AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ಚ್ 2ರವರೆಗೂ ಎಲ್​ಐಸಿ ಸ್ಪೆಷನ್ ರಿವೈವಲ್ ಕೆಂಪೇನ್; ಲ್ಯಾಪ್ಸ್ ಆದ ಪಾಲಿಸಿಗಳನ್ನು ಸಕ್ರಿಯಗೊಳಿಸಲು ಭರ್ಜರಿ ಆಫರ್

LIC special campaign till March 2nd to revive lapsed insurance policies: ಐದು ವರ್ಷದಿಂದ ಲ್ಯಾಪ್ಸ್ ಆಗಿರುವ ಎಲ್​ಐಸಿ ಪಾಲಿಸಿಗಳನ್ನು ರಿವೈವ್ ಮಾಡಲು ಸ್ಪೆಷಲ್ ಕೆಂಪೇನ್ ನಡೆದಿದೆ. ಜನವರಿ 1ರಿಂದ ಮಾರ್ಚ್ 2ರವರೆಗೆ ಈ ವಿಶೇಷ ಅಭಿಯಾನ ಇದೆ. ಈ ಕೆಂಪೇನ್​ನಲ್ಲಿ ಪಾಲಿಸಿದಾರರು ತಮ್ಮ ಲ್ಯಾಪ್ಸ್ ಆದ ಪಾಲಿಸಿ ರಿವೈವ್ ಮಾಡಲು ಕಟ್ಟಬೇಕಾದ ತಡಪಾವತಿ ಶುಲ್ಕದಲ್ಲಿ ಭರ್ಜರಿ ಡಿಸ್ಕೌಂಟ್ ಇದೆ.

ಮಾರ್ಚ್ 2ರವರೆಗೂ ಎಲ್​ಐಸಿ ಸ್ಪೆಷನ್ ರಿವೈವಲ್ ಕೆಂಪೇನ್; ಲ್ಯಾಪ್ಸ್ ಆದ ಪಾಲಿಸಿಗಳನ್ನು ಸಕ್ರಿಯಗೊಳಿಸಲು ಭರ್ಜರಿ ಆಫರ್
ಇನ್ಷೂರೆನ್ಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 02, 2026 | 8:21 PM

Share

ನವದೆಹಲಿ, ಜನವರಿ 2: ಲ್ಯಾಪ್ಸ್ ಆಗಿರುವ ಅಥವಾ ಅವಧಿಮೀರಿದ ಇನ್ಷೂರೆನ್ಸ್ ಪಾಲಿಸಿಗಳನ್ನು (Lapsed insurance policies) ಸಕ್ರಿಯಗೊಳಿಸಲು ಎಲ್​ಐಸಿ ಆಕರ್ಷಕ ಆಫರ್​ವೊಂದನ್ನು ಮುಂದಿಟ್ಟಿದೆ. ಅದಕ್ಕಾಗಿ ಎರಡು ತಿಂಗಳ ವಿಶೇಷ ಅಭಿಯಾನ ನಡೆಸುತ್ತಿದೆ. ಜನವರಿ 1ರಂದು ಶುರುವಾದ ಈ ಸ್ಪೆಷಲ್ ರಿವೈವಲ್ ಕೆಂಪೇನ್ (Special Revival Campaign) 2026ರ ಮಾರ್ಚ್ 2ರವರೆಗೂ ಇರಲಿದೆ. ಇನ್ಷೂರೆನ್ಸ್ ಪಾಲಿಸಿಗಳನ್ನು ರಿವೈವಲ್ ಮಾಡಲು ಇರುವ ತಡಪಾವತಿ ಶುಲ್ಕದಲ್ಲಿ (Late Fee) 5,000 ರೂವರೆಗೂ ವಿನಾಯಿತಿ ನೀಡಲಾಗುತ್ತಿದೆ.

ಶೇ. 30ರಷ್ಟು ಲೇಟ್ ಫೀ ಡಿಸ್ಕೌಂಟ್

ಲ್ಯಾಪ್ಸ್ ಆದ ಎಲ್​ಐಸಿ ಪಾಲಿಸಿಗಳನ್ನು ರಿವೈವ್ ಮಾಡಬೇಕೆಂದರೆ ಲೇಟ್ ಫೀ ಕಟ್ಟಬೇಕು. ಈ ಶುಲ್ಕದಲ್ಲಿ ಮುಂದಿನ ಎರಡು ತಿಂಗಳು ಶೇ. 30ರಷ್ಟು ಡಿಸ್ಕೌಂಟ್ ಸಿಗಲಿದೆ. ತಡಪಾವತಿ ಶುಲ್ಕ 10,000 ರೂ ಇದ್ದಲ್ಲಿ 3,000 ರೂ ವಿನಾಯಿತಿ ಕೊಡಲಾಗುತ್ತದೆ. ಗರಿಷ್ಠ 5,000 ರೂವರೆಗೂ ಈ ರೀತಿ ವಿನಾಯಿತಿ ಇರುತ್ತದೆ.

ಇದನ್ನೂ ಓದಿ: ಎಲ್​ಐಸಿ ಎರಡು ಹೊಸ ಪ್ಲಾನ್​ಗಳು ಬಿಡುಗಡೆ; ಮಾರ್ಕೆಟ್ ಲಿಂಕ್ ಆದ ಪ್ರೊಟೆಕ್ಷನ್ ಪ್ಲಸ್ ಪ್ಲಾನ್ ಬಗ್ಗೆ ಮಾಹಿತಿ

ಪಾಲಿಸಿ ಪ್ರೀಮಿಯಮ್ 1,00,000 ರೂವರೆಗಿನ ಮೊತ್ತವಾದರೆ ಲೇಟ್ ಫೀಯಲ್ಲಿ ಶೇ. 30ರಷ್ಟು ವಿನಾಯಿತಿ ಇರುತ್ತದೆ. ಗರಿಷ್ಠ ವಿನಾಯಿತಿ 3,000 ರೂ ಇರುತ್ತದೆ.

1 ಲಕ್ಷ ರೂನಿಂದ 3 ಲಕ್ಷ ರೂವರೆಗಿನ ಮೊತ್ತದ ಪ್ರೀಮಿಯಮ್ ಆಗಿದ್ದರೆ ತಡಪಾವತಿ ಶುಲ್ಕದಲ್ಲಿ ಶೇ. 30 ಅಥವಾ 4,000 ರೂವರೆಗೆ ವಿನಾಯಿತಿ ಸಿಗುತ್ತದೆ.

3 ಲಕ್ಷ ರೂಗಿಂತ ಮೇಲ್ಪಟ್ಟ ಮೊತ್ತದ ಪ್ರೀಮಿಯಮ್ ಆದರೆ ಶುಲ್ಕದಲ್ಲಿ 5,000 ರೂವರೆಗೆ ಕನ್ಸಿಶನ್ ಇರುತ್ತದೆ.

ಮೈಕ್ರೋ ಇನ್ಷೂರೆನ್ಸ್ ಪ್ಲಾನ್ ಆದರೆ ತಡಪಾವತಿ ಶುಲ್ಕದಲ್ಲಿ ನೂರಕ್ಕೆ ನೂರು ವಿನಾಯಿತಿ ಇರುತ್ತದೆ.

ಎಷ್ಟು ವರ್ಷದಿಂದ ಲ್ಯಾಪ್ಸ್ ಆದ ಪಾಲಿಸಿಗಳನ್ನು ರಿವೈವ್ ಮಾಡಲು ಸಾಧ್ಯ?

ಸದ್ಯ ನಡೆಯುತ್ತಿರುವ ಸ್ಪೆಷಲ್ ಅಭಿಯಾನದಲ್ಲಿ 5 ವರ್ಷದಿಂದ ಲ್ಯಾಪ್ಸ್ ಆದ ಪಾಲಿಸಿಗಳನ್ನು ರಿವೈವ್ ಮಾಡಲು ಅವಕಾಶ ಇದೆ. ಪ್ರೀಮಿಯಮ್ ಪಾವತಿ ನಿಲ್ಲಿಸಿ 5 ವರ್ಷದವರೆಗೆ ಆಗಿದ್ದರೆ ಅಂಥ ಪಾಲಿಸಿಯನ್ನು ಈ ಕೆಂಪೇನ್ ವೇಳೆ ರಿವೈವ್ ಮಾಡಲು ಸಾಧ್ಯವಿದೆ.

ಇದನ್ನೂ ಓದಿ: ಕ್ಲೇಮ್ ಆಗದೇ ಉಳಿದಿದೆ ಲಕ್ಷ ಕೋಟಿ ರೂ; ಜನರಿಗೆ ಹಣ ಮರಳಿಸಲು ಸರ್ಕಾರ ಹರಸಾಹಸ

ಜನರು ಬೇರೆ ಬೇರೆ ಕಾರಣಗಳಿಂದ ಎಲ್​ಐಸಿ ಪಾಲಿಸಿಯ ಪ್ರೀಮಿಯಮ್ ಕಟ್ಟದೇ ನಿಲ್ಲಿಸಿರಬಹುದು. ಇನ್ಷೂರೆನ್ಸ್ ಎಂಬುದು ಬಹಳ ಅಗತ್ಯವಾಗಿರುವ ಹಣಕಾಸು ರಕ್ಷಣಾ ವ್ಯವಸ್ಥೆಯಾಗಿರುವುದರಿಂದ ಅದು ವ್ಯರ್ಥವಾಗಲು ಬಿಡಬಾರದು. ಹೀಗಾಗಿ, ಇನ್ಷೂರೆನ್ಸ್ ಪಾಲಿಸಿ ಹೊಂದುವುದು ಬಹಳ ಮುಖ್ಯ. ಪಾಲಿಸಿ ಲ್ಯಾಪ್ಸ್ ಆಗಿದ್ದರೆ ಅದನ್ನು ತಪ್ಪದೇ ರಿವೈವ್ ಮಾಡುವುದು ಇನ್ನೂ ಮುಖ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ