AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಜಿಟಲ್ ಗೋಲ್ಡ್​ನಲ್ಲಿ ಹೂಡಿಕೆ ಸುರಕ್ಷಿತವಲ್ಲವಾ? ಸೆಬಿ ಹೇಳಿದ್ದೇನು? ಪರ್ಯಾಯಗಳೇನು?

SEBI warning against digital gold investments: ಚಿನ್ನದ ಮೇಲೆ ಹೂಡಿಕೆ ಮಾಡಬೇಕೆನ್ನುವವರಿಗೆ ಡಿಜಿಟಲ್ ಗೋಲ್ಡ್ ಬಹಳ ಸುಲಭ ಆಯ್ಕೆ ಒದಗಿಸುತ್ತದೆ. ಇದರಲ್ಲಿ ಹೂಡಿಕೆ ಬಹಳ ಸುಲಭ ಮತ್ತು ಸರಳ. ಹೀಗಾಗಿ ಜನಪ್ರಿಯವಾಗಿದೆ. ಆದರೆ, ಸೆಬಿ ನವೆಂಬರ್ 8ರಂದು ಹೊರಡಿಸಿದ ಪ್ರಕಟಣೆಯಲ್ಲಿ ಡಿಜಿಟಲ್ ಗೋಲ್ಡ್​ನಲ್ಲಿ ಹೂಡಿಕೆ ಮಾಡುವುದು ಎಷ್ಟು ರಿಸ್ಕಿ ಎಂದು ತಿಳಿಸಿದೆ.

ಡಿಜಿಟಲ್ ಗೋಲ್ಡ್​ನಲ್ಲಿ ಹೂಡಿಕೆ ಸುರಕ್ಷಿತವಲ್ಲವಾ? ಸೆಬಿ ಹೇಳಿದ್ದೇನು? ಪರ್ಯಾಯಗಳೇನು?
ಡಿಜಿಟಲ್ ಗೋಲ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 09, 2025 | 12:45 PM

Share

ನವದೆಹಲಿ, ನವೆಂಬರ್ 9: ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರತೊಡಗಿದ ಬಳಿಕ ಬಹಳ ಜನರಿಗೆ ಡಿಜಿಟಲ್ ಗೋಲ್ಡ್ ಹೂಡಿಕೆ ಆಕರ್ಷಕವಾಗಿ ಕಾಣತೊಡಗಿದೆ. ಕೆಲವಾರು ವರ್ಷಗಳಿಂದಲೂ ಡಿಜಿಟಲ್ ಗೋಲ್ಡ್ ಹೂಡಿಕೆ (Digital gold investment) ಲಭ್ಯ ಇದೆಯಾದರೂ ಕಳೆದ ಕೆಲ ದಿನಗಳಿಂದ ಭಿನ್ನಾಭಿಪ್ರಾಯಗಳು ಕೇಳಿಬರತೊಡಗಿವೆ. ಇದಕ್ಕೆ ಪೂರಕವಾಗಿ ಸೆಬಿ (SEBI) ಕೂಡ ನಿನ್ನೆ (ನ. 8) ಎಚ್ಚರಿಕೆಯೊಂದನ್ನು ಹೊರಡಿಸಿದೆ. ಸೆಬಿ ಪ್ರಕಾರ, ಡಿಜಿಟಲ್ ಗೋಲ್ಡ್​ನಲ್ಲಿನ ಹೂಡಿಕೆಗಳು ಯಾವುದೇ ಕಾನೂನು ಚೌಕಟ್ಟಿಗೆ ಒಳಪಟ್ಟಿಲ್ಲ. ಅದರಲ್ಲಿ ಹೂಡಿಕೆ ಮಾಡುವುದು ಬಹಳ ಅಪಾಯಕಾರಿಯಾಗಬಹುದು ಎಂದು ವಾರ್ನಿಂಗ್ ಮೆಸೇಜ್ ನೀಡಿದೆ.

‘ಕೆಲ ಆನ್​ಲೈನ್ ಮತ್ತು ಡಿಜಿಟಲ್ ಪ್ಲಾಟ್​ಫಾರ್ಮ್​ಗಳು ಡಿಜಿಟಲ್ ಗೋಲ್ಡ್ ಅಥವಾ ಇ ಗೋಲ್ಡ್ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವ ಆಫರ್ ಅನ್ನು ಹೂಡಿಕೆದಾರರಿಗೆ ಕೊಡುತ್ತಿರುವುದು ಸೆಬಿ ಗಮನಕ್ಕೆ ಬಂದಿದೆ. ಭೌತಿಕ ಚಿನ್ನಕ್ಕೆ ಡಿಜಿಟಲ್ ಗೋಲ್ಡ್ ಪರ್ಯಾಯ ಎಂದು ಪ್ರಚಾರ ಮಾಡಲಾಗುತ್ತಿರುವುದು ತಿಳಿದುಬಂದಿದೆ’ ಎಂದು ಸೆಬಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದು, ಡಿಜಿಟಲ್ ಗೋಲ್ಡ್​ನಲ್ಲಿ ಹೂಡಿಕೆ ಮಾಡುವುದು ಎಷ್ಟು ರಿಸ್ಕಿ ಎಂಬುದನ್ನೂ ವಿವರಿಸಿದೆ.

ಡಿಜಿಟಲ್ ಗೋಲ್ಡ್ ಉತ್ಪನ್ನಗಳು ಸೆಬಿ ನಿಯಂತ್ರಿತ ಚಿನ್ನ ಉತ್ಪನ್ನಗಳಿಗಿಂತ ಭಿನ್ನವಾಗಿವೆ. ಅವುಗಳನ್ನು ಸೆಕ್ಯೂರಿಟೀಸ್ (ಷೇರು, ಬಾಂಡು ಇತ್ಯಾದಿ) ಆಗಿಯಾಗಲೀ, ಕಮಾಡಿಟಿ ಡಿರೈವೇಟಿವ್ಸ್ (ಸರಕು ನಿಷ್ಪನ್ನ) ಆಗಿಯಾಗಲೀ ಪರಿಗಣಿಸಲಾಗಿಲ್ಲ. ಸೆಬಿ ಕಣ್ಗಾವಲಿನ ಹೊರಗೆ ಅವು ಕಾರ್ಯನಿರ್ವಹಿಸುತ್ತಿವೆ. ಇಂಥ ಡಿಜಿಟಲ್ ಗೋಲ್ಡ್ ಉತ್ಪನ್ನಗಳಿಂದ ಹೂಡಿಕೆದಾರರಿಗೆ ದೊಡ್ಡಮಟ್ಟದ ರಿಸ್ಕ್ ಎದುರಾಗಬಹುದು. ಕೌಂಟರ್​ಪಾರ್ಟಿ ರಿಸ್ಕ್ (ಚಿನ್ನ ಹೊಂದಿರುವ ಕಂಪನಿಗಳು) ಹಾಗೂ ಕಾರ್ಯಾತ್ಮಕ ರಿಸ್ಕ್​ಗಳಿಗೆ (ಪ್ಲಾಟ್​ಫಾರ್ಮ್ ವೈಫಲ್ಯ) ಹೂಡಿಕೆದಾರರು ಒಳಗಾಗುವ ಸಂಭವ ಇರುತ್ತದೆ’ ಎಂದು ಸೆಬಿ ಹೇಳಿದೆ.

ಇದನ್ನೂ ಓದಿ: 2026ರ ಜನವರಿ 1ರಿಂದ ನಿಷ್ಕ್ರಿಯಗೊಳ್ಳಲಿವೆ ಈ ಪ್ಯಾನ್ ಕಾರ್ಡ್​ಗಳು; ಕಾರಣವೇನು, ಪರಿಹಾರವೇನು ಇತ್ಯಾದಿ ವಿವರ ಇಲ್ಲಿದೆ

ಡಿಜಿಟಲ್ ಗೋಲ್ಡ್ ಸ್ಕೀಮ್​ಗಳು ಹೇಗೆ ಕೆಲಸ ಮಾಡುತ್ತವೆ?

ಪೇಟಿಎಂ, ಫೋನ್​ಪೇ ಇತ್ಯಾದಿ ಹಲವು ಡಿಟಿಟಲ್ ಆ್ಯಪ್​ಗಳು ಗೋಲ್ಡ್ ಇನ್ವೆಸ್ಟ್​ಮೆಂಟ್ ಸ್ಕೀಮ್​ಗಳನ್ನು ಆಫರ್ ಮಾಡುತ್ತವೆ. ಈ ಪ್ಲಾಟ್​ಫಾರ್ಮ್​ಗಳು ಎಂಎಂಟಿಸಿ ಪಿಎಎಂಪಿ, ಸೇಫ್​ಗೋಲ್ಡ್, ಐಡಿಬಿಐ ಟ್ರಸ್ಟೀಶಿಪ್, ಬ್ರಿಂಕ್ಸ್ ಇಂಡಿಯಾ ಮೊದಲಾದ ಸಂಸ್ಥೆಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿರುತ್ತವೆ.

ನಾವು ಪೇಟಿಎಂನ ಡಿಜಿಟಲ್ ಗೋಲ್ಡ್ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದಾಗ, ಆ ಹಣವನ್ನು ಎಂಎಂಟಿಸಿ-ಪಿಎಎಂಪಿ ಇಂಡಿಯಾ ಪ್ರೈ ಲಿ ಸಂಸ್ಥೆಯು ಭೌತಿಕ ಚಿನ್ನದ ಖರೀದಿಗೆ ಬಳಸುತ್ತದೆ. ಎಂಎಂಟಿಸಿ ಎಂಬುದು ಸರ್ಕಾರಿ ಉದ್ದಿಮೆಯಾದರೆ, ಪಿಎಎಂಪಿ ಎಂಬುದು ಸ್ವಿಟ್ಜರ್​ಲ್ಯಾಂಡ್​ನ ಮೆಟಲ್ ರಿಫೈನರಿ ಸಂಸ್ಥೆ. ಇವು ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳುತ್ತವೆ. ನೀವು ಹೂಡಿಕೆಯನ್ನು ಮಾರಿದಾಗ ಈ ಸಂಸ್ಥೆಯು ಭೌತಿಕ ಚಿನ್ನವನ್ನು ಮಾರುತ್ತವೆ. ಈ ಮೂಲಕ ನಿಮ್ಮ ಹೂಡಿಕೆಗೆ ನಿಗದಿತ ರಿಟರ್ನ್ ಸಿಗುತ್ತದೆ.

ಅದೇ ರೀತಿ ಫೋನ್ ಪೇಗೆ ಸೇಫ್​ಗೋಲ್ಡ್ ಎನ್ನುವ ಸಂಸ್ಥೆ ಪಾರ್ಟ್ನರ್ ಆಗಿರುತ್ತದೆ. ಇವುಗಳ ಪರವಾಗಿ ಬ್ರಿಂಕ್ಸ್ ಇಂಡಿಯಾ ಸಂಸ್ಥೆಯು ಚಿನ್ನದ ಖರೀದಿ ಮತ್ತು ಮಾರಾಟದ ಕೆಲಸ ಮಾಡುತ್ತದೆ. ಈ ರೀತಿ ಡಿಜಿಟಲ್ ಗೋಲ್ಡ್ ಪ್ಲಾಟ್​ಫಾರ್ಮ್​ಗಳು ಕೆಲಸ ಮಾಡುತ್ತವೆ.

ಇಲ್ಲಿ ಡಿಜಿಟಲ್ ಗೋಲ್ಡ್ ಅಪಾಯಕಾರಿ ಎಂದು ಸೆಬಿ ಹೇಳಿದ್ದೇಕೆ?

ಇಲ್ಲಿ ಡಿಜಿಟಲ್ ಗೋಲ್ಡ್ ಸ್ಕೀಮ್​ನಲ್ಲಿ ಭಾಗಿಯಾಗಿರುವ ಯಾವುದೇ ಹೂಡಿಕೆ ಅಥವಾ ಸಂಸ್ಥೆಗಳು ರೆಗ್ಯುಲೇಟರಿಗೆ ಒಳಪಟ್ಟಿರುವುದಿಲ್ಲ. ಅಂದರೆ, ನಿಮ್ಮ ಹೂಡಿಕೆಗೆ ಪ್ರತಿಯಾಗಿ ಭೌತಿಕ ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳುವ ಕಂಪನಿ ವಂಚನೆ ಮಾಡಿದರೆ, ಅಥವಾ ದಿವಾಳಿ ಎದ್ದರೆ ಹೂಡಿಕೆದಾರರ ಹಣವನ್ನು ಹಿಂಪಡೆಯುವ ಕಾನೂನು ಅವಕಾಶ ಇರುವುದಿಲ್ಲ. ಡಿಜಿಟಲ್ ಗೋಲ್ಡ್ ಆಫರ್ ಮಾಡುವ ಡಿಜಿಟಲ್ ಪ್ಲಾಟ್​ಫಾರ್ಮ್ಗಳೂ ಕೂಡ ದಿವಾಳಿ ಎದ್ದರೆ ಅಥವಾ ಹ್ಯಾಕ್ ಆಗಿ ಹೂಡಿಕೆದಾರರ ಹಣ ಸಿಗದಂತಾದರೆ ಆಗಲೂ ಕೂಡ ಸೆಬಿ, ಆರ್​ಬಿಐನಂತಹ ನಿಯಂತ್ರಕ ಸಂಸ್ಥೆಗಳು ಅಸಹಾಯಕವಾಗಬಹುದು.

ಇದನ್ನೂ ಓದಿ: 24 ಕ್ಯಾರಟ್ ಚಿನ್ನದ ಮೇಲೆ ಸಿಕ್ಕಾಪಟ್ಟೆ ಹರಿದುಬಂದ ಹೂಡಿಕೆ; ಚಿನ್ನದ ಬೆಲೆ ಇಷ್ಟೊಂದು ಏರಲು ಇದಪ್ಪಾ ಕಾರಣ..!

ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಬ್ಯಾಂಕುಗಳು ಆರ್​ಬಿಐನಿಂದ ರೆಗ್ಯುಲೇಟೆಡ್ ಆಗಿರುತ್ತವೆ. ಇಲ್ಲಿ ನಿಮ್ಮ ಐದು ಲಕ್ಷ ರೂವರೆಗಿನ ಹಣಕ್ಕೆ ಆರ್​ಬಿಐ ಗ್ಯಾರಂಟಿ ಒದಗಿಸುತ್ತದೆ. ಅಂದರೆ, ಬ್ಯಾಂಕುಗಳಲ್ಲಿ ನಿಮ್ಮ ಐದು ಲಕ್ಷ ರೂ ಹಣ ಸುರಕ್ಷಿತ ಎಂಬುದು ನಿಮಗೆ ಸ್ಪಷ್ಟವಿರುತ್ತದೆ. ಅದರಲ್ಲಿ ಹೂಡಿಕೆ ಮಾಡುವುದು ಎಷ್ಟು ರಿಸ್ಕ್ ಅಥವಾ ಎಷ್ಟು ರಿಸ್ಕ್ ಇಲ್ಲ ಎಂಬುದು ನಿಮಗೆ ಗೊತ್ತಿರುತ್ತದೆ. ಆದರೆ, ಡಿಜಿಟಲ್ ಗೋಲ್ಡ್​ನಲ್ಲಿ ಈ ರೀತಿ ಹೇಳಲು ಸಾಧ್ಯವಿಲ್ಲ ಎಂಬುದು ಸೆಬಿ ನಿರ್ದೇಶನದ ಹಿಂದಿರುವ ಇಂಗಿತವಾಗಿದೆ.

ಚಿನ್ನದ ಹೂಡಿಕೆಗೆ ಪರ್ಯಾಯವೇನು?

ನೀವು ಸೆಬಿ ನಿಯಂತ್ರಿತ ಯಂತ್ರಗಳಲ್ಲಿ ಡಿಜಿಟಲ್ ಗೋಲ್ಡ್​ನಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ. ಇಟಿಎಫ್ ಗೋಲ್ಡ್, ಇಟಿಎಫ್ ಸಿಲ್ವರ್, ಇಜಿಆರ್ (ಎಲೆಕ್ಟ್ರಾನಿಕ್ ಗೋಲ್ಡ್ ರಿಸಿಪ್ಟ್) ಇಲ್ಲಿ ನೀವು ಹೂಡಿಕೆ ಮಾಡಬಹುದು. ಸೆಬಿ ನಿಯಂತ್ರಿತವಾಗಿರುವ ಮ್ಯುಚುವಲ್ ಫಂಡ್ ಸಂಸ್ಥೆಗಳು ಇವುಗಳನ್ನು ನಡೆಸುತ್ತವೆ. ಇವುಗಳಲ್ಲಿನ ಹೂಡಿಕೆಗಳು ಸೆಬಿ ನಿಯಮಗಳಿಗೆ ಒಳಪಟ್ಟಿರುವುದರಿಂದ ಒಂದಷ್ಟು ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ