AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌತ್ ಇಂಡಿಯನ್ ಬ್ಯಾಂಕ್​ನಿಂದ ಮಹಿಳೆಯರಿಗೆ ವಿಶೇಷ ಅಕೌಂಟ್; ಭರ್ಜರಿ ಇನ್ಷೂರೆನ್ಸ್, ಎಟಿಎಂ ಇತ್ಯಾದಿ ಸೌಲಭ್ಯ

South Indian Bank offers HER account for women: ಕೇರಳ ಮೂಲದ ಖಾಸಗಿ ವಲಯದ ಸೌತ್ ಇಂಡಿಯನ್ ಬ್ಯಾಂಕ್ ಇದೀಗ ಮಹಿಳೆಯರಿಗೆಂದು HER ಅಕೌಂಟ್ ತೆರೆದಿದೆ. ಅನ್​ಲಿಮಿಟೆಡ್ ಎಟಿಎಂ ವಿತ್​ಡ್ರಾಯಲ್​ನಿಂದ ಹಿಡಿದು ಏರ್ ಇನ್ಷೂರೆನ್ಸ್, ಪರ್ಸನಲ್ ಇನ್ಷೂರೆನ್ಸ್ ಮತ್ತಿತರ ಸೌಲಭ್ಯ ನೀಡುತ್ತದೆ. HER ಅಕೌಂಟ್​ಗೆ ಆಟೊ ಸ್ವೀಪ್ ಫೆಸಿಲಿಟಿಯನ್ನೂ ನೀಡಲಾಗುತ್ತದೆ.

ಸೌತ್ ಇಂಡಿಯನ್ ಬ್ಯಾಂಕ್​ನಿಂದ ಮಹಿಳೆಯರಿಗೆ ವಿಶೇಷ ಅಕೌಂಟ್; ಭರ್ಜರಿ ಇನ್ಷೂರೆನ್ಸ್, ಎಟಿಎಂ ಇತ್ಯಾದಿ ಸೌಲಭ್ಯ
ಸೌತ್ ಇಂಡಿಯನ್ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 18, 2025 | 6:36 PM

Share

ಬೆಂಗಳೂರು, ನವೆಂಬರ್ 18: ಸೌತ್ ಇಂಡಿಯನ್ ಬ್ಯಾಂಕ್ ಇದೀಗ ಮಹಿಳೆಯರಿಗೆಂದು ವಿಶೇಷ ಸೇವಿಂಗ್ಸ್ ಅಕೌಂಟ್ ಯೋಜನೆ ಆರಂಭಿಸಿದೆ. ಈ ಎಸ್​ಐಬಿ ಹರ್ ಅಕೌಂಟ್​ನಲ್ಲಿ (SIB HER account) ಮಹಿಳೆಯರಿಗೆ ನಾನಾ ರೀತಿಯ ಸೌಲಭ್ಯಗಳು ಮತ್ತು ಅನುಕೂಲತೆಗಳನ್ನು ನೀಡಲಾಗುತ್ತಿದೆ. ಭರ್ಜರಿ ಇನ್ಷೂರೆನ್ಸ್​ನಿಂದ (Insurance) ಹಿಡಿದು ಅನ್​ಲಿಮಿಟೆಡ್ ಎಟಿಎಂ ವಿತ್​ಡ್ರಾವರೆಗೆ ಹಲವು ಫೀಚರ್​ಗಳು ಮಹಿಳೆಯರ ಎಸ್​ಐಬಿ HER ಅಕೌಂಟ್​ನಲ್ಲಿ ಇವೆ.

ಸೌತ್ ಇಂಡಿಯನ್ ಬ್ಯಾಂಕ್ HER ಅಕೌಂಟ್​ನಲ್ಲಿರುವ ಫೀಚರ್​ಗಳು

  • ಅಕೌಂಟ್​ನಲ್ಲಿ ಒಂದು ಲಕ್ಷ ರೂ ಮೇಲ್ಪಟ್ಟ ಬ್ಯಾಲನ್ಸ್ ಇದ್ದರೆ ಆಟೊ ಸ್ವೀಪ್ ಸೌಲಭ್ಯ ಸಿಗುತ್ತದೆ.
  • ಎಟಿಎಂಗಳಲ್ಲಿ ಶುಲ್ಕರಹಿತವಾಗಿ ಎಷ್ಟು ಬಾರಿ ಬೇಕಾದರೂ ಹಣ ವಿತ್​ಡ್ರಾ ಮಾಡಬಹುದು.
  • ಒಂದು ಕೋಟಿ ರೂ ಮೊತ್ತದ ವಿಮಾನ ಅಪಘಾತ ವಿಮೆ
  • ವೈಯಕ್ತಿಕ ಅಪಘಾತಕ್ಕೆ 1 ಲಕ್ಷ ರೂ ವಿಮೆ
  • ಕಡಿಮೆ ಪ್ರೀಮಿಯಮ್​ಗೆ ಕ್ಯಾನ್ಸರ್ ಕೇರ್ ಇನ್ಷೂರೆನ್ಸ್
  • ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ
  • ಉಚಿತವಾಗಿ ಮೂರು ಫ್ಯಾಮಿಲಿ ಅಕೌಂಟ್ ಸೇರಿಸುವ ಅವಕಾಶ
  • ಲಾಕರ್ ರೆಂಟಲ್​ನಲ್ಲಿ ಶೇ. 50ರಷ್ಟು ರಿಯಾಯಿತಿ
  • ಏರ್​ಪೋರ್ಟ್ ಲಾಂಜ್ ಸೌಲಭ್ಯ

ಇದನ್ನೂ ಓದಿ: ಕೈಯಲ್ಲಿ ಹಣ ನಿಲ್ಲುತ್ತಿಲ್ಲವಾ? ಮೊದಲು ಕೈಬಿಟ್ಟುಹೋಗೋದು ಹಣ ಅಲ್ಲ; ಇದು ತಿಳಿದಿರಿ…

ಏನಿದು ಆಟೊ ಸ್ವೀಪ್ ಫೆಸಿಲಿಟಿ?

ಬ್ಯಾಂಕ್​ನಲ್ಲಿ ಆಟೊ ಸ್ವೀಪ್ ಫೆಸಿಲಿಟಿಯಲ್ಲಿ (Auto Sweep facility) ಸೇವಿಂಗ್ಸ್ ಅಕೌಂಟ್ ಮತ್ತು ಎಫ್​ಡಿ ಹಣದ ತಾಳಮೇಳ ಇರುತ್ತದೆ. ಇದರಲ್ಲಿ ಸೇವಿಂಗ್ಸ್ ಅಕೌಂಟ್ ಅನ್ನು ಫಿಕ್ಸೆಡ್ ಡೆಪಾಸಿಟ್ ಅಕೌಂಟ್​ಗೆ ಲಿಂಕ್ ಮಾಡಲಾಗಿರುತ್ತದೆ. ನಿಗದಿತ ಮಿತಿಗಿಂತ ಹೆಚ್ಚಿನ ಹಣವು ಎಸ್​ಬಿ ಅಕೌಂಟ್​ನಲ್ಲಿ ಇದ್ದರೆ ಅದನ್ನು ಎಫ್​ಡಿಗೆ ಆಟೊಮ್ಯಾಟಿಕ್ ಆಗಿ ವರ್ಗಾಯಿಸಲಾಗುತ್ತದೆ.

ಹಾಗೆಯೆ, ಎಸ್​ಬಿ ಅಕೌಂಟ್​ನಲ್ಲಿ ಬ್ಯಾಲನ್ಸ್ ನಿಗದಿತ ಮಿತಿಗಿಂತ ಕಡಿಮೆಗೆ ಬಂದರೆ, ಅಷ್ಟು ಹಣವನ್ನು ಎಫ್​ಡಿಯಿಂದ ಇಲ್ಲಿಗೆ ಟ್ರಾನ್ಸ್​ಫರ್ ಮಾಡಲಾಗುತ್ತದೆ. ಈ ರೀತಿಯ ವ್ಯವಸ್ಥೆಯಿಂದ ಗ್ರಾಹಕರ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಡಿಜಿಟಲ್ ಗೋಲ್ಡ್​ನಲ್ಲಿ ಹೂಡಿಕೆ ಸುರಕ್ಷಿತವಲ್ಲವಾ? ಸೆಬಿ ಹೇಳಿದ್ದೇನು? ಪರ್ಯಾಯಗಳೇನು?

ಸೌತ್ ಇಂಡಿಯನ್ ಬ್ಯಾಂಕ್​ನಲ್ಲಿ ಮಂತ್ಲಿ ಬ್ಯಾಲನ್ಸ್​ನಲ್ಲಿ ವಿನಾಯಿತಿ…

ಸೌತ್ ಇಂಡಿಯನ್ ಬ್ಯಾಂಕ್​ನ HER ಅಕೌಂಟ್​ನಲ್ಲಿ 50,000 ರೂ ಮಾಸಿಕ ಬ್ಯಾಲನ್ಸ್ ಇರಬೇಕೆಂಬ ನಿಯಮ ಇದೆ. ಆದರೆ, ಗ್ರಾಹಕರು ಒಂದು ಲಕ್ಷ ರೂ ಅನ್ನು ಫಿಕ್ಸೆಡ್ ಡೆಪಾಸಿಟ್​ಗೆ ಇಟ್ಟರೆ, ಮಂತ್ಲಿ ಬ್ಯಾಲನ್ಸ್ ಎಷ್ಟಿದ್ದರೂ ಚಿಂತೆ ಪಡಬೇಕಿಲ್ಲ. ಅಥವಾ ಹಿಂದಿನ ತಿಂಗಳಲ್ಲಿ ಈ ಅಕೌಂಟ್​ನ ಡೆಬಿಡ್ ಕಾರ್ಡ್​ನಿಂದ 50,000 ರೂ ವ್ಯಯಿಸಿದ್ದರೂ ಈ ತಿಂಗಳು 50,000 ರೂ ಮಾಸಿಕ ಬ್ಯಾಲನ್ಸ್ ಕಾಯ್ದುಕೊಳ್ಳುವ ಅಗತ್ಯ ಇರುವುದಿಲ್ಲ.

ಎಸ್​ಐಬಿಯ ಬೇರೆ ಸಾಮಾನ್ಯ ಅಕೌಂಟ್​ಗಳಲ್ಲಿ ಕನಿಷ್ಠ ಬ್ಯಾಲನ್ಸ್ 5,000 ರೂವರೆಗೂ ಇದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Tue, 18 November 25

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
"ಹಿಟ್ ಅಂಡ್ ರನ್ ಮಾಡಲು ನಾನೇನು ಕುಮಾರಸ್ವಾಮಿನಾ?"
ರಾಜ್ಯೋತ್ಸವ ಸಂಭ್ರಮದ ನಡುವೆ ಮದ್ಯಪ್ರಿಯರ ಎಡವಟ್ಟು
ರಾಜ್ಯೋತ್ಸವ ಸಂಭ್ರಮದ ನಡುವೆ ಮದ್ಯಪ್ರಿಯರ ಎಡವಟ್ಟು
ಬಿಜೆಪಿಗೆ ವಾಪಸಾಗಲು ಯತ್ನಾಳ್ ಹಾಕಿದ್ರು 2 ಕಂಡಿಷನ್‌! ಏನದು? ಇಲ್ಲಿದೆ ನೋಡಿ
ಬಿಜೆಪಿಗೆ ವಾಪಸಾಗಲು ಯತ್ನಾಳ್ ಹಾಕಿದ್ರು 2 ಕಂಡಿಷನ್‌! ಏನದು? ಇಲ್ಲಿದೆ ನೋಡಿ
ನವೆಂಬರ್ 2 ರಿಂದ 8 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 2 ರಿಂದ 8 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ
ಸ್ಟಿಂಗ್: ಸರ್ಕಾರ ಯಾರನ್ನು ರಕ್ಷಿಸುತ್ತಿದೆ? ಪ್ರಲ್ಹಾದ್ ಜೋಶಿ ಪ್ರಶ್ನೆ
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ವಸತಿ ಸೌಲಭ್ಯ!
ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ವಸತಿ ಸೌಲಭ್ಯ!
‘ಜೈಲರ್ 2’ ಸಿನಿಮಾನಲ್ಲಿ ನಟಿಸಿರುವ ಕನ್ನಡತಿ ಯಶಸ್ವಿನಿ ದೇವಾಡಿಗ ಜೊತೆ ಮಾತು
‘ಜೈಲರ್ 2’ ಸಿನಿಮಾನಲ್ಲಿ ನಟಿಸಿರುವ ಕನ್ನಡತಿ ಯಶಸ್ವಿನಿ ದೇವಾಡಿಗ ಜೊತೆ ಮಾತು
ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ
ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ