ಈ ಬಾರಿಯ ಬಜೆಟ್ನಿಂದ ಇನ್ನಷ್ಟು ಸೂಕ್ಷ್ಮ ಕ್ರಮ ಎದುರು ನೋಡುತ್ತಿರುವ ಇನ್ಷೂರೆನ್ಸ್ ಸೆಕ್ಟರ್
ನವದೆಹಲಿ, ಜನವರಿ 29: ಕಳೆದ ಬಾರಿಯ ಬಜೆಟ್ನಲ್ಲಿ ಇನ್ಷೂರೆನ್ಸ್ ಕ್ಷೇತ್ರವನ್ನು ಬಲಪಡಿಸುವ ಕೆಲ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಇನ್ಷೂರೆನ್ಸ್ ಪ್ರೀಮಿಯಮ್ ಹಣಕ್ಕೆ ಜಿಎಸ್ಟಿಯಿಂದ ವಿನಾಯಿತಿ ಕೊಡುವುದು ಸೇರಿದಂತೆ ಕೆಲ ಉತ್ತಮ ಕ್ರಮ ಬಂದಿತ್ತು. ಈ ಬಜೆಟ್ನಲ್ಲಿ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲ ಪ್ರಮುಖ ಸುಧಾರಣೆಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ. ಈ ಕ್ಷೇತ್ರದ ಕೆಲ ಉದ್ಯಮಿಗಳು ಬಜೆಟ್ನಿಂದ ಏನೇನು ನಿರೀಕ್ಷಿಸುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ...
Updated on:Jan 29, 2026 | 5:54 PM

‘ಸೆಕ್ಷನ್ 80ಸಿ, 80ಸಿಸಿಸಿ, 80ಸಿಸಿಡಿ ಅಡಿಯಲ್ಲಿ ಟ್ಯಾಕ್ಸ್ ಇನ್ಸೆಂಟಿವ್ಗಳನ್ನು ನೀಡುವುದರಿಂದ ಇನ್ಷೂರೆನ್ಸ್ ಬಳಕೆ ಮತ್ತು ದೀರ್ಘಾವಧಿ ಹಣ ಉಳಿತಾಯಕ್ಕೆ ಪ್ರೇರಣೆ ಸಿಗಬಹುದು. ಟರ್ಮ್ ಇನ್ಷೂರೆನ್ಸ್ಗೆಯೇ ಪ್ರತ್ಯೇಕ ಟ್ಯಾಕ್ಸ್ ಡಿಡಕ್ಷನ್ ತರಬೇಕು’ ಎಂದು ಎಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಷೂರೆನ್ಸ್ ಸಂಸ್ಥೆಯ ಸಿಇಒ ಸುಮಿತ್ ಮದನ್ ಹೇಳಿದ್ದಾರೆ.

ಪಿಂಚಣಿದಾರರ ಆದಾಯದ ಮೇಲೆ ತೆರಿಗೆ ದೊಡ್ಡ ಹೊರೆಯಾಗುತ್ತದೆ. ಇತರ ನಿಶ್ಚಿತ ಬಡ್ಡಿ ಸ್ಕೀಮ್ಗಳಲ್ಲಿರುವಂತೆ ಬಡ್ಡಿ ಅಥವಾ ಲಾಭಕ್ಕೆ ಮಾತ್ರವೇ ಟ್ಯಾಕ್ಸ್ ಹಾಕಬಹುದು. ಇದರಿಂದ ಪಿಂಚಣಿದಾರರಿಗೆ ನಿವೃತ್ತಿ ನಂತರದ ಆದಾಯ ಹೆಚ್ಚಲು ಸಾಧ್ಯವಾಗುತ್ತದೆ ಎಂದು ಟಾಟಾ ಎಐಎ ಲೈಫ್ ಇನ್ಷೂರೆನ್ಸ್ ಸಿಇಒ ವೆಂಕಿ ಅಯ್ಯರ್ ತಿಳಿಸಿದ್ದಾರೆ.

ಲೈಫ್ ಇನ್ಷೂರೆನ್ಸ್ ದೀರ್ಘಕಾಲದ ಸಾಮಾಜಿಕ ರಕ್ಷಣೆ ಉತ್ಪನ್ನವಾಗಿದೆ. ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯುವ ಇನ್ಷೂರರ್ಗಳಿಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅವಕಾಶ ಕೊಟ್ಟರೆ ವಿಮಾ ಉತ್ಪನ್ನವನ್ನು ಮತ್ತಷ್ಟು ಕಡಿಮೆ ಬೆಲೆಗೆ ಕೊಡಬಹುದು ಎಂಬುದು ಇಂಡಿಯಾಫಸ್ಟ್ ಲೈಫ್ ಇನ್ಷೂರೆನ್ಸ್ ಸಿಇಒ ರುಷಭ್ ಗಾಂಧಿ ಅನಿಸಿಕೆ.

ಹೊಸ ಟ್ಯಾಕ್ಸ್ ರೆಜೀಮ್ನಲ್ಲಿ 80ಡಿ ಸೆಕ್ಷನ್ಗೆ ಅವಕಾಶ ಕೊಡಬೇಕು. ಸದ್ಯ ಇರುವ 1 ಲಕ್ಷ ರೂ ಡಿಡಕ್ಷನ್ ಮಿತಿ ಯಾತಕ್ಕೂ ಸಾಲದು. ಇದನ್ನು 1.5 ಲಕ್ಷ ರೂಗೆ ಏರಿಸಬೇಕು. ಪರ್ಸನಲ್ ಆ್ಯಕ್ಸಿಡೆಂಟ್ ಮತ್ತು ಟ್ರಾವಲ್ ಇನ್ಷೂರೆನ್ಸ್ ಉತ್ಪನ್ನಗಳನ್ನೂ 80ಡಿ ಸೆಕ್ಷನ್ ವ್ಯಾಪ್ತಿಗೆ ತರುವುದು ಉತ್ತಮ ಎನ್ನುತ್ತಾರೆ ನಿವಾ ಬುಪಾ ಹೆಲ್ತ್ ಇನ್ಷೂರೆನ್ಸ್ ಸಿಇಒ ಕೃಷ್ಣನ್ ರಾಮಚಂದ್ರನ್.

ಭಾರತದ ಇನ್ಷೂರೆನ್ಸ್ ಸೆಕ್ಟರ್ ಸ್ಥಿರ ಪ್ರಗತಿ ಸಾಧಿಸಿದೆ. ಆದರೆ, ಹೆಚ್ಚು ಜನರನ್ನು ತಲಪುವ ನಿಟ್ಟಿನಲ್ಲಿ ಹಿಂದುಳಿದಿದೆ. ಅದರಲ್ಲೂ ರಿಟೈರ್ಮೆಂಟ್ ಪ್ಲಾನಿಂಗ್ ಮತ್ತು ಗ್ರಾಮೀಣ ರಕ್ಷಣೆ ವಿಚಾರದಲ್ಲಿ ವಿಮಾ ಕವರೇಜ್ ಕಡಿಮೆ ಇದೆ ಎಂದು ಬಜಾಜ್ ಲೈಫ್ ಇನ್ಷೂರೆನ್ಸ್ ಸಂಸ್ಥೆಯ ಸಿಇಒ ತರುಣ್ ಚುಗ್ ಅಭಿಪ್ರಾಯಪಟ್ಟಿದ್ಧಾರೆ.
Published On - 5:53 pm, Thu, 29 January 26




