AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಆಮದು ನಿಷೇಧಿಸಿದ ಸೌದಿ

Saudi Arabia bans poultry meat and eggs import from India and 39 other countries: ಹಕ್ಕಿ ಜ್ವರ ಭೀತಿಯಿಂದ ಸೌದಿ ಅರೇಬಿಯಾ ದೇಶವು ಕೋಳಿ ಮಾಂಸ ಮತ್ತು ಮೊಟ್ಟೆ ಆಮದಿನ ಮೇಲೆ ನಿರ್ಬಂಧ ಹಾಕಿದೆ. ಭಾರತ, ಚೀನಾ ಸೇರಿದಂತೆ 40 ದೇಶಗಳಿಂದ ಪೂರೈಕೆಯಾಗುವ ಕೋಳಿ ಮಾಂಸ ಮತ್ತು ಮೊಟ್ಟೆಯ ಮೇಲೆ ನಿಷೇಧ ಹೇರಿದೆ. ಅನುಮೋದಿತ ವಿಧಾನಗಳನ್ನು ಅನುಸರಿಸುವ ಮತ್ತು ಮಾನ್ಯತೆ ಪಡೆದಿರುವ ಪೌಲ್ಟ್ರಿ ಫಾರ್ಮ್​ಗಳ ಉತ್ಪನ್ನಗಳಿಗೆ ಈ ನಿಷೇಧ ಕ್ರಮ ಅನ್ವಯ ಆಗದು.

ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಆಮದು ನಿಷೇಧಿಸಿದ ಸೌದಿ
ಕೋಳಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 26, 2026 | 6:55 PM

Share

ರಿಯಾಧ್, ಫೆಬ್ರುವರಿ 26: ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆ (Poultry meat and eggs) ಆಮದು ಮಾಡಿಕೊಳ್ಳುವುದನ್ನು ಸೌದಿ ಆಡಳಿತ (Saudi Arabia) ನಿಷೇಧಿಸಿದೆ. ಹಕ್ಕು ಜ್ವರ ಮತ್ತಿತರ ಪ್ರಾಣಿಜನ್ಯ ಕಾಯಿಲೆಗಳು ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸೌದಿಯ ಆಹಾರ ಪ್ರಾಧಿಕಾರವಾದ ಎಸ್​ಎಫ್​ಡಿಎ ಈ ನಿಷೇಧ ಕ್ರಮ ಜರುಗಿಸಿದೆ.

‘ಸ್ಥಳೀಯ ಮಾರುಕಟ್ಟೆಯಲ್ಲಿ ಆಹಾರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಮತ್ತು ಸಾರ್ವಜನಿಕರ ಆರೋಗ್ಯ ರಕ್ಷಿಸುವ ಗುರಿಯೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಎಸ್​ಎಫ್​ಡಿಎ ಹೇಳಿಕೆ ನೀಡಿದೆ.

ಭಾರತವಲ್ಲದೆ, ಚೀನಾ, ಬಾಂಗ್ಲಾದೇಶ, ಇಂಡೋನೇಷ್ಯ, ಇರಾನ್, ಯುಕೆ ಮತ್ತಿತರ ದೇಶಗಳಿಂದ ಪೂರೈಕೆಯಾಗುವ ಕೋಳಿ ಮಾಂಸ ಮತ್ತು ಮೊಟ್ಟೆಗಳಿಗೆ ಸೌದಿ ಪ್ರವೇಶ ಸಿಗುವುದಿಲ್ಲ.

ಇದನ್ನೂ ಓದಿ: ಭಾರತ-ಇಸ್ರೇಲ್ ನಡುವೆ ಹಲವು ಒಪ್ಪಂದಗಳಿಗೆ ಸಹಿ; ಶೀಘ್ರದಲ್ಲೇ ಎಫ್​ಟಿಎ ಏರ್ಪಡುವ ಸಾಧ್ಯತೆ

ಜಾಗತಿಕವಾಗಿ ಹಕ್ಕಿ ಜ್ವರ ಇತ್ಯಾದಿ ಪ್ರಾಣಿಜನ್ಯ ರೋಗಗಳು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. 40 ದೇಶಗಳ ಈ ಆಮದುಗಳ ಮೇಲೆ ಪೂರ್ಣ ನಿಷೇಧ ಹಾಕಲಾಗಿದ್ದರೆ, ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್ ಮೊದಲಾದ 16 ದೇಶಗಳ ಮೇಲೆ ಪಾಕ್ಷಿಕವಾದ ನಿರ್ಬಂಧಗಳನ್ನು ತರಲಾಗಿದೆ. ಅಂದರೆ, ಈ ದೇಶಗಳಲ್ಲಿರುವ ನಿರ್ದಿಷ್ಟ ಪ್ರದೇಶಗಳಿಂದ ಬರುವ ಕೋಳಿ ಮಾಂಸ ಮತ್ತು ಮೊಟ್ಟೆಗಳಿಗೆ ನಿಷೇಧ ಇರುತ್ತದೆ.

ಅನುಮೋದಿತ ವಿಧಾನಗಳನ್ನು ಅನುಸರಿಸುವ ಉತ್ಪನ್ನಗಳಿಗೆ ತಡೆ ಇಲ್ಲ…

ವೈರಸ್​ಗಳನ್ನು ಹರಡದಂತೆ ನಿಯಂತ್ರಿಸಬಲ್ಲ ಹೀಟ್ ಟ್ರೀಟ್ಮೆಂಟ್ ಮತ್ತಿತರ ಅನುಮೋದಿತ ವಿಧಾನಗಳನ್ನು ಬಳಸುವಂತಹ ಪೌಲ್ಟ್ರಿ ಫಾರ್ಮ್​ಗಳಲ್ಲಿ ತಯಾರಾದ ಕೋಳಿ ಮಾಂಸ, ಮೊಟ್ಟೆ ಮತ್ತಿತರ ಉತ್ಪನ್ನಗಳಿಗೆ ನಿಷೇಧ ಇರುವುದಿಲ್ಲ. ಈ ರೀತಿಯ ಪೌಲ್ಟ್ರಿ ಫಾರ್ಮ್​ಗಳು ತಮ್ಮ ದೇಶದ ಪ್ರಾಧಿಕಾರಗಳಿಂದ ಮಾನ್ಯಗೊಂಡಿರಬೇಕು. ಎಲ್ಲಾ ಆರೋಗ್ಯ ನಿಯಮಾವಳಿಗಳನ್ನು ಪಾಲಿಸಿರಬೇಕು ಎನ್ನುವ ನಿಯಮ ಇದೆ.

ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಗೆ 7 ವರ್ಷ; 22ನೇ ಕಂತಿನ ಹಣ ಸದ್ಯದಲ್ಲೇ

ಸೌದಿ ನಿಷೇಧದಿಂದ ಭಾರತಕ್ಕೆಷ್ಟು ನಷ್ಟ?

ಭಾರತದಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಸೌದಿ ಅರೇಬಿಯಾಗೆ ಬಹಳ ಹೆಚ್ಚು ರಫ್ತಾಗುವುದಿಲ್ಲ. ಡೈರಿ ಉತ್ಪನ್ನಗಳು, ಮೊಟ್ಟೆ, ಜೇನು ಮತ್ತಿತರ ಉತ್ಪನ್ನಗಳು 2024ರಲ್ಲಿ ಭಾರತದಿಂದ ಸೌದಿಗೆ ರಫ್ತಾಗಿದ್ದು 64 ಮಿಲಿಯನ್ ಡಾಲರ್. ಅಂದರೆ ಸುಮಾರು 500 ಕೋಟಿ ರೂ. ಇದರಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಯ ರಫ್ತು ಪ್ರಮಾಣ ಇನ್ನೂ ಕಡಿಮೆ. ಹೀಗಾಗಿ, ಸೌದಿಯ ಈ ನಿಷೇಧ ಕ್ರಮದಿಂದ ಭಾರತಕ್ಕೆ ಕೆಲವೇ ಕೋಟಿ ರೂನಷ್ಟು ರಫ್ತು ಅವಕಾಶ ಕೈತಪ್ಪಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?