕಾಶ ಇರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




