Insurance
ಇನ್ಷೂರೆನ್ಸ್ ಅಥವಾ ವಿಮೆ ಎಂದರೆ ನಿರ್ದಿಷ್ಟ ಆಸ್ತಿ ಮತ್ತು ಜೀವಕ್ಕೆ ಹಾನಿಯಾದರೆ ಅದಕ್ಕೆ ಪರಿಹಾರ ಸಿಗುವಂತೆ ಮಾಡಿಕೊಳ್ಳಲಾಗುವ ಒಂದು ಒಪ್ಪಂದ. ಇನ್ಷೂರೆನ್ಸ್ನಲ್ಲಿ ಹಲವು ವಿಧಗಳಿವೆ. ಅದರಲ್ಲಿ ಪ್ರಮುಖವಾದುವು ಆರೋಗ್ಯ ವಿಮೆ, ಆಸ್ತಿ ವಿಮೆ, ವಾಹನ ವಿಮೆ, ಜೀವ ವಿಮೆ. ನೀವು ಯಾವುದಕ್ಕೆ ಬೇಕಾದರೂ ಇನ್ಷುರೆನ್ಸ್ ಮಾಡಿಸಬಹುದು. ಒಂದು ಕಟ್ಟಡಕ್ಕೆ ಇನ್ಷೂರೆನ್ಸ್ ಮಾಡಿಸಬಹುದು. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವಾಗ ಮಧ್ಯದಲ್ಲಿ ಅಪಘಾತ ಸಂಭವಿಸುವ ಅಪಾಯ ಇದೆ ಎಂದಲ್ಲಿ ಅದಕ್ಕೂ ಇನ್ಷೂರೆನ್ಸ್ ಮಾಡಿಸಬಹುದು. ವಿಮೆ ಪಾಲಿಸಿ ಮಾಡಿಸುವಾಗ ನಾಮಿನಿ ಸೇರಿಸುವುದು ಕಡ್ಡಾಯ. ಅವಘಡದಲ್ಲಿ ಏನಾದರೂ ಪಾಲಿಸಿದಾರ ಮೃತಪಟ್ಟರೆ ಪರಿಹಾರ ಹಣವು ನಾಮಿನಿ ಅಥವಾ ಕುಟುಂಬ ಸದಸ್ಯರಿಗೆ ಹೋಗುತ್ತದೆ. ಭಾರತದಲ್ಲಿ ಹೆಚ್ಚಿನ ಜನರಿಗೆ ಇನ್ಷೂರೆನ್ಸ್ ಮಹತ್ವ ಗೊತ್ತಿಲ್ಲ. ಹೆಚ್ಚಿನ ಜನರು ಇನ್ಷೂರೆನ್ಸ್ ಪಾಲಿಸಿ ಹೊಂದಿಲ್ಲ. ಆಕಸ್ಮಿಕವಾಗಿ ಸಾವನ್ನಪ್ಪಿದರೆ ಅವರನ್ನು ನಂಬಿದ ಕುಟುಂಬ ಬಹುತೇಕ ಬೀದಿಗೆ ಬೀಳುವಂತಾಗುತ್ತದೆ. ಹೀಗಾಗಿ, ಆರೋಗ್ಯ ವಿಮೆ ಮತ್ತು ಜೀವ ವಿಮೆ ಬಹಳ ಮುಖ್ಯ ಎನಿಸುತ್ತದೆ
PM Fasal Bima Yojana: ಬೆಳೆ ವಿಮೆ ವ್ಯಾಪ್ತಿ ಹೆಚ್ಚಳ; ಅಪಾಯ ಮೂಲಗಳ ಪಟ್ಟಿಗೆ ಕಾಡುಪ್ರಾಣಿಗಳೂ ಸೇರ್ಪಡೆ
New modalities for PM Fasal Bima Yojana: ಮುಂಬರುವ ಬೇಸಿಗೆ ಹಂಗಾಮಿನಿಂದ ಪಿಎಂ ಫಸಲ್ ಬಿಮಾ ಯೋಜನೆಯ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ತರಲಾಗುತ್ತಿದೆ. ಬೆಳೆ ಹಾನಿಗೆ ಕಾರಣವಾಗುವ ಸ್ಥಳೀಕೃತ ಅಪಾಯಗಳ ಪಟ್ಟಿಗೆ ಕಾಡುಪ್ರಾಣಿಗಳ ದಾಳಿಯನ್ನೂ ಸೇರಿಸಲಾಗಿದೆ. ಬೇಸಿಗೆ ಬೆಳೆಗಳಿಗೆ ಇನ್ಷೂರೆನ್ಸ್ ಪ್ರೀಮಿಯಮ್ ಶೇ. 2, ಹಿಂಗಾರು ಬೆಳೆಗಳಿಗೆ ಶೇ. 1.5 ಪ್ರೀಮಿಯಮ್ ಇದೆ.
- Vijaya Sarathy SN
- Updated on: Nov 19, 2025
- 8:25 pm
ಸೌತ್ ಇಂಡಿಯನ್ ಬ್ಯಾಂಕ್ನಿಂದ ಮಹಿಳೆಯರಿಗೆ ವಿಶೇಷ ಅಕೌಂಟ್; ಭರ್ಜರಿ ಇನ್ಷೂರೆನ್ಸ್, ಎಟಿಎಂ ಇತ್ಯಾದಿ ಸೌಲಭ್ಯ
South Indian Bank offers HER account for women: ಕೇರಳ ಮೂಲದ ಖಾಸಗಿ ವಲಯದ ಸೌತ್ ಇಂಡಿಯನ್ ಬ್ಯಾಂಕ್ ಇದೀಗ ಮಹಿಳೆಯರಿಗೆಂದು HER ಅಕೌಂಟ್ ತೆರೆದಿದೆ. ಅನ್ಲಿಮಿಟೆಡ್ ಎಟಿಎಂ ವಿತ್ಡ್ರಾಯಲ್ನಿಂದ ಹಿಡಿದು ಏರ್ ಇನ್ಷೂರೆನ್ಸ್, ಪರ್ಸನಲ್ ಇನ್ಷೂರೆನ್ಸ್ ಮತ್ತಿತರ ಸೌಲಭ್ಯ ನೀಡುತ್ತದೆ. HER ಅಕೌಂಟ್ಗೆ ಆಟೊ ಸ್ವೀಪ್ ಫೆಸಿಲಿಟಿಯನ್ನೂ ನೀಡಲಾಗುತ್ತದೆ.
- Vijaya Sarathy SN
- Updated on: Nov 18, 2025
- 6:36 pm
ನೀವು ಸ್ಮೋಕಿಂಗ್ ಬಿಟ್ಟರೂ ಕಡಿಮೆ ಆಗದು ಇನ್ಷೂರೆನ್ಸ್ ಪ್ರೀಮಿಯಮ್; ಕಾರಣ ಇದು
Smoking and drinking habits' effect on insurance premium: ಆರೋಗ್ಯ ವಿಮೆ ಮಾಡಿಸಬೇಕಾದರೆ ಧೂಮಪಾನ, ಮದ್ಯಪಾನದಂತಹ ದುಶ್ಚಟಗಳು, ಈಗಾಗಲೇ ಇರುವ ಕಾಯಿಲೆಗಳ ಬಗ್ಗೆ ಮಾಹಿತಿ ಕೊಡಬೇಕು. ಯಾವುದನ್ನೇ ಮುಚ್ಚಿಟ್ಟರೂ ಇನ್ಷೂರೆನ್ಸ್ ಹಣಕ್ಕೆ ಮಾಡಲಾಗುವ ಕ್ಲೇಮ್ ರಿಜೆಕ್ಟ್ ಆಗುವ ಸಾಧ್ಯತೆ ಇರುತ್ತದೆ. ಧೂಮಪಾನ, ಮದ್ಯಪಾನ ಅಭ್ಯಾಸ ಇದ್ದವರಿಗೆ ಇನ್ಷೂರೆನ್ಸ್ ಪ್ರೀಮಿಯಮ್ ಹೆಚ್ಚಿರುತ್ತದೆ. ಒಂದು ವೇಳೆ, ಚಟ ತ್ಯಜಿಸಿದಾಗ ಪ್ರೀಮಿಯಮ್ ಕಡಿಮೆ ಆಗುತ್ತಾ?
- Vijaya Sarathy SN
- Updated on: Nov 14, 2025
- 5:39 pm
ಐದು ವರ್ಷ ಪ್ರೀಮಿಯಮ್ ಕಟ್ಟಿ, ಜೀವನ ಪೂರ್ತಿ ಆದಾಯ ಗಳಿಸಿ; ಇದು ಎಲ್ಐಸಿಯ ಜೀವನ್ ಉತ್ಸವ್ ಪಾಲಿಸಿ
LIC Jeevan Utsav policy: ಎಲ್ಐಸಿಯ ಜೀವನ್ ಉತ್ಸವ್ ಲೈಫ್ ಇನ್ಷೂರೆನ್ಸ್ ಪಾಲಿಸಿ ಜೀವನಕ್ಕೆ ಭದ್ರತೆ ಜೊತೆಗೆ ಆದಾಯ ಭದ್ರತೆಯನ್ನೂ ಕೊಡುತ್ತದೆ. ಐದು ವರ್ಷದಷ್ಟು ಕನಿಷ್ಠ ಅವಧಿಯ ಪ್ರೀಮಿಯಮ್ ಅವಕಾಶ ಇದೆ. ಕನಿಷ್ಠ ಖಾತ್ರಿ ಮೊತ್ತ 5,00,000 ರೂ ಇದೆ. ಕನಿಷ್ಠ ವಾರ್ಷಿಕ ಪೇಔಟ್ 50,000 ರೂ ಇದೆ. ಹೆಚ್ಚಿನ ಪೇಔಟ್ ಬೇಕೆಂದರೆ ಹೆಚ್ಚಿನ ಖಾತ್ರಿ ಮೊತ್ತದ ಪ್ಲಾನ್ ಆಯ್ದುಕೊಳ್ಳಬಹುದು.
- Vijaya Sarathy SN
- Updated on: Sep 18, 2025
- 12:10 pm
ಇನ್ಷೂರೆನ್ಸ್ ಮಾಹಿತಿ: ಪಾಲಿಸಿದಾರ ಮತ್ತು ನಾಮಿನಿ ಇಬ್ಬರೂ ಮೃತಪಟ್ಟರೆ ಯಾರು ಹಣ ಕ್ಲೇಮ್ ಮಾಡಬಹುದು?
Insurance rules: ಇನ್ಷೂರೆನ್ಸ್ ಪಾಲಿಸಿದಾರರು ಹಾಗೂ ನಾಮಿನಿ ಇಬ್ಬರೂ ಸತ್ತಾಗ ವಿಮಾ ಹಣ ಯಾರಿಗೆ ಹೋಗುತ್ತೆ? ಇನ್ಷೂರೆನ್ಸ್ ನಿಯಮಗಳು ಏನು ಹೇಳುತ್ತವೆ? ಎಷ್ಟು ನಾಮಿನಿಗಳನ್ನು ಹೆಸರಿಸಬಹುದು? ಪಾಲಿಸಿ ಮಧ್ಯದಲ್ಲಿ ನಾಮಿನಿಗಳ ಹೆಸರು ಬದಲಾಯಿಸಬಹುದಾ? ಈ ಬಗ್ಗೆ ನಿಯಮಗೇನಿವೆ... ಈ ಬಗ್ಗೆ ಒಂದಷ್ಟು ಮಾಹಿತಿ.
- Vijaya Sarathy SN
- Updated on: Sep 15, 2025
- 1:42 pm
ಸೆ. 22ರಿಂದ ಇನ್ಷೂರೆನ್ಸ್ಗೆ ಜಿಎಸ್ಟಿಯೇ ಇಲ್ಲ; ಅಲ್ಲೀವರೆಗೂ ಪ್ರೀಮಿಯಮ್ ಕಟ್ಟೋದು ನಿಲ್ಲಿಸಬೇಕಾ?
Can an insurance policyholder wait till Sep 22nd to pay premium?: ಕೇಂದ್ರ ಸರ್ಕಾರವು ವೈಯಕ್ತಿಕ ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳ ಪ್ರೀಮಿಯಮ್ಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಿದೆ. ಸೆಪ್ಟೆಂಬರ್ 22ರಿಂದ ಈ ಹೊಸ ಜಿಎಸ್ಟಿ ದರ ಜಾರಿಗೆ ಬರುತ್ತದೆ. ನಿಮ್ಮ ಇನ್ಷೂರೆನ್ಸ್ ಪ್ರೀಮಿಯಮ್ಗೆ ಡ್ಯೂ ಡೇಟ್ ಸೆಪ್ಟೆಂಬರ್ 22ಕ್ಕೆ ಮುಂಚೆ ಇದ್ದರೆ ಏನು ಮಾಡಬೇಕು?
- Vijaya Sarathy SN
- Updated on: Sep 4, 2025
- 12:58 pm
LIC campaign: ಎಲ್ಐಸಿ ಪಾಲಿಸಿ ಲ್ಯಾಪ್ಸ್ ಆಗಿದೆಯಾ? ರಿವೈವಲ್ಗೆ ಅ. 17ರವರೆಗೂ ಅವಕಾಶ
LIC special campaign till Oct 17th for policy revival: ನಿಗದಿತ ದಿನ ಕಳೆದು ಗ್ರೇಸ್ ಅವಧಿ ಕಳೆದರೂ ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟದೇ ಇದ್ದರೆ ಪಾಲಿಸಿ ಲ್ಯಾಪ್ಸ್ ಆಗುತ್ತದೆ. ಇದನ್ನು ರಿವೈವಲ್ ಮಾಡಬೇಕಾದರೆ ತಡ ಪಾವತಿ ಶುಲ್ಕ ಪಾವತಿಸಬೇಕು. ಇದೀಗ ಎಲ್ಐಸಿ ಸಂಸ್ಥೆಯು ಇಂಥ ಲ್ಯಾಪ್ಸ್ ಆದ ಪಾಲಿಸಿಗಳ ರಿವೈವಲ್ಗೆ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.
- Vijaya Sarathy SN
- Updated on: Aug 26, 2025
- 6:28 pm
Insurance Hack: ಈ ಟೆಕ್ನಿಕ್ ಉಪಯೋಗಿಸಿ, ಇನ್ಷೂರೆನ್ಸ್ ಪ್ರೀಮಿಯಮ್ ಉಚಿತಗೊಳಿಸಿ
Insurance hack using SIP technique: ಬ್ಯುಸಿನೆಸ್ ಕನ್ಸಲ್ಟೆಂಟ್ ಮತ್ತು ಪರ್ಸನಲ್ ಫೈನಾನ್ಸ್ ತಜ್ಞರಾದ ಪ್ರವೀಣ್ ಸೋನಿ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಇನ್ಷೂರೆನ್ಸ್ ಹ್ಯಾಕ್ ತಿಳಿಸಿದ್ದಾರೆ. ರೆಗ್ಯುಲರ್ ಪ್ಲಾನ್ ಜೊತೆಗೆ ಈಕ್ವಿಟಿಯಲ್ಲಿ 10 ವರ್ಷ ಎಸ್ಐಪಿ ನಡೆಸುವುದು ಅವರ ಟ್ರಿಕ್. ಹತ್ತು ವರ್ಷದ ಬಳಿಕ ಕೈಯಿಂದ ಇನ್ಷೂರೆನ್ಸ್ ಪ್ರೀಮಿಯಮ್ ಕಟ್ಟುವ ಭಾರ ತಪ್ಪಿಸಿಕೊಳ್ಳುವ ಐಡಿಯಾ ಅದು.
- Vijaya Sarathy SN
- Updated on: Aug 21, 2025
- 4:36 pm
ಇನ್ಷೂರೆನ್ಸ್ ಕ್ಷೇತ್ರಕ್ಕೆ ಜಿಎಸ್ಟಿ ವಿನಾಯಿತಿಯ ಧಮಾಕ; ಸರ್ಕಾರದ ಮುಂದಿದೆ ಮಹತ್ವದ ಪ್ರಸ್ತಾಪ
Health Insurance, term life insurance may get big GST exemption boost: ಇನ್ಷೂರೆನ್ಸ್ ಕ್ಷೇತ್ರವನ್ನು ಬಲಪಡಿಸಲು ಮತ್ತು ಹೆಚ್ಚು ಜನರಿಗೆ ವಿಮಾ ಸೇವೆ ತಲುಪಿಸಲು ಸರ್ಕಾರ ಜಿಎಸ್ಟಿ ಕಡಿತ ಮಾರ್ಗ ಅನುಸರಿಸಬಹುದು. ಟರ್ಮ್ ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಉತ್ಪನ್ನಗಳಿಗೆ ಜಿಎಸ್ಟಿ ವಿನಾಯಿತಿ ಮತ್ತು ರಿಯಾಯಿತಿ ನೀಡಬಹುದು. ಹಿರಿಯ ನಾಗರಿಕರ ಯಾವುದೇ ವಿಮಾ ಪಾಲಿಸಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಬಹುದು.
- Vijaya Sarathy SN
- Updated on: Aug 19, 2025
- 7:20 pm
Indian Railways: ಕೇವಲ 45 ಪೈಸೆಗೆ 10 ಲಕ್ಷ ರೂ ಇನ್ಷೂರೆನ್ಸ್; ಇದು ರೈಲು ಪ್ರಯಾಣಿಕರಿಗೆ ಸಿಗೋ ಅವಕಾಶ
Train travel insurance for 45 paise: ಭಾರತದ ರೈಲುಗಳಲ್ಲಿ ಪ್ರಯಾಣಿಸುವಾಗ ಟ್ರಾವಲ್ ಇನ್ಷೂರೆನ್ಸ್ ಪಡೆಯಬಹುದು. ಆನ್ಲೈನಲ್ಲಿ ಟಿಕೆಟ್ ಬುಕ್ ಮಾಡುವಾಗಲೇ ಇನ್ಷೂರೆನ್ಸ್ ಖರೀದಿಸಬಹುದು. ಕೇವಲ 45 ಪೈಸೆಗೆ 10 ಲಕ್ಷ ರೂ ವಿಮಾ ಕವರೇಜ್ ಇರುತ್ತದೆ. ರಿಸರ್ವೇಶನ್ ಟಿಕೆಟ್ಗೆ ಈ ಸೌಲಭ್ಯ ಇರುತ್ತದೆ. ಜನರಲ್ ಕೋಚ್ನಲ್ಲಿ ಪ್ರಯಾಣಿಸುವವರಿಗೆ ಇದು ಲಭ್ಯ ಇರೋದಿಲ್ಲ.
- Vijaya Sarathy SN
- Updated on: Aug 14, 2025
- 5:20 pm