AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Fasal Bima Yojana: ಬೆಳೆ ವಿಮೆ ವ್ಯಾಪ್ತಿ ಹೆಚ್ಚಳ; ಅಪಾಯ ಮೂಲಗಳ ಪಟ್ಟಿಗೆ ಕಾಡುಪ್ರಾಣಿಗಳೂ ಸೇರ್ಪಡೆ

New modalities for PM Fasal Bima Yojana: ಮುಂಬರುವ ಬೇಸಿಗೆ ಹಂಗಾಮಿನಿಂದ ಪಿಎಂ ಫಸಲ್ ಬಿಮಾ ಯೋಜನೆಯ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ತರಲಾಗುತ್ತಿದೆ. ಬೆಳೆ ಹಾನಿಗೆ ಕಾರಣವಾಗುವ ಸ್ಥಳೀಕೃತ ಅಪಾಯಗಳ ಪಟ್ಟಿಗೆ ಕಾಡುಪ್ರಾಣಿಗಳ ದಾಳಿಯನ್ನೂ ಸೇರಿಸಲಾಗಿದೆ. ಬೇಸಿಗೆ ಬೆಳೆಗಳಿಗೆ ಇನ್ಷೂರೆನ್ಸ್ ಪ್ರೀಮಿಯಮ್ ಶೇ. 2, ಹಿಂಗಾರು ಬೆಳೆಗಳಿಗೆ ಶೇ. 1.5 ಪ್ರೀಮಿಯಮ್ ಇದೆ.

PM Fasal Bima Yojana: ಬೆಳೆ ವಿಮೆ ವ್ಯಾಪ್ತಿ ಹೆಚ್ಚಳ; ಅಪಾಯ ಮೂಲಗಳ ಪಟ್ಟಿಗೆ ಕಾಡುಪ್ರಾಣಿಗಳೂ ಸೇರ್ಪಡೆ
ಬೆಳೆ ವಿಮೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 19, 2025 | 8:25 PM

Share

ನವದೆಹಲಿ, ನವೆಂಬರ್ 19: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ (PM Fasal Bima Yojana) ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ. ಅದರ ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ದೇಶಾದ್ಯಂತ ಹೆಚ್ಚಿನ ರೈತರು (farmers) ಕೇಳುತ್ತಾ ಬಂದಿದ್ದ ಬೇಡಿಕೆಯೊಂದನ್ನು ಪರಿಗಣಿಸಿ ಈ ಮಾರ್ಪಾಡು ಮಾಡಲಾಗಿದೆ. ಬೆಳೆ ವಿಮೆಯ (crop insurance) ವ್ಯಾಪ್ತಿಯಲ್ಲಿರುವ ಸ್ಥಳೀಯ ಅಪಾಯಗಳ (risks) ಪಟ್ಟಿಗೆ ಕಾಡು ಪ್ರಾಣಿ ದಾಳಿಯನ್ನೂ ಸೇರಿಸಲಾಗಿದೆ.

ಅಂದರೆ, ಕಾಡಾನೆ, ಮಂಗಗಳು ಇತ್ಯಾದಿ ಕಾಡುಪ್ರಾಣಿಗಳ ದಾಳಿಯಿಂದ ಬೆಳೆಗೆ ಹಾನಿಯಾದರೆ ಅದರ ನಷ್ಟವನ್ನು ವಿಮಾ ಸಂಸ್ಥೆಗಳು ತುಂಬಿಕೊಡುತ್ತವೆ. ಪಿಎಂ ಫಸಲ್ ಬಿಮಾ ಯೋಜನೆಯ ರಿಸ್ಕ್ ಪಟ್ಟಿಯಲ್ಲಿ ಈಗ ಇದನ್ನು ಹೊಸದಾಗಿ ಸೇರಿಸಲಾಗಿದೆ. ಇದು ಐದನೇ ಸೇರ್ಪಡೆಯಾಗಿದೆ.

ಹಾಗೆಯೇ, ಸ್ಥಳೀಕೃತ ವಿಪತ್ತು ಅಪಾಯಗಳ ಪಟ್ಟಿಗೆ ಭತ್ತ ಮುಳುಗಡೆಯನ್ನೂ ಸೇರಿಸಲಾಗಿದೆ. 2018ರಲ್ಲಿ ಇದನ್ನು ತೆಗೆದುಹಾಕಲಾಗಿತ್ತು. ಈಗ ಮತ್ತೆ ಇದನ್ನು ಪಟ್ಟಿಗೆ ಸೇರಿಸಿರುವುದು ಕರ್ನಾಟಕ ಸೇರಿದಂತೆ ಪ್ರವಾಹಪೀಡಿತ ರಾಜ್ಯಗಳಲ್ಲಿನ ಭತ್ತ ಬೆಳೆಗಾರರಿಗೆ ಸಮಾಧಾನ ತರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಪಿಎಂ-ಕಿಸಾನ್ 21ನೇ ಕಂತು ಬಿಡುಗಡೆ ಮಾಡಿದ ಪ್ರಧಾನಿ ಮೋದಿ: 9 ಕೋಟಿ ರೈತರಿಗೆ ಒಟ್ಟು 18,000 ಕೋಟಿ ರೂ. ಹಣ ಸಂದಾಯ

ರಾಜ್ಯ ಸರ್ಕಾರಗಳಿಂದ ಪಟ್ಟಿ ಬಿಡುಗಡೆ

ಯಾವ ಕಾಡು ಪ್ರಾಣಿಗಳಿಂದ ಬೆಳೆ ನಷ್ಟವಾದರೆ ವಿಮಾ ಪರಿಹಾರ ಸಿಗುತ್ತದೆ, ಯಾವ ಜಿಲ್ಲೆಗಳು ಪ್ರವಾಹ ಸೂಕ್ಷ್ಮವಾಗಿವೆ ಎಂಬುದನ್ನು ಅವಲೋಕಿಸಿ ರಾಜ್ಯ ಸರ್ಕಾರಗಳು ಪಟ್ಟಿ ಬಿಡುಗಡೆ ಮಾಡಲಿವೆ. ಈ ಮೇಲಿನ ಪಿಎಂ ಫಸಲ್ ಬಿಮಾ ಯೋಜನೆಯ ಮಾರ್ಪಾಡುಗಳು 2026ರ ಬೇಸಿಗೆ ಹಂಗಾಮಿನಿಂದ (Kharif season) ಜಾರಿಗೆ ಬರಲಿವೆ.

ಪಿಎಂ ಫಸಲ್ ಬಿಮಾ ಯೋಜನೆ ಬಗ್ಗೆ…

ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಗೆ ವಿಮೆ ಮಾಡಿಸಬಹುದು. ನೈಸರ್ಗಿಕ ವಿಕೋಪಗಳಿಂದ ಬೆಳೆ ನಷ್ಟವಾದರೆ ವಿಮಾ ಪರಿಹಾರ ಸಿಗುತ್ತದೆ. ಬೆಳೆ ನಾಶವಾದಾಗ ರೈತರು ಬೆಳೆ ವಿಮೆ ಆ್ಯಪ್ ಮೂಲಕ 72 ಗಂಟೆಯೊಳಗೆ ರಿಪೋರ್ಟ್ ನೀಡಬೇಕು.

ಇದನ್ನೂ ಓದಿ: ಬರಲಿದೆ ಹೊಸ ಆಧಾರ್; ಹೆಸರು, ನಂಬರ್, ವಿಳಾಸ ಮರೆಮಾಚಿರುವ ಕಾರ್ಡ್ ಸದ್ಯದಲ್ಲೇ

ಬೇಸಿಗೆ ಹಂಗಾಮಿನ ಬೆಳೆಗಳಿಗೆ ಇನ್ಷೂರೆನ್ಸ್ ಪ್ರೀಮಿಯಮ್ ಶೇ. 2 ಎಂದು ನಿಗದಿ ಮಾಡಲಾಗಿದೆ. ಅಂದರೆ, 50,000 ರೂನ ಇನ್ಷೂರೆನ್ಸ್ ಮಾಡಿಸಿದರೆ ಅದರ ಪ್ರೀಮಿಯಮ್ 1,000 ರೂ ಇರುತ್ತದೆ. ಇನ್ನು, ಹಿಂಗಾರು ಬೆಳೆಗಳಿಗೆ (Rabi crops) ಇನ್ಷೂರೆನ್ಸ್ ಪ್ರೀಮಿಯಮ್ ಶೇ. 1.5ರಷ್ಟು ಇದೆ. ವಾಣಿಜ್ಯ ಬೆಳೆಗಳಿಗೆ (commercial crops) ಶೇ. 5 ಪ್ರೀಮಿಯಮ್ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!